Englishहिन्दीമലയാളംதமிழ்తెలుగు

'ಸಚಿನ್' ಹೆಸರಿಗೆ ಅಪಮಾನ, ಧೋನಿ ಸಿಟ್ಟು

Posted by:
Updated: Tuesday, November 5, 2013, 17:57 [IST]
 

ಕೋಲ್ಕತ್ತಾ, ನ.5: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ 199ನೇ ಟೆಸ್ಟ್ ಪಂದ್ಯಕ್ಕಾಗಿ ಎಲ್ಲರೂ ಉತ್ಸಾಹದಿಂದ ಸಿದ್ಧರಾಗುತ್ತಿರುವ ಬೆನ್ನಲ್ಲೇ ಇಲ್ಲಿನ ಈಡನ್ ಗಾರ್ಡನ್ ಕ್ರೀಡಾಂಗಣದ ಸ್ಕೋರ್ ಬೋರ್ಡ್ ನಲ್ಲಿ 'ಸಚಿನ್' ಹೆಸರ ಬದಲಿಗೆ 'ಸಚೈನ್' ಎಂದು ಬರೆದಿದ್ದನ್ನು ಕಂಡು ಮಹೇಂದ್ರ ಸಿಂಗ್ ಧೋನಿ ಸಿಟ್ಟಿಗೆದ್ದಿದ್ದಾರೆ. ಕೂಡಲೇ ತಪ್ಪು ತಿದ್ದುವಂತೆ ಬೆಂಗಾಲ್ ಕ್ರಿಕೆಟ್ ಅಸೋಷಿಯೇಷನ್ ಗೆ ಸೂಚಿಸಿದ್ದಾರೆ.

ತಮ್ಮ ವೃತ್ತಿ ಜೀವನದ ಕೊನೆಯ ಟೆಸ್ಟ್ ಸರಣಿಯಲ್ಲಿರುವ ಸಚಿನ್ ಅವರಿಗೆ ಬೆಂಗಾಲ್ ಕ್ರಿಕೆಟ್ ಸಂಸ್ಥೆ ಅಪಮಾನ ಮಾಡಿದ್ದು, ಕೋಲ್ಕತಾದ ಈಡನ್ ಗಾರ್ಡನ್ ಮೈದಾನದ ಸ್ಕೋರ್ ಬೋರ್ಡ್ ನಲ್ಲಿ ಸಚಿನ್(sachin tendulkar) ಅವರ ಹೆಸರನ್ನು ಸಚೈನ್(sachine tendulkar) ಎಂದು ತಪ್ಪಾಗಿ ಹಾಕಲಾಗಿದೆ. ಇಂದು ಮೈದಾನಕ್ಕೆ ಅಭ್ಯಾಸಕ್ಕಾಗಿ ಆಗಮಿಸಿದ ಭಾರತ ಕ್ರಿಕೆಟ್ ತಂಡದ ಆಟಗಾರರು ಇದನ್ನು ಗಮನಿಸಿ, ಕ್ರೀಡಾಂಗಣದ ಸಿಬ್ಬಂದಿ ವಿರುದ್ಧ ಗರಂ ಆಗಿದ್ದಾರೆ.

'ಸಚಿನ್' ಹೆಸರಿಗೆ ಅಪಮಾನ, ಧೋನಿ ಸಿಟ್ಟು

ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಕ್ರೀಡಾಂಗಣದಲ್ಲಿಯೇ ಸಿಬ್ಬಂದಿಗಳನ್ನು ಮತ್ತು ಬೆಂಗಾಲ್ ಕ್ರಿಕೆಟ್ ಸಂಸ್ಥೆಯ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ. ಕೂಡಲೇ ಸಚಿನ್ ಅವರ ಹೆಸರನ್ನು ಸರಿಪಡಿಸಬೇಕು ಎಂದು ಸಿಬ್ಬಂದಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ತಮ್ಮ ತಪ್ಪನ್ನು ಅರಿತಿರುವ ಮೈದಾನದ ಸಿಬ್ಬಂದಿ ಯಾಂತ್ರಿಕ ಸ್ಕೋರ್ ಬೋರ್ಡ್ ನಲ್ಲಿ ದಾಖಲಾಗಿರುವ ಸಚಿನ್ ಅವರ ತಪ್ಪಾದ ಹೆಸರನ್ನು ಸರಿಪಡಿಸಲು ಮುಂದಾಗಿದ್ದಾರೆ.ಅಲ್ಲದೆ ಬೋರ್ಡ್ ನಿರ್ವಹಣೆ ಹೊತ್ತವರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಸಚಿನ್ ತೆಂಡೂಲ್ಕರ್ ಅವರ ಬೀಳ್ಕೊಡುಗೆ ಸರಣಿ ಎಂದೆ ಕರೆಯಲಾಗುತ್ತಿರುವ ಪ್ರವಾಸಿ ವಿಂಡೀಸ್ ತಂಡದ ವಿರುದ್ಧ ಭಾರತದ ಟೆಸ್ಟ್ ಸರಣಿಯ ಕೋಲ್ಕತ್ತಾ ಟೆಸ್ಟ್ ಪಂದ್ಯ ನಾಳೆಯಿಂದ ಆರಂಭಗೊಳ್ಳಲಿದೆ. ಸಚಿನ್ ತೆಂಡೂಲ್ಕರ್ ಅವರಿಗೆ ವಿಶೇಷ ಗೌರವ ಸಲ್ಲಿಸಲು ಮುಂದಾಗಿರುವ ಬೆಂಗಾಲ್ ಕ್ರಿಕೆಟ್ ಅಸೋಷಿಯೇಷನ್ ಸಂಸ್ಥೆ ಇದಕ್ಕಾಗಿ ಮೈದಾನದಲ್ಲಿ ಸಚಿನ್ ಅವರ ಮೇಣದ ಪ್ರತಿಮೆಯನ್ನು ಪ್ರತಿಷ್ಠಾಪಿಸಿದೆ. ಅಲ್ಲದೆ ಟಿಕೆಟ್ ನಲ್ಲಿಯೂ ಕೂಡ ಸಚಿನ್ ಅವರ ಭಾವಚಿತ್ರವನ್ನು ಮುದ್ರಿಸಿ, ಕ್ರೀಡಾಂಗಣದ ಮೂಲೆ ಮೂಲೆಯಲ್ಲಿ ಸಚಿನ್ ಅವರ ಕಟೌಟ್ ಗಳನ್ನು ನಿಲ್ಲಿಸಿದೆ. ಸಚಿನ್ ಅವರ 200ನೇ ಮತ್ತು ವೃತ್ತಿ ಜೀವನದ ಅಂತಿಮ ಟೆಸ್ಟ್ ಪಂದ್ಯ ನವೆಂಬರ್ 10ರಂದು ಮುಂಬೈನಲ್ಲಿ ಆರಂಭಗೊಳ್ಳಲಿದೆ.

Story first published:  Tuesday, November 5, 2013, 17:51 [IST]
English summary
Kolkata: What's in a name? A lot when the person in question is none other than batting great Sachin Tendulkar who will play his 199th Test match at the Eden Gardens here Wednesday(Nov.5).
ಅಭಿಪ್ರಾಯ ಬರೆಯಿರಿ