Englishहिन्दीമലയാളംதமிழ்తెలుగు

ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ ರೋಹಿತ್

Posted by:
Published: Thursday, November 7, 2013, 19:37 [IST]
 

ಕೋಲ್ಕತ್ತಾ, ನ.7: ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಗಳಿಸಿದ 14ನೇ ಭಾರತೀಯ ಕ್ರಿಕೆಟರ್ ಎಂಬ ಕೀರ್ತಿಗೆ ರೋಹಿತ್ ಶರ್ಮ ಪಾತ್ರರಾಗಿದ್ದಾರೆ. ಗುರುವಾರ ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇದಿನ ಅಮೋಘ ಶತಕ ದಾಖಲಿಸಿದ್ದಾರೆ.

ದಿನದಾಟದ ಅಂತ್ಯಕ್ಕೆ ಭಾರತವು 6 ವಿಕೆಟ್ ನಷ್ಟಕ್ಕೆ 354 ರನ್ ದಾಖಲಿಸುವ ಮೂಲಕ 120 ರನ್ನುಗಳ ಮಹತ್ವದ ಮುನ್ನಡೆ ಸಾಧಿಸಿದೆ. ಮುಂಬೈ ಆಟಗಾರ ತೆಂಡೂಲ್ಕರ್ ಕಳಪೆ ಮೊತ್ತಕ್ಕೆ ಅಂಪೈರ್ ಅವಕೃಪೆಗೆ ಒಳಗಾಗಿ ಪೆವಿಲಿಯನ್ ಸೇರಿದ ಮೇಲೆ ಮುಂಬೈನ ಮತ್ತೊಬ್ಬ ಆಟಗಾರ ರೋಹಿತ್ ಮಿಂಚಿದರು.

ಸ್ಕೋರ್ ಕಾರ್ಡ್ ನೋಡಿ

108 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ರೋಹಿತ್ ಶರ್ಮ ಇತ್ತೀಚೆಗೆ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ದ್ವಿಶತಕ ಸಿಡಿಸಿದ್ದರು.(ಬೆಂಗಳೂರಿನಲ್ಲಿ ನ.2 ರಂದು ಆಸೀಸ್ ವಿರುದ್ಧ 209 ರನ್) ನೂರು ಏಕದಿನ ಪಂದ್ಯವಾಡಿದ ಮೇಲೆ ಟೆಸ್ಟ್ ಕ್ಯಾಪ್ ಧರಿಸಿದ್ದು ಅಚ್ಚರಿಯ ವಿಷಯವಾಗಿತ್ತು.

26 ವರ್ಷದ ರೋಹಿತ್ ಶರ್ಮ ಅವರು ಈ ವರ್ಷದಲ್ಲಿ ಶಿಖರ್ ಧವನ್ ನಂತರ ಚೊಚ್ಚಲ ಪಂದ್ಯದಲ್ಲೇ ಶತಕ ಗಳಿಸಿದ ಎರಡನೇ ಆಟಗಾರ ಎನಿಸಿದ್ದಾರೆ. ಶಿಖರ್ ಧವನ್ ಅವರು ಆಸ್ಟ್ರೇಲಿಯಾ ವಿರುದ್ಧದ ಚೊಚ್ಚಲ ಪಂದ್ಯದಲ್ಲೆ 187ರನ್ ಚೆಚ್ಚಿದ್ದರು.

ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ ರೋಹಿತ್

ಚೊಚ್ಚಲ ಪಂದ್ಯದಲ್ಲಿ ಶತಕ ಸಿಡಿಸಿದ ಭಾರತೀಯ ಕ್ರಿಕೆಟರ್ಸ್
1. Lala Amarnath 118 Vs England (1933)
2. Deepak Shodhan 110 Vs Pakistan (1952)
3. Kripal Singh 100 Vs New Zealand (1955)
4. Abbas Ali Baig 112 Vs England (1959)
5. Hanumant Singh 105 Vs England (1964)
6. GR Viswanath 137 Australia (1969)
7. Surinder Amarnath 124 Vs New Zealand (1976)
8. Mohammad Azharuddin 110 Vs England (1984)
9. Pravin Amre 103 Vs South Africa (1992)
10. Sourav Ganguly 131 Vs England (1996)
11. Virender Sehwag 105 Vs South Africa (2001)
12. Suresh Raina 120 Vs Sri Lanka (2010)
13. Shikar Dhawan 187 Vs Australia (2013)
14. Rohit Sharma Vs West Indies (2013)

English summary
Rohit Sharma became the 14th Indian batsman to score a Test hundred on debut during the second day of the first Test against West Indies here on Thursday(Nov.7).
ಅಭಿಪ್ರಾಯ ಬರೆಯಿರಿ