Englishहिन्दीമലയാളംதமிழ்తెలుగు

ಮುಖ್ಯಾಂಶ : ಭಾರತ-ಆಸೀಸ್ 4ನೇ ಪಂದ್ಯ ಮಳೆಗೆ ರದ್ದು

Posted by:
Updated: Wednesday, October 23, 2013, 22:58 [IST]
 

ರಾಂಚಿ, ಅ.23 : ನಾಯಕ ಜಾರ್ಜ್ ಬೈಲಿ (98) ಹಾಗೂ ಗ್ಲೆನ್ ಮ್ಯಾಕ್ಸ್ ವೆಲ್ (92) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ತಂಡ ನಿಗದಿತ 50 ಓವರ್ ಗಳಲ್ಲಿ 295/8 ರನ್ ಸ್ಕೋರ್ ಮಾಡಿದೆ. ರಾಂಚಿಯಲ್ಲಿ ನಡೆದಿರುವ 4ನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ತಂಡ ಆಸೀಸ್ ಪಡೆ ಬಗ್ಗು ಬಡಿಯಲು ಸಜ್ಜಾಗಿತ್ತು. ತವರು ನೆಲದಲ್ಲಿ ಧೋನಿ ಆಟ ನೋಡಲು ಅಭಿಮಾನಿಗಳು ಕಾದಿದ್ದು ವ್ಯರ್ಥವಾಯಿತು. ಪಂದ್ಯ ಮಳೆಗೆ ಆಹುತಿಯಾಗಿದ್ದರಿಂದ ಪಂದ್ಯವನ್ನು ರದ್ದುಗೊಳಿಸಲಾಯಿತು.

ಸ್ಕೋರ್ ಕಾರ್ಡ್ ನೋಡಿ

ಜಾರ್ಖಂಡ್ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದಿರುವ ಪಂದ್ಯದಲ್ಲಿ ಟಾಸ್ ಸೋತರೂ ಆಸ್ಟ್ರೇಲಿಯಾ ತಂಡ ಅರಂಭದಲ್ಲೆ ಆಘಾತ ಅನುಭವಿಸಿತು. ಮಹಮ್ಮದ್ ಶಮಿ ಮೂರು ವಿಕೆಟ್ ಕಿತ್ತು ಭಾರತಕ್ಕೆ ಯಶ ತಂದರು.

ಮುಖ್ಯಾಂಶ : ಭಾರತ-ಆಸೀಸ್ 4ನೇ ಪಂದ್ಯ ಮಳೆಗೆ ರದ್ದು

ಆದರೆ, ಬೈಲಿ ಹಾಗೂ ಮ್ಯಾಕ್ಸ್ ವೆಲ್ ಉತ್ತಮ ಆಟದ ನೆರವಿನಿಂದ ಆಸೀಸ್ ಸ್ಕೋರ್ 300 ರನ್ ಗಡಿ ಹತ್ತಿರಕ್ಕೆ ತಲುಪಿತು.
ಅಸ್ಟ್ರೇಲಿಯಾ ಇನ್ನಿಂಗ್ಸ್
ಬೌಂಡರಿ : 22
ಸಿಕ್ಸ್ : 9
ಟಾಪ್ ಸ್ಕೋರರ್: ಜಾರ್ಜ್ ಬೈಲಿ 98 ರನ್ (94 ಎಸೆತ, 7x4, 3x6)
ಯಶಸ್ವಿ ಬೌಲರ್ : ಮಹಮ್ಮದ್ ಶಮಿ(ಭಾರತ) 3/42 8 ಓವರ್
# ಮಹಮ್ಮದ್ ಶಮಿ ಅವರು ಮೊದಲ ನಾಲ್ಕು ಓವರ್ ಗಳಲ್ಲಿ 3 ವಿಕೆಟ್ ಕಬಳಿಸಿದರು. ಒಟ್ಟಾರೆ 8 ಓವರ್ ಗಳಲ್ಲಿ 42 ರನ್ ನೀಡಿದರು(1 ಮೇಡನ್ ಸೇರಿ)
# ಆರ್ ವಿನಯ್ ಕುಮಾರ್ ಹಾಗೂ ಆರ್ ಅಶ್ವಿನ್ ತಲಾ 2 ವಿಕೆಟ್ ಪಡೆದರು.
# ಶತಕ ವಂಚಿತ ಬೈಲಿ 11ನೇ ಅರ್ಧ ಶತಕ ಗಳಿಸಿದರು. ಈ ಸರಣಿಯಲ್ಲಿ ಮೂರನೇ ಅರ್ಧ ಶತಕ ಬಾರಿಸಿದರು.
# ಸರಣಿಯಲ್ಲಿ ಬೈಲಿ ಅತ್ಯಧಿಕ ರನ್ ಗಳಿಕೆ 318 ರನ್ (3 ಅರ್ಧ ಶತಕ) ಮಾಡಿದ್ದಾರೆ ವಿರಾಟ್ ಕೊಹ್ಲಿ (229) ಹಿಂದಿದ್ದಾರೆ.
# ಗ್ಲೆನ್ ಮ್ಯಾಕ್ಸ್ ವೆಲ್ ಕೂಡಾ ಶತಕ ವಂಚಿತರಾಗಿದ್ದು 92 ರನ್ (77 ಎಸೆತ, 6x4 5x6) ಮ್ಯಾಕ್ಸ್ ವೆಲ್ 4ನೇ ಅರ್ಧಶತಕ ಇದಾಗಿದೆ.
# ಗ್ಲೆನ್ ಮ್ಯಾಕ್ಸ್ ವೆಲ್ ಅವರ ವೃತ್ತಿ ಜೀವನ ಈವರೆಗಿನ ಅತ್ಯಧಿಕ ಸ್ಕೋರ್(92 ರನ್) ಇದಾಗಿದೆ. ಈ ಮುಂಚೆ 56 ನಾಟೌಟ್ ಅತ್ಯಧಿಕ ಸ್ಕೋರ್ ಆಗಿದೆ.
# ಬೈಲಿ ಸ್ಕೋರ್ ಶೂನ್ಯ ಆಗಿದ್ದಾಗ ವಿರಾಟ್ ಕೊಹ್ಲಿ ಕ್ಯಾಚ್ ಡ್ರಾಪ್ ಮಾಡಿ ಜೀವದಾನ ನೀಡಿದರು. ಶಮಿ ಬೌಲರ್ ಆಗಿದ್ದರು.
# ಮ್ಯಾಕ್ಸ್ ವೆಲ್ ಕೂಡಾ ಜೀವದಾನ ಪಡೆದರು 69 ರನ್ ಆಗಿದ್ದಾಗ ಸುರೇಶ್ ರೈನಾ ಬೌಲಿಂಗ್ ನಲ್ಲಿ ಧೋನಿ ಕ್ಯಾಚ್ ಕೈ ಚೆಲ್ಲಿದರು.
# ಮಿಚೆಲ್ ಜಾನ್ಸನ್ 16 ರನ್ ಆಗಿದ್ದಾಗ ಜಡೇಜ ಬೌಲಿಂಗ್ ನಲ್ಲಿ ರೈನಾ ಗೆ ಕ್ಯಾಚಿತ್ತರು. ರೈನಾ ಕೈ ಕೊಡವಿದರು.
#ಆಸ್ಟ್ರೇಲಿಯಾದ 50 ರನ್ 65 ಎಸೆತದಲ್ಲಿ 100 : 126 ಎಸೆತ, 150 : 168, 200 : 206, 250: 270

Story first published:  Wednesday, October 23, 2013, 17:34 [IST]
English summary
Captain George Bailey (98) and Glenn Maxwell (92) helped Australia recover from early jolts and post 295/8 in 50 overs against India in the 4th One Day International.
ಅಭಿಪ್ರಾಯ ಬರೆಯಿರಿ