Englishहिन्दीമലയാളംதமிழ்తెలుగు

ರಣಜಿ : ಮೊದಲ ಪಂದ್ಯಕ್ಕೆ ಉತ್ತಪ್ಪ ಅಲಭ್ಯ

Posted by:
Published: Monday, November 4, 2013, 12:14 [IST]
 

ಬೆಂಗಳೂರು, ನ.4: ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯಕ್ಕೆ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ ಅಲಭ್ಯರಾಗಿದ್ದಾರೆ. ನವೆಂಬರ್ 7 ರಿಂದ ಕರ್ನಾಟಕ ತನ್ನ ರಣಜಿ ಋತು ಆರಂಭಿಸಲಿದ್ದು, ಆರ್ ವಿನಯ್ ಕುಮಾರ್ ನಾಯಕರಾಗಿ ಪುನರಾಯ್ಕೆಗೊಂಡಿದ್ದಾರೆ.

ಕರ್ನಾಟಕ ತಂಡ ನವೆಂಬರ್ 7 ರಿಂದ 10ರ ವರೆಗೆ ಮೈಸೂರಿನಲ್ಲಿ ನಡೆಯಲಿರುವ ಈ ವರ್ಷದ ತಮ್ಮ ಮೊದಲ ರಣಜಿ ಪಂದ್ಯದಲ್ಲಿ ಜಾರ್ಖಂಡ್ ತಂಡವನ್ನು ಎದುರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

ಜೆ. ಅಭಿರಾಮ್ ನೇತೃತ್ವದ ರಾಜ್ಯ ಆಯ್ಕೆ ಸಮಿತಿ ಭಾನುವಾರ ಬೆಂಗಳೂರಿನಲ್ಲಿ ಸಭೆ ಸೇರಿ 15 ಸದಸ್ಯರ ಕರ್ನಾಟಕ ತಂಡವನ್ನು ಮೊದಲ ಪಂದ್ಯಕ್ಕೆ ಆಯ್ಕೆ ಮಾಡಿದೆ.

ಕಳೆದ ವಾರ ದೆಹಲಿ ವಿರುದ್ಧದ ಕರ್ನಲ್ ಸಿ.ಕೆ. ನಾಯ್ಡು ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಮಾಯಾಂಕ್ ಅಗರ್ ವಾಲ್ ಅವರು ಹಿರಿಯ ಅನುಭವಿ ಬ್ಯಾಟ್ಸಮನ್ ರಾಬಿನ್ ಉತ್ತಪ್ಪ ಸ್ಥಾನ ತುಂಬಲಿದ್ದಾರೆ. ಉತ್ತಪ್ಪ ಸ್ನಾಯುಸೆಳೆತದಿಂದ ಚೇತರಿಸಿಕೊಳ್ಳುತ್ತಿರುವ ಪರಿಣಾಮ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ. ಉಳಿದಂತೆ, ಎಡಗೈ ಬ್ಯಾಟ್ಸಮನ್ ಅಮಿತ್ ವರ್ಮಾ ಬದಲಿಗೆ ಬಲಗೈ ದಾಂಡಿಗ ಆರ್. ಸಮರ್ಥ್ ಅವರು ಚೊಚ್ಚಲ ಬಾರಿಗೆ ರಣಜಿ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ ಎಂದು ಕೆಎಸ್ ಸಿಎ ಕಾರ್ಯದರ್ಶಿ ಜಾವಗಲ್ ಶ್ರೀನಾಥ್ ಹೇಳಿದ್ದಾರೆ.

ರಣಜಿ : ಮೊದಲ ಪಂದ್ಯಕ್ಕೆ ಉತ್ತಪ್ಪ ಅಲಭ್ಯ

ಬೌಲಿಂಗ್ ವಿಭಾಗದ ನೇತೃತ್ವವನ್ನು ವಿನಯ್ ಕುಮಾರ್ ವಹಿಸಿದ್ದು, ಎಡಗೈ ವೇಗಿ ಎಸ್. ಅರವಿಂದ್ ಮತ್ತೆ ತಂಡಕ್ಕೆ ಮರಳಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಅವರು ತಂಡದಿಂದ ಹೊರಗಿದ್ದರು. ಎಡಗೈ ಸ್ಪಿನ್ನರ್ ಅಬ್ರಾರ್ ಖಾಜಿ ಮತ್ತು ಕೆ.ಪಿ. ಅಪ್ಪಣ್ಣ ಸ್ಪಿನ್ ಜವಾಬ್ದಾರಿ ಹೊರಲಿದ್ದಾರೆ. ಮಾಯಾಂಕ್ ಅಗರವಾಲ್, ಅಬ್ರಾರ್ ಖಾಜಿ ಹಾಗೂ ಆರ್. ಸಮರ್ಥ್ ತಂಡಕ್ಕೆ ಸೇರಿರುವ ಹೊಸ ಮುಖಗಳಾಗಿವೆ.

ಕರ್ನಾಟಕ ತಂಡ ಇಂತಿದೆ: ಆರ್. ವಿನಯ್ ಕುಮಾರ್ (ನಾಯಕ), ಕೆ.ಎಲ್. ರಾಹುಲ್, ಮಾಯಾಂಕ್ ಅಗರ್ ವಾಲ್, ಕುನಾಲ್ ಕಪೂರ್, ಮನೀಷ್ ಪಾಂಡೆ, ಸ್ಟುವರ್ಟ್ ಬಿನ್ನಿ, ಸಿ.ಎಂ. ಗೌತಮ್ (ಉಪನಾಯಕ-ವಿಕೆಟ್ ಕೀಪರ್), ಗಣೇಶ್ ಸತೀಶ್, ಅಭಿಮನ್ಯು ಮಿಥುನ್, ಎಚ್.ಎಸ್. ಶರತ್, ಕೆ.ಪಿ. ಅಪ್ಪಣ್ಣ, ಶ್ರೀನಾಥ್ ಅರವಿಂದ್, ಅಬ್ರಾರ್ ಖಾಜಿ, ಕರುಣ್ ನಾಯರ್, ಆರ್. ಸಮರ್ಥ್.

ಕೋಚ್ : ಜೆ ಅರುಣ್ ಕುಮಾರ್ ಹಾಗೂ ಮನ್ಸೂರ್ ಅಲಿ ಖಾನ್
ಫಿಜಿಯೋ: ಶ್ರವಣ್
ತರಬೇತುದಾರ: ನಾಗೇಂದ್ರ ಪ್ರಸಾದ್
ವಿಡಿಯೋ ಅನಾಲಿಸ್ಟ್ : ಸಂತೋಷ್
ಮ್ಯಾನೇಜರ್ : ಕೆ ನಾರಾಯಣ

ದಟ್ಸ್ ಕ್ರಿಕೆಟ್

English summary
Robin Uthappa will miss Karnataka's opening match of the Ranji Trophy 2013-14 season due to an injury. The squad led by R Vinay Kumar will launch campaign against Jharkhand in Mysore on November 7.
ಅಭಿಪ್ರಾಯ ಬರೆಯಿರಿ