Englishहिन्दीമലയാളംதமிழ்తెలుగు

25ನೇ ಹುಟ್ಟುಹಬ್ಬ ಸಂಭ್ರಮದಲ್ಲಿ ವಿರಾಟ್ ಕೊಹ್ಲಿ

Posted by:
Updated: Tuesday, November 5, 2013, 19:28 [IST]
 

ಬೆಂಗಳೂರು, ನ.5: ಇಂದು 25ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಟೀಂ ಇಂಡಿಯಾದ ಪ್ರತಿಭಾವಂತ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ಅಭಿಮಾನಿಗಳು ಶುಭ ಹಾರೈಕೆಗಳ ಮಹಾಪೂರ ಹರಿಸಿದ್ದಾರೆ. ಬೆಳಗ್ಗಿನಿಂದಲೂ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಹ್ಯಾಪಿಬರ್ಥ್ ಡೇ ವಿರಾಟ್ ಕೊಹ್ಲಿ ಎಂಬ ಹ್ಯಾಶ್ ಟ್ಯಾಗ್ ಟಾಪ್ ಟ್ರೆಂಡಿಂಗ್ ನಲ್ಲಿತ್ತು.

25ವರ್ಷದಲ್ಲೇ ಅನೇಕ ಸಾಧನೆ ಮಾಡಿರುವ ಕೊಹ್ಲಿ ಮುಂದಿನ ನಾಯಕ ಎಂದೇ ಬಿಂಬಿಸಲಾಗುತ್ತಿದೆ. ಸದ್ಯಕ್ಕೆ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಏಕದಿನ ಕ್ರಿಕೆಟ್ ನ ಅಗ್ರಗಣ್ಯ ಸ್ಥಾನ ಪಡೆದಿದ್ದಾರೆ. ಭಾರತದ ಉಪನಾಯಕರಾಗಿದ್ದಾರೆ. ಹತ್ತು ಹಲವು ದಾಖಲೆಗಳನ್ನು ಮುರಿದಿದ್ದಾರೆ. ಅಭಿಮಾನಿಗಳ ಶುಭ ಹಾರೈಕೆಗಳಿಗೆ ಉತ್ತರಿಸಿ ಟ್ವೀಟ್ ಮಾಡಿದ್ದಾರೆ.

2008ರಲ್ಲಿ ಮಲೇಷಿಯಾದಲ್ಲಿ ನಡೆದ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ನಾಯಕರಾಗಿದ್ದ ಕೊಹ್ಲಿ ಕಪ್ ಎತ್ತಿದ್ದರು. 2011ರ ವಿಶ್ವಕಪ್ ಟೂರ್ನಿಯಲ್ಲಿ ಶತಕ ಬಾರಿಸಿದ್ದಲ್ಲದೆ ಉತ್ತಮ ಆಟ ಪ್ರದರ್ಶಿಸಿ ಕಪ್ ಎತ್ತಿದ್ದರು.ದೆಹಲಿಯ ಆಟಗಾರ ಕೊಹ್ಲಿ 2011ರ ಜೂನ್ ನಲ್ಲಿ ಟೆಸ್ಟ್ ಕ್ರಿಕೆಟ್ ಗೆ ಕಾಲಿಟ್ಟು ಅಡಿಲೇಡ್ ನಲ್ಲಿ ಶತಕ ಬಾರಿಸಿದ್ದರು.

ಎಂಎಸ್ ಧೋನಿ, ಸಚಿನ್ ತೆಂಡೂಲ್ಕರ್ ರಂತೆ ಜಾಹೀರಾತು ಲೋಕದಲ್ಲೂ ವಿರಾಟ್ ಕೊಹ್ಲಿ ಮಿಂಚುತ್ತಿದ್ದಾರೆ. ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿ ಮಿಂಚಿದ್ದಾರೆ. ಅತ್ಯಂತ ತ್ವರಿತವಾಗಿ ಏಕದಿನ ಕ್ರಿಕೆಟ್ ನಲ್ಲಿ 17 ಶತಕ ಬಾರಿಸಿರುವ ಭಾರತೀಯ ಕ್ರಿಕೆಟರ್ ಎನಿಸಿದ್ದಾರೆ.

