Englishहिन्दीമലയാളംதமிழ்తెలుగు

ಚಿತ್ರಗಳಲ್ಲಿ : ಸರಣಿ ಗೆದ್ದ ಭಾರತದ ವಿಜಯೋತ್ಸವ

Posted by:
Published: Sunday, November 3, 2013, 13:37 [IST]
 

ಬೆಂಗಳೂರು, ನ.3: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ 7 ಪಂದ್ಯಗಳ ಏಕದಿನ ಸರಣಿಯನ್ನು ಟೀಂ ಇಂಡಿಯಾ ಅದ್ಭುತವಾಗಿ ಗೆದ್ದುಕೊಂಡಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಕೊನೆ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 57 ರನ್ ಗಳಿಂದ ಸೋಲಿಸಿ 3-2 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ.

ಸ್ಕೋರ್ ಕಾರ್ಡ್ ನೋಡಿ

ಟೀಂ ಇಂಡಿಯಾದ ಗೆಲುವಿನ ನಿರ್ಣಾಯಕ ಪಾತ್ರ ವಹಿಸಿದ ದ್ವಿಶತಕ ವೀರ ರೋಹಿತ್ ಶರ್ಮ ಅವರು ಏಕದಿನ ಪಂದ್ಯದಲ್ಲಿ 200 ರನ್ ಹೊಡೆದಿರುವುದು ತುಂಬಾ ಖುಷಿ ಕೊಟ್ಟಿದೆ. ಸೆಹ್ವಾಗ್, ಸಚಿನ್ ಜತೆಗೆ ರೋಹಿತ್ ಹೆಸರು ಕಾಣಿಸಿಕೊಂಡಿರುವುದು ಶರ್ಮ ಗೆ ಸಂತಸ ತಂದಿದೆಯಂತೆ.

16 ಸಿಕ್ಸರ್ ವಿಶ್ವ ದಾಖಲೆ ನನ್ನ ಗುರಿಯಾಗಿರಲಿಲ್ಲ. ನಾನು ಇನ್ನಿಂಗ್ಸ್ ನ ಕೊನೆ ತನಕ ಆಡುವ ಇಚ್ಛೆ ಮಾತ್ರ ಹೊಂದಿದ್ದೆ ಆದರೆ, ಕ್ರೀಡಾಂಗಣ ವಿಸ್ತ್ರೀರ್ಣದ ಅರಿವಿದ್ದರಿಂದ ಸಿಕ್ಸ್ ಗಳನ್ನು ಹೊಡೆಯುವುದು ಸುಲಭವಾಯಿತು ಎಂದು 26 ವರ್ಷದ ಕ್ರಿಕೆಟರ್ ಹೇಳಿದ್ದಾರೆ.

ರೋಹಿತ್ ಆಟ ನೋಡಿ ಮೆಚ್ಚಿದ ಆಸೀಸ್ ನಾಯಕ ಬೈಲಿ, ಏಕದಿನ ಕ್ರಿಕೆಟ್ ನಲ್ಲಿ ಸಚಿನ್ ಅವರ ಸ್ಥಾನವನ್ನು ರೋಹಿತ್ ತುಂಬಬಲ್ಲರು ಎಂದು ಹೊಗಳಿದ್ದಾರೆ. ಮಿಚೆಲ್ ಜಾನ್ಸನ್ ಇಲ್ಲದೆ ಇದ್ದದ್ದು ನಮಗೆ ದೊಡ್ದ ಹೊಡೆತವಾಯಿತು ನನ್ನ ಬ್ಯಾಟಿಂಗ್ ಕೈಕೊಟ್ಟಿತು ಎಂದು ಬೈಲಿ ಹೇಳಿದ್ದಾರೆ. ಬೈಲಿ ಈ ಸರಣಿಯಲ್ಲಿ 470 ರನ್ ಚೆಚ್ಚಿ ನಾಯಕನ ಆಟವಾಡಿದ್ದರು. ಟಾಸ್ಮೇನಿಯ ಫಾಕ್ನರ್ ಆಟ ಪ್ರಶಂಸಿಸಿ ಉತ್ತಮ ಭವಿಷ್ಯವಿದೆ ಎಂದು ಬೈಲಿ ಹೇಳಿದ್ದಾರೆ. ಭಾರತದ ವಿಜಯೋತ್ಸವ ಹಾಗೂ ದಾಖಲೆಗಳ ಸಂಕ್ಷಿಪ್ತ ವಿವರಗಳನ್ನು ಮುಂದೆ ಓದಿ...

