Englishहिन्दीമലയാളംதமிழ்తెలుగు

ಮುಖ್ಯಾಂಶ :ಭಾರತದ 'ವಿರಾಟ್' ಜಯ, ಆಸೀಸ್ ಮತ್ತೆ ಆಘಾತ

Posted by:
Updated: Thursday, October 31, 2013, 10:46 [IST]
 

ನಾಗಪುರ, ಅ.30: ವಿದರ್ಭ ಕ್ರಿಕೆಟ್ ಅಸೋಸಿಯೇಷನ್ಸ್ (VCA) ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಭಾರತೀಯ ಬೌಲರ್ ಗಳನ್ನು ಬೈಲಿ-ವಾಟ್ಸನ್ ಜೋಡಿ ಹಿಗ್ಗಾಮುಗ್ಗಾ ಥಳಿಸಿದ್ದಕ್ಕೆ ಪ್ರತಿಯಾಗಿ ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಸರಿಯಾದ ಸೇಡು ತೀರಿಸಿಕೊಂಡರು. ಜೈಪುರದಲ್ಲಿ 359 ರನ್ ಗಡಿ ದಾಟಿದ್ದ ಭಾರತ ಮತ್ತೊಮ್ಮೆ 350 ರನ್ ಗುರಿಯನ್ನು ಸಾಧಿಸಿತು. ಇನ್ನೂ ಮೂರು ಎಸೆತಗಳು ಬಾಕಿ ಇರುವಂತೆ 351 ರನ್ ತಲುಪಿ ವಿಜಯೋತ್ಸವ ಆಚರಿಸಿತು.

ಚೇಸಿಂಗ್ ಮಾಡುವುದರಲ್ಲಿ ನಾಯಕ ಧೋನಿಗೆ ಸಮನಾಗಿ ನಿಲ್ಲಬಲ್ಲೆ ಎಂಬುದನ್ನು ಉಪ ನಾಯಕ ವಿರಾಟ್ ಕೊಹ್ಲಿ ಮತ್ತೊಮ್ಮೆ ನಿರೂಪಿಸಿದರು. ಚೇಸ್ ಮಾಡುವಾಗ 11 ಶತಕ ಬಾರಿಸಿರುವ ಕೊಹ್ಲಿ ಒಟ್ಟಾರೆ 17ನೇ ಶತಕ ದಾಖಲಿಸಿದರು. ಶಿಖರ್ ಧವನ್ ಅವರ ಶತಕದ ನೆರವಿನಿಂದ ಭಾರತ ಜಯದ ನಗೆ ಬೀರಿತು.

ಮುಖ್ಯಾಂಶ :ಭಾರತದ 'ವಿರಾಟ್' ಜಯ, ಆಸೀಸ್ ಮತ್ತೆ ಆಘಾತ

ಪಂದ್ಯದ ಮುಖ್ಯಾಂಶಗಳು ಇಲ್ಲಿದೆ:

ಭಾರತದ ಇನ್ನಿಂಗ್ಸ್:
ಬೌಂಡರಿ :
40
ಸಿಕ್ಸರ್ : 4
ಟಾಪ್ ಸ್ಕೋರರ್ : ವಿರಾಟ್ ಕೊಹ್ಲಿ 115 ಔಟಾಗದೆ ( 66 ಎಸೆತ, 18 ಬೌಂಡರಿ, 1 ಸಿಕ್ಸರ್)

# ವಿರಾಟ್ ಕೊಹ್ಲಿ ರನ್ ಚೇಸ್ ಮಾಡುವಾಗ 11 ಶತಕ ಹೊಡೆದಿದ್ದು ಎಲ್ಲಾ ಪಂದ್ಯಗಳಲ್ಲೂ ಭಾರತ ಗೆದ್ದಿದೆ.
# ಕೊಹ್ಲಿ ಸತತ ಐದನೇ ಬಾರಿಗೆ 50 ಅಥವಾ ಹೆಚ್ಚಿನ ಮೊತ್ತ ದಾಖಲಿಸಿದ್ದಾರೆ.
# ಕೊಹ್ಲಿ 61 ಎಸೆತಗಳಲ್ಲಿ 100 ರನ್ ಚೆಚ್ಚಿದರು.
# ಶಿಖರ್ ಧವನ್ ಹೊಡೆದಿರುವ ಎಲ್ಲಾ 4 ಶತಕಗಳು ಇದೇ ವರ್ಷ ದಾಖಲಾಗಿದೆ.
# ಶಿಖರ್ ಧವನ್ 102 ಎಸೆತದಲ್ಲಿ 11 ಬೌಂಡರಿ ಬಾರಿಸಿ 100 ರನ್(11 ಬೌಂಡರಿ) ದಾಖಲಿಸಿದರು.
# ಧವನ್ ಹಾಗೂ ರೋಹಿತ್ ಶರ್ಮ ಮೊದಲ ವಿಕೆಟ್ ಗೆ 29.3 ಓವರ್ ಗಳಲ್ಲಿ 178 ರನ್ ಹೊಡೆದರು.
#ರೋಹಿತ್ ಶರ್ಮ 89 ಎಸೆತಗಳಲ್ಲಿ 79 ರನ್ (7 ಬೌಂಡರಿ, 3 ಸಿಕ್ಸ್)
# ಮಿಚೆಲ್ ಜಾನ್ಸನ್ ಬೌಲಿಂಗ್ ನಲ್ಲಿ ಮೂರು ಎಸೆತ ಎದುರಿಸಿದ ಯುವರಾಜ್ ಕ್ಲೀನ್ ಬೋಲ್ಡ್ ಆದರು.
# ಭಾರತದ 50 : 57 ಎಸೆತ, 100 : 115, 150: 161, 200: 196, 200 : 196, 250 : 226, 300 : 265, 350 : 298
# ಭಾರತ ವಿನಯ್ ಕುಮಾರ್, ಜಯದೇವ್ ಉನದ್ಕತ್ ಬದಲಿಗೆ ಭುವನೇಶ್ವರ್ ಕುಮಾರ್, ಅಮಿತ್ ಮಿಶ್ರಾರನ್ನು ತಂಡದಲ್ಲಿ ಸೇರಿಸಿಕೊಂಡಿತು.

ಆಸ್ಟ್ರೇಲಿಯಾ ಇನ್ನಿಂಗ್ಸ್ :
ಬೌಂಡರಿಗಳು : 39
ಸಿಕ್ಸರ್ : 9

ಟಾಪ್ ಸ್ಕೋರರ್ : ಜಾರ್ಜ್ ಬೈಲಿ 156 ರನ್ (114 ಎಸೆತ, 13 X4 , 6X6)
ವಿಕೆಟ್ ಪಡೆದವರು: ಆರ್ ಅಶ್ವಿನ್ (2/64 10 ಓವರ್ ಗಳಲ್ಲಿ) ರವೀಂದ್ರ ಜಡೇಜ (2/68 10 ಓವರ್ ಗಳಲ್ಲಿ)
# ನಾಯಕ ಜಾರ್ಜ್ ಬೈಲಿ (156) ಹಾಗೂ ಶೇನ್ ವ್ಯಾಟ್ಸನ್ (102) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ತಂಡ ಏಕದಿನ ಅಂತಾರಾಷ್ಟ್ರೀಯ ಸರಣಿಯ 6ನೇ ಪಂದ್ಯದಲ್ಲಿ 50 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 350 ರನ್ ಗಳಿಸಿದೆ.
# ಭಾರತದಲ್ಲಿ ಆಸ್ಟ್ರೇಲಿಯಾದ ದಾಖಲಿಸಿದ ಬೃಹತ್ ಮೊತ್ತಗಳಲ್ಲಿ ಇದು ಒಂದು 350/6, 50 ಓವರ್
# ಜಾರ್ಜ್ ಬೈಲಿ 84 ಎಸೆತಗಳಲ್ಲಿ 100 ರನ್ ದಾಖಲಿಸಿದರು.
# ಭಾರತದ ವಿರುದ್ಧ ಆಸ್ಟ್ರೇಲಿಯಾದ ನಾಯಕ ಬಾರಿಸಿರುವ ಅತ್ಯಧಿಕ ರನ್(156 ರನ್) ಇದಾಗಿದೆ.
# ಇಲ್ಲಿ ತನಕ ನಾಯಕರಾಗಿದ್ದಾಗ ರಿಕಿ ಪಾಂಟಿಂಗ್ ಭಾರತದ ವಿರುದ್ಧ 140 ರನ್ ಅತ್ಯಧಿಕ ಎನಿಸಿತ್ತು.
# ಇದು ಬೈಲಿ ಅವರ ಎರಡನೇ ಏಕದಿನ ಶತಕವಾಗಿದ್ದು ಅವರ ವೈಯಕ್ತಿಕ ಅತ್ಯಧಿಕ ಸ್ಕೋರ್ ಕೂಡಾ ಆಗಿದೆ.
# ಸರಣಿಯಲ್ಲಿ 474 ರನ್ (1 ಶತಕ, 3 ಅರ್ಧ ಶತಕ(5 ಇನ್ನಿಂಗ್ಸ್), 1148.50 ಸರಾಸರಿ) ಸರಣಿಯಲ್ಲಿ ಅತ್ಯಧಿಕ ರನ್ ಜಿಂಬಾಬ್ವೆ ಹಾಮಿಲ್ಟನ್ ಮಸಕಜ್ಡ ಹೆಸರಿನಲ್ಲಿತ್ತು(467) ಈಗ ಬೈಲಿ ದಾಖಲೆ ಮುರಿದಿದ್ದಾರೆ.

ಮುಖ್ಯಾಂಶ :ಭಾರತದ 'ವಿರಾಟ್' ಜಯ, ಆಸೀಸ್ ಮತ್ತೆ ಆಘಾತ

# ನಾಯಕನಾಗಿ ಬೈಲಿ 467 ರನ್ ಸ್ಕೋರ್ ಮಾಡುವ ಮೂಲಕ ಉಭಯ ದೇಶಗಳ ಏಕದಿನ ಸರಣಿಯಲ್ಲಿ ಅತ್ಯಧಿಕ ರನ್ ಗಳಿಸಿದ ನಾಯಕ ಎನಿಸಿದ್ದಾರೆ. ಈ ಮುಂಚೆ ದಕ್ಷಿಣ ಆಫ್ರಿಕಾದ ಎಬಿ ಡಿವಿಲೆಯರ್ಸ್ ಹೆಸರಿನಲ್ಲಿ ಈ ದಾಖಲೆ ಇತ್ತು. ಎಬಿಡಿ 367 ರನ್ ಹೊಡೆದಿದ್ದರು.
# ಬೈಲಿ 2013 ಕ್ರಿಕೆಟ್ ವರ್ಷದಲ್ಲಿ 21 ಪಂದ್ಯಗಳಲ್ಲಿ (1094 ರನ್ 19 ಇನ್ನಿಂಗ್ಸ್) ಮಾಡಿದ್ದಲ್ಲದೆ ವರ್ಷದ ಲೀಡಿಂಗ್ ರನ್ ಸ್ಕೋರರ್
# ಭಾರತದ ನಾಲ್ಕು ಸ್ಪಿನ್ನರ್ ಗಳು 30 ಓವರ್ ಗಳಲ್ಲಿ 210 ರನ್ ಹೊಡೆಸಿಕೊಂಡು 4 ವಿಕೆಟ್ ಗಳಿಸಿದರು.
# ಜಡೇಜ 85ನೇ ಪಂದ್ಯದಲ್ಲಿ 100ನೇ ವಿಕೆಟ್ ಕಿತ್ತರು.
#ಆಸ್ಟೇಲಿಯಾದ 50 : 80 ಎಸೆತಗಳು, 100 :137, 150: 168, 200: 202, 250:242, 300: 273, 350 : 303
# ಆಸ್ಟ್ರೇಲಿಯಾ ತಂಡದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿರಲಿಲ್ಲ.

Story first published:  Wednesday, October 30, 2013, 17:57 [IST]
English summary
Highlights: 6th ODI: India Vs Australia in Nagpur : Team India produced yet another stunning run chase. After overhauling 359 in Jaipur, tonight they scaled down 350 to win by six wickets.
ಅಭಿಪ್ರಾಯ ಬರೆಯಿರಿ