ಅರ್ಜುನ ಪ್ರಶಸ್ತಿ ವಿಜೇತ

ವಿರಾಟ್ ಕೊಹ್ಲಿ ಹೆಗ್ಗಳಿಕೆಗಳು ಇಂತಿದೆ
* ಏಕದಿನ ಕ್ರಿಕೆಟ್ ನಲ್ಲಿ 16 ಅಕ್ಟೋಬರ್ 2013ರಂದು ಆಸ್ಟ್ರೇಲಿಯಾ ವಿರುದ್ಧ 52 ಎಸೆತಗಳಲ್ಲಿ ಶತಕ ಗಳಿಸಿದ್ದಾರೆ
* ತ್ವರಿತವಾಗಿ 1000 ರನ್ ಗಡಿ ದಾಟಿದ್ದಾರೆ.
* ತ್ವರಿತವಾಗಿ 3000 ರನ್ ಗಡಿ ದಾಟಿದ್ದಾರೆ.
* ತ್ವರಿತವಾಗಿ 4000 ರನ್ ಗಡಿ ದಾಟಿದ್ದಾರೆ.
* ತ್ವರಿತವಾಗಿ 10 ಶತಕ ಸಿಡಿಸಿದ್ದಾರೆ
* ತ್ವರಿತವಾಗಿ 15 ಶತಕ ಸಿಡಿಸಿದ್ದಾರೆ

ಶತಕ ವೀರ

ದಕ್ಷಿಣ ಆಫ್ರಿಕಾ ಬಿಟ್ಟು ಮಿಕ್ಕ ಎಲ್ಲಾ ಟೆಸ್ಟ್ ಆಡುವ ರಾಷ್ಟ್ರಗಳ ವಿರುದ್ಧ ಶತಕ ಬಾರಿಸಿದ್ದಾರೆ. ಶ್ರೀಲಂಕಾ ವಿರುಧ ಅತ್ಯಧಿಕ 5 ನಂತರ ಆಸ್ಟ್ರೇಲಿಯಾ 3

ಬಿಎಸ್ ಎಫ್ ಗೌರವಾನ್ವಿತ

ವರ್ಷದಿಂದ ವರ್ಷಕ್ಕೆ ODIs
* 2008ರಲ್ಲಿ 5 ಪಂದ್ಯಗಳಲ್ಲಿ 31.80 ರನ್ ಸರಾಸರಿಯಂತೆ 159 ರನ್ ಹೊಡೆದಿದ್ದಾರೆ.
* 2009ರಲ್ಲಿ 10 ಪಂದ್ಯಗಳಲ್ಲಿ 54.16 ರನ್ ಸರಾಸರಿಯಂತೆ 325 ರನ್ ಹೊಡೆದಿದ್ದಾರೆ.
* 2010ರಲ್ಲಿ 25 ಪಂದ್ಯಗಳಲ್ಲಿ 47.38 ರನ್ ಸರಾಸರಿಯಂತೆ 995 ರನ್ ಹೊಡೆದಿದ್ದಾರೆ.
* 2011ರಲ್ಲಿ 34 ಪಂದ್ಯಗಳಲ್ಲಿ 47.62 ರನ್ ಸರಾಸರಿಯಂತೆ 1381 ರನ್ ಹೊಡೆದಿದ್ದಾರೆ.
* 2012ರಲ್ಲಿ 17 ಪಂದ್ಯಗಳಲ್ಲಿ 68.40 ರನ್ ಸರಾಸರಿಯಂತೆ 1026 ರನ್ ಹೊಡೆದಿದ್ದಾರೆ.
* 2013ರಲ್ಲಿ 24 ಪಂದ್ಯಗಳಲ್ಲಿ 50.00 ರನ್ ಸರಾಸರಿಯಂತೆ 850 ರನ್ ಹೊಡೆದಿದ್ದಾರೆ.

ಟೆಸ್ಟ್ ಕ್ರಿಕೆಟ್

ಆಸ್ಟ್ರೇಲಿಯಾ ವಿರುದ್ಧ 116, 107
ನ್ಯೂಜಿಲೆಂಡ್ ವಿರುದ್ಧ 103
ಇಂಗ್ಲೆಂಡ್ ವಿರುದ್ಧ 103

ಅದ್ಭುತ ರೆಕಾರ್ಡ್

ODIs ನಲ್ಲಿ ಕೊಹ್ಲಿ ಈವರೆಗೂ 17 ಶತಕ ಬಾರಿಸಿದ್ದು ಎಲ್ಲಾ ಬಾರಿ ಭಾರತ ಭರ್ಜರಿ ಜಯ ದಾಖಲಿಸಿದೆ. ಒಮ್ಮೆ ಮಾತ್ರ 2011ರಲ್ಲಿ ಇಂಗ್ಲೆಂಡ್ ವಿಜಯ ದಾಖಲಿಸಿದೆ.

Story first published:  Tuesday, November 5, 2013, 17:16 [IST]
English summary
Happy birthday Virat Kohli: At 25, he is ODI cricket's No1 batsman, Indian vice-captain and India's new blue-eyed boy. In less than four years he has amassed 17 ODI tons and is now in third place in India's highest century-makers in ODIs
ಅಭಿಪ್ರಾಯ ಬರೆಯಿರಿ