ಸರಣಿ ಕಪ್ ಜತೆ ಟೀಂ ಇಂಡಿಯಾ

ಆಸ್ಟ್ರೇಲಿಯಾ ವಿರುದ್ಧದ 7 ಪಂದ್ಯಗಳ ಪೈಕಿ 2 ಪಂದ್ಯ ಮಳೆಗೆ ಆಹುತಿಯಾದರೆ ಮಿಕ್ಕ ಪಂದ್ಯಗಳನ್ನು 3-2 ಅಂತರದಲ್ಲಿ ಭಾರತ ಗೆದ್ದಿದೆ. ಈ ಗೆಲುವಿನ ಮೂಲಕ27 ವರ್ಷಗಳ ನಂತರ ಸರಣಿ ವಶಪಡಿಸಿಕೊಂಡಿದೆ.

ದ್ವಿಶತಕ ವೀರ ರೋಹಿತ್

158 ಚೆಂಡುಗಳಲ್ಲಿ 209 ರನ್ ಬಾರಿಸಿ ದಾಖಲೆಯ 16 ಸಿಕ್ಸರ್ ಸಿಡಿಸಿ, 12 ಬೌಂಡರಿ ಚೆಚ್ಚಿದ ಮುಂಬೈಕರ್ ರೋಹಿತ್ ಶರ್ಮ

ರೋಹಿತ್ ಶರ್ಮ ಸಿಕ್ಸರ್

ರೋಹಿತ್ ತಮ್ಮ ದ್ವಿಶತಕದ ಇನ್ನಿಂಗ್ಸ್ ನಲ್ಲಿ 16 ಸಿಕ್ಸರ್ ಬಾರಿಸುವ ಮೂಲಕ ಶೇನ್ ವ್ಯಾಟ್ಸನ್ ಹೆಸರಿನಲ್ಲಿದ್ದ 15 ಸಿಕ್ಸರ್ ಗಳ ದಾಖಲೆಯನ್ನು ಅಳಿಸಿ ಹಾಕಿದರು.

ಏಕದಿನ ಕ್ರಿಕೆಟ್ ದ್ವಿಶತಕಗಳು

ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಇಲ್ಲಿವರೆಗೂ ಮೂರು ದ್ವಿಶತಕಗಳು ದಾಖಲಾಗಿವೆ. ಮೂರು ಕೂಡಾ ಭಾರತೀಯ ಕ್ರಿಕೆಟರ್ ಗಳು ಸ್ಕೋರ್ ಮಾಡಿರುವುದು ವಿಶೇಷ.
*ವೀರೇಂದ್ರ ಸೆಹ್ವಾಗ್ 149 ಎಸೆತಗಳಲ್ಲಿ 219 ರನ್ (26 ಬೌಂಡರಿ, 7 ಸಿಕ್ಸ್)
* ರೋಹಿತ್ ಶರ್ಮ 158 ಎಸೆತಗಳಲ್ಲಿ 209 ರನ್ (12 ಬೌಂಡರಿ, 16 ಸಿಕ್ಸ್)
* ಸಚಿನ್ ತೆಂಡೂಲ್ಕರ್ 147 ಎಸೆತಗಳಲ್ಲಿ 200 ನಾಟೌಟ್ ( 25 ಬೌಂಡರಿ, 3 ಸಿಕ್ಸ್)

ಅತಿ ಹೆಚ್ಚು ಸಿಕ್ಸರ್

* ಭಾರತದ ರೋಹಿತ್ ಶರ್ಮ 16 ಸಿಕ್ಸ್
* ಆಸ್ಟ್ರೇಲಿಯಾದ ಶೇನ್ ವಾಟ್ಸನ್ 15 ಸಿಕ್ಸ್
*ವೆಸ್ಟ್ ಇಂಡೀಸ್ ನ ಮಾರ್ಷಲ್ 12
* ಶ್ರೀಲಂಕಾದ ಸನತ್ ಜಯಸೂರ್ಯ 11 ಸಿಕ್ಸ್
* ಪಾಕಿಸ್ತಾನದ ಶಹೀದ್ ಅಫ್ರಿದಿ 11
* ಭಾರತದ ಎಂಎಸ್ ಧೋನಿ 10

English summary
It rained sixes and records tumbled at the M Chinnaswamy Stadium here on Saturday(Nov.2). Rohit Sharma blasted only the third ever One Day International double hundred to pilot India to a series-clinching 57-run victory.
ಅಭಿಪ್ರಾಯ ಬರೆಯಿರಿ