Englishहिन्दीമലയാളംதமிழ்తెలుగు

ವಿಸ್ಡನ್ ಶ್ರೇಷ್ಠ XI ತಂಡದಲ್ಲಿ ಸಚಿನ್ ತೆಂಡೂಲ್ಕರ್

Posted by:
Updated: Thursday, October 24, 2013, 12:09 [IST]
 

ವಿಸ್ಡನ್ ಶ್ರೇಷ್ಠ XI ತಂಡದಲ್ಲಿ ಸಚಿನ್ ತೆಂಡೂಲ್ಕರ್
 

ಲಂಡನ್, ಅ.24: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಕೀರ್ತಿ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ವಿಸ್ಡನ್ ಸಾರ್ವಕಾಲಿಕ ವಿಶ್ವ ಇಲೆವೆನ್ ಟೆಸ್ಟ್ ತಂಡದಲ್ಲಿ ಸಚಿನ್ ಅವರು ಸ್ಥಾನ ಪಡೆದಿದ್ದಾರೆ.

ಮುಂದಿನ ತಿಂಗಳು ವಿಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ನಂತರ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಲಿರುವ ತೆಂಡೂಲ್ಕರ್ ಶ್ರೇಷ್ಠ ತಂಡದಲ್ಲಿ ನಾಲ್ಕನೇ ಕ್ರಮಾಂಕದಲ್ಲಿದ್ದಾರೆ. ಆಸ್ಟ್ರೇಲಿಯದ ಬ್ಯಾಟಿಂಗ್ ದಂತಕತೆ ಡಾನ್ ಬ್ರಾಡ್ಮನ್ ನಾಯಕತ್ವದ ತಂಡದಲ್ಲಿ ಇಂಗ್ಲೆಂಡ್ ನ ನಾಲ್ವರು, ವಿಂಡೀಸ್ ನ ಮೂವರು, ಆಸ್ಟ್ರೇಲಿಯದ ಇಬ್ಬರು, ಭಾರತ ಹಾಗೂ ಪಾಕಿಸ್ತಾನದ ಓರ್ವ ಆಟಗಾರರಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

ತೆಂಡೂಲ್ಕರ್ ಅವರ ಸಮಕಾಲೀನರಾದ ಬ್ರಿಯಾನ್ ಲಾರ, ರಿಕಿ ಪಾಂಟಿಂಗ್ ಹಾಗೂ ಜಾಕ್ ಕಾಲೀಸ್, ಭಾರತದ ಶ್ರೇಷ್ಠ ಆಟಗಾರರಾದ ಸುನಿಲ್ ಗವಾಸ್ಕರ್ ಹಾಗೂ ಕಪಿಲ್ ದೇವ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ತೆಂಡೂಲ್ಕರ್ ಸಮಕಾಲೀನರಾದ ಆಸ್ಟ್ರೇಲಿಯದ ಸ್ಪಿನ್ ದಂತಕತೆ ಶೇನ್ ವಾರ್ನ್ ಹಾಗೂ ಪಾಕ್ ನ ಮಾಜಿ ವೇಗಿ ವಾಸಿಂ ಅಕ್ರಂ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ವಿಸ್ಡನ್ ವರ್ಲ್ಡ್ ಇಲೆವೆನ್: ಡಾನ್ ಬ್ರಾಡ್ಮನ್(ಆಸ್ಟ್ರೇಲಿಯ, ನಾಯಕ), ಜಾಕ್ ಹೋಬ್ಸ್(ಇಂಗ್ಲೆಂಡ್), ಡಬ್ಲೂಜಿ ಗ್ರೇಸ್(ಇಂಗ್ಲೆಂಡ್), ಸಚಿನ್ ತೆಂಡುಲ್ಕರ್(ಭಾರತ), ವಿವಿಯನ್ ರಿಚರ್ಡ್ಸ್(ವೆಸ್ಟ್ ‌ಇಂಡೀಸ್), ಗ್ಯಾರಿ ಸೋಬರ್ಸ್(ವೆಸ್ಟ್ ಇಂಡೀಸ್), ಅಲನ್ ನೊಟ್(ಇಂಗ್ಲೆಂಡ್), ವಾಸಿಂ ಅಕ್ರಂ(ಪಾಕಿಸ್ತಾನ), ಶೇನ್ ವಾರ್ನ್(ಆಸ್ಟ್ರೇಲಿಯ), ಮಾಲ್ಕಂ ಮಾರ್ಷಲ್(ವೆಸ್ಟ್‌ಇಂಡೀಸ್), ಸಿಡ್ನಿ ಬಾರ್ನೆಸ್(ಇಂಗ್ಲೆಂಡ್).

ವಿಸ್ಡನ್ ವರ್ಲ್ಡ್ ಇಲೆವೆನ್ ತಂಡ ವಿವರ:
1. ಜಾಕ್ ಹೋಬ್ಸ್(ಇಂಗ್ಲೆಂಡ್ 1908-1930) 61 ಟೆಸ್ಟ್, 5,410 ರನ್ 56.94 ರನ್ ಸರಾಸರಿ
2 ಡಬ್ಲ್ಯೂ ಜಿ ಗ್ರೇಸ್ (ಇಂಗ್ಲೆಂಡ್, 1880-1899) 22 ಟೆಸ್ಟ್, 1098 ರನ್,
3 ಸರ್ ಡಾನ್ ಬ್ರಾಡ್ಮನ್ (ಆಸ್ಟ್ರೇಲಿಯ 1928-1948) 52 ಟೆಸ್ಟ್, 6999 ರನ್, 99.94 ರನ್ ಸರಾಸರಿ
4 ಸಚಿನ್ ತೆಂಡೂಲ್ಕರ್ (ಭಾರತ, 1989-2013) 198 ಟೆಸ್ಟ್, 15837 ರನ್, 53.86 ರನ್ ಸರಾಸರಿ
5 ಸರ್ ವಿವಿಯನ್ ರಿಚರ್ಡ್ಸ್ (ವೆಸ್ಟ್ ಇಂಡೀಸ್ 1974-1991) 121 ಟೆಸ್ಟ್, 8540 ರನ್ 50.23 ರನ್ ಸರಾಸರಿ
6 ಗ್ಯಾರಿ ಸೋಬರ್ಸ್ (ವೆಸ್ಟ್ ಇಂಡೀಸ್ 1954-1974) 93 ಟೆಸ್ಟ್, 8032 ರನ್ 57.78 ರನ್ ಸರಾಸರಿ, 235 ವಿಕೆಟ್ 34.03 ವಿಕೆಟ್ ಸರಾಸರಿ
7 ಅಲಾನ್ ನಾಟ್ (ವಿಕೆಟ್ ಕೀಪರ್ ಇಂಗ್ಲೆಂಡ್ 1967-1981) 95 ಟೆಸ್ಟ್, 4389 ರನ್, 32.75 ರನ್ ಸರಾಸರಿ, 250 ಕ್ಯಾಚ್, 19 ಸ್ಟಂಪಿಂಗ್ಸ್
8 ವಾಸಿಂ ಅಕ್ರಮ್ (ಪಾಕಿಸ್ತಾನ 1985-2002) 104 ಟೆಸ್ಟ್, 414 ವಿಕೆಟ್ 23.62 ವಿಕೆಟ್ ಸರಾಸರಿ
9 ಶೇನ್ ವಾರ್ನ್ (ಆಸ್ಟ್ರೇಲಿಯಾ 1992-2007) 145 ಟೆಸ್ಟ್, 708 ವಿಕೆಟ್ 25.41 ರನ್ ಸರಾಸರಿ
10 ಮಾಲ್ಕಂ ಮಾರ್ಷಲ್ (ವೆಸ್ಟ್ ಇಂಡೀಸ್ 1978-1991) 81 ಟೆಸ್ಟ್, 376 ವಿಕೆಟ್, 20.94 ರನ್ ಸರಾಸರಿ
11 ಸಿಡ್ನಿ ಬಾರ್ನೆಸ್ (ಇಂಗ್ಲೆಂಡ್ 1901-14) 27 ಟೆಸ್ಟ್, 189 ವಿಕೆಟ್, 16.43 ರನ್ ಸರಾಸರಿ

Story first published:  Thursday, October 24, 2013, 11:50 [IST]
English summary
India's Sachin Tendulkar has been named in the Wisden all-time World Test XI with the legendary Sir Don Bradman as captain.
ಅಭಿಪ್ರಾಯ ಬರೆಯಿರಿ