Englishहिन्दीമലയാളംதமிழ்తెలుగు

ವಿಂಡೀಸ್ ಸರಣಿ: ಜಡೇಜ, ಜಹೀರ್ ಸಚಿನ್ ಜತೆ ಆಡಲ್ಲ

Posted by:
Published: Thursday, October 31, 2013, 17:21 [IST]
 

ಮುಂಬೈ, ಅ.31: ಸಚಿನ್ ತೆಂಡೂಲ್ಕರ್ ಅವರ ಬೀಳ್ಕೊಡುಗೆ ಸರಣಿ ಎಂದೇ ಬಿಂಬಿತವಾಗಿರುವ ವೆಸ್ಟ್ ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ಕಳಪೆ ಬೌಲಿಂಗ್ ನಿಂದಾಗಿ ಟೀಕೆಗೆ ಗುರಿಯಾಗಿದ್ದ ಇಶಾಂತ್ ಶರ್ಮಾ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ.

ಮುಂಬೈನಲ್ಲಿ ಸಭೆ ಸೇರಿದ್ದ ಸಂದೀಪ್ ಪಾಟೀಲ್ ನೇತೃತ್ವದ ಆಯ್ಕೆ ಸಮಿತಿ, ವೆಸ್ಟ್ ಇಂಡೀಸ್ ಸರಣಿಗೆ 15 ಸದಸ್ಯರ ತಂಡವನ್ನು ಪ್ರಕಟಸಿದೆ. ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ತಮ್ಮ ಕಳಪೆ ಬೌಲಿಂಗ್ ನಿಂದಾಗಿ ಅಂತಿಮ ಎರಡು ಪಂದ್ಯಗಳಿಂದ ಹೊರಗುಳಿದಿರುವ ಇಶಾಂತ್ ಶರ್ಮಾ ಅವರನ್ನು ವಿಂಡೀಸ್ ವಿರುದ್ಧದ ಸರಣಿಗೆ ಆಯ್ಕೆ ಮಾಡಿರುವುದು ಅಚ್ಚರಿಯನ್ನುಂಟು ಮಾಡಿದೆ.

ಪ್ರಸ್ತುತ ರಣಜಿ ಕ್ರಿಕೆಟ್ ನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿ ಫಾರ್ಮ್‌ಗೆ ಮರಳಿರುವ ವೇಗದ ಬೌಲರ್ ಜಹೀರ್ ಖಾನ್ ಅವರನ್ನು ತಂಡದಿಂದ ಹೊರಗಿಡಲಾಗಿದ್ದು, ಕಳಪೆ ಫಾರ್ಮ್ ನಿಂದ ಬಳಲುತ್ತಿರುವ ಸ್ಫೋಟಕ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್, ಆರಂಭಿಕ ಆಟಗಾರ ಗೌತಮ್ ಗಂಭೀರ್ ಮತ್ತು ಮಧ್ಯಮ ಕ್ರಮಾಂಕದ ಆಟಗಾರ ಸುರೇಶ್ ರೈನಾ ಅವರಿಗೆ ಕೋಕ್ ನೀಡಲಾಗಿದೆ. ಉಳಿದಂತೆ ಭುಜದ ಗಾಯದಿಂದ ಬಳಲುತ್ತಿರುವ ಆಲ್ ರೌಂಡರ್ ರವೀಂದ್ರ ಜಡೇಜಾ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಅವರ ಸ್ಥಾನಕ್ಕೆ ಅಮಿತ್ ಮಿಶ್ರಾಗೆ ಸ್ಥಾನ ಕಲ್ಪಿಸಲಾಗಿದೆ.

ವಿಂಡೀಸ್ ಸರಣಿ: ಜಡೇಜ, ಜಹೀರ್ ಸಚಿನ್ ಜತೆ ಆಡಲ್ಲ

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಅವರನ್ನು ವಿಂಡೀಸ್ ಸರಣಿಗೆ ಮುಂದುವರೆಸಿದ್ದು, ಬೌಲಿಂಗ್‌ನಲ್ಲಿ ಗಮನಾರ್ಹ ಸಾಧನೆ ಮಾಡಿರುವ ಮಹಮದ್ ಶಮಿಯನ್ನು ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾಗಿದೆ.

ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಟೆಸ್ಟ್ ಸರಣಿ ಮುಂಬರುವ ನವೆಂಬರ್ 10ರಿಂದ ಪ್ರಾರಂಭವಾಗಲಿದ್ದು, ಆರಂಭಿಕ ಪಂದ್ಯ ಕೊಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯಲಿದೆ. ಸಚಿನ್ ತೆಂಡೂಲ್ಕರ್ ಅವರ 200ನೇ ಮತ್ತು ಅಂತಿಮ ಪಂದ್ಯ ನವೆಂಬರ್ 18ರಂದು ಅವರ ತವರು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.


15 ಸದಸ್ಯರ ಆಟಗಾರರ ಪಟ್ಟಿ ಇಂತಿದೆ.

ಮಹೇಂದ್ರ್ ಸಿಂಗ್ ಧೋನಿ (ನಾಯಕ)

ಶಿಖರ್ ಧವನ್

ವಿರಾಟ್ ಕೊಹ್ಲಿ

ಮುರಳಿ ವಿಜಯ್

ಚೇತೇಶ್ವರ ಪೂಜಾರ

ಸಚಿನ್ ತೆಂಡೂಲ್ಕರ್

ಆರ್.ಅಶ್ವಿನ್

ಭುವನೇಶ್ವರ ಕುಮಾರ್

ಪ್ರಗ್ಯಾನ್ ಓಜಾ

ಅಮಿತ್ ಮಿಶ್ರಾ

ಅಜಿಂಕ್ಯಾ ರಹಾನೆ

ಉಮೇಶ್ ಯಾದವ್

ಮಹಮದ್ ಶಮಿ

ರೋಹಿತ್ ಶರ್ಮಾ

ಇಶಾಂತ್ ಶರ್ಮಾ

English summary
Batsman Rohit Sharma seems set for his long-awaited Test debut while the woefully out-of-form pacer Ishant Sharma managed to retain his place in the 15-member Indian squad for Sachin Tendulkar's farewell Test series against the West Indies starting November 6.
ಅಭಿಪ್ರಾಯ ಬರೆಯಿರಿ