Englishहिन्दीമലയാളംதமிழ்తెలుగు

ಆಸೀಸ್ ಬಗ್ಗುಬಡಿಯಲು ಧೋನಿ ಪಡೆ ಸಜ್ಜು

Posted by:
Updated: Tuesday, October 22, 2013, 18:33 [IST]
 

ರಾಂಚಿ, ಅ.22: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಹಿಂದೆ ಬಿದ್ದಿರುವ ಧೋನಿ ಪಡೆ ಮುಂದಿನ ಪಂದ್ಯದಲ್ಲಿ ತಿರುಗೇಟು ನೀಡಲು ಸಜ್ಜಾಗುತ್ತಿದೆ. ಧೋನಿ ತಮ್ಮ ತವರು ನೆಲದಲ್ಲಿ ಅಸೀಸ್ ಪಡೆ ಬಗ್ಗು ಬಡಿಯುವ ಪಣ ತೊಟ್ಟಿದ್ದಾರೆ.

ಏಳು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿ ಪೈಕಿ ಪ್ರವಾಸಿ ಆಸ್ಟ್ರೇಲಿಯಾ ತಂಡ 2 ಪಂದ್ಯ ಗೆದ್ದಿದ್ದರೆ ಭಾರತ ಒಂದು ಪಂದ್ಯ ಗೆದ್ದಿದೆ. ಭಾರತ ಮತ್ತೊಮ್ಮೆ ಬೌಲರ್ ಗಳ ಕೊರತೆ ಎದುರಿಸುತ್ತಿದೆ. ಬ್ಯಾಟಿಂಗ್ ಸಮರ್ಥವಾಗಿದ್ದರೂ ಕಾಲಕ್ಕೆ ತಕ್ಕಂತೆ ಆಟ ಪ್ರದರ್ಶನದ ಅಗತ್ಯವಿದೆ.

ನಾಳಿನ ಪಂದ್ಯವನ್ನು ಭಾರತ ಗೆದ್ದಿದ್ದೇ ಆದರೆ ಮುಂದಿನ ಮೂರು ಪಂದ್ಯಗಳು ಕುತೂಹಲಕಾರಿಯಾಗಲಿದೆ. ಕಟಕ್ (ಅಕ್ಟೋಬರ್ 26), ನಾಗಪುರ( ಅಕ್ಟೋಬರ್ 30) ಹಾಗೂ ಬೆಂಗಳೂರು (ನವೆಂಬರ್ 2) ರಂದು ಮುಂದಿನ ಪಂದ್ಯಗಳು ನಿಗದಿಯಾಗಿದೆ.

ಬ್ಯಾಟಿಂಗ್ ಬೌಲಿಂಗ್ ಹಾಗೂ ಫೀಲ್ಡಿಂಗ್ ಎಲ್ಲಾ ವಿಭಾಗದಲ್ಲೂ ಉತ್ತಮ ಪ್ರದರ್ಶನ ನೀಡಬೇಕಿದೆ. ಸ್ಲಾಗ್ ಓವರ್ ಗಳಲ್ಲಿ ಹೇಗೆ ಬೌಲಿಂಗ್ ಮಾಡಬೇಕು ಎಂಬುದು ಈ ಲೆವೆಲ್ ಗೆ ಬಂದ ಮೇಲೆ ಬೌಲರ್ ಗೆ ತಿಳಿದಿರುತ್ತದೆ ಎಲ್ಲವನ್ನೂ ನಾವು ಸ್ಪೂನ್ ಫೀಡ್ ಮಾಡಲು ಸಾಧ್ಯವೇ ಎಂದು ಧೋನಿ ಖಾರವಾಗಿ ಹೇಳಿದ್ದರು..

ಕಳೆದ ಪಂದ್ಯದ ವಿಲನ್ ಇಶಾಂತ್ ಶರ್ಮ ಈ ಪಂದ್ಯದ ಅಂತಿಮ XI ನಲ್ಲಿ ಸ್ಥಾನ ಪಡೆಯುವರೇ ಕಾದು ನೋಡಬೇಕಿದೆ. ಅಲ್ಲಿ ತನಕ ಪಂದ್ಯಕ್ಕೆ ಭಾರತ ನಡೆಸಿರುವ ತಯಾರಿ ಹೇಗಿದೆ ನೋಡಿ...

ಧೋನಿ ಬ್ಯಾಟಿಂಗ್

ರಾಂಚಿಯಲ್ಲಿ ಬಹುದಿನಗಳ ನಂತರ ಆಡುತ್ತಿರುವ ನಾಯಕ ಧೋನಿ ಕಳೆದ ಪಂದ್ಯದಲ್ಲಿ ತೋರಿದ ಪ್ರದರ್ಶನವನ್ನು ರಿಪೀಟ್ ಮಾಡುತ್ತಾರಾ?

ಫುಟ್ಬಾಲ್ ಸಮಯ

ಆಟಗಾರರು ಫುಟ್ಬಾಲ್ ಆಟವಾಡುವ ಮೂಲಕ ಸಾಕಷ್ಟು ಬೆವರಿಸಿದರು. ಯುವರಾಜ್ ಸಿಂಗ್ ಹಾಗೂ ರವೀಂದ್ರ ಜಡೇಜ ಹೆಚ್ಚು ಹೊತ್ತು ತರಬೇತಿ ನಡೆಸಿದರು.

ಕೊಹ್ಲಿ ಮೂಡ್

ತರಬೇತಿ ಸಮಯದಲ್ಲಿ ಯುವರಾಜ್ ಸಿಂಗ್ ರಿಂದ ಕಿಚಾಯಿಸಲ್ಪಟ್ಟ ಉಪ ನಾಯಕ ವಿರಾಟ್ ಕೊಹ್ಲಿ ಯಾಕೋ ಮುನಿಸಿಕೊಂಡಂತೆ ಕಂಡು ಬರುತ್ತಾರೆ.

ಫುಟ್ಬಾಲ್ ವೀರ ಕೊಹ್ಲಿ

ಮುನಿಸನ್ನು ಫುಟ್ಬಾಲ್ ಮೇಲೆ ತೋರಿಸಲು ವಿರಾಟ್ ಕೊಹ್ಲಿ ಸಜ್ಜಾಗಿದ್ದಾರೆ

ಧೋನಿಗೆ ಪಾಠ?

ಭಾರತದ ಭವಿಷ್ಯದ ನಾಯಕ ವಿರಾಟ್ ಕೊಹ್ಲಿ ಅವರು ನಾಯಕ ಎಂಎಸ್ ಧೋನಿಗೆ ಪಾಠ ಹೇಳುತ್ತಿದ್ದಾರೆ.

ಫುಟ್ಬಾಲ್ ಕೌಶಲ್ಯ

ಫುಟ್ಬಾಲ್ ಆಟದಲ್ಲೂ ಕೌಶಲ್ಯ ತೋರಿಸಿದ ವಿರಾಟ್ ಕೊಹ್ಲಿ ಎಲ್ಲರಿಗಿಂತ ಉತ್ತಮ ಆಟ ಪ್ರದರ್ಶಿಸಿದರು

ಫುಟ್ಬಾಲ್ ಮುಖ್ಯ ತರಬೇತಿ

ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ನಡೆಸುವ ತರಬೇತಿಯಲ್ಲಿ ಫುಟ್ಬಾಲ್ ಪ್ರಮುಖ ಆಟವಾಗಿರುತ್ತದೆ


Story first published:  Tuesday, October 22, 2013, 18:22 [IST]
English summary
The India-Australia One Day International series enters captain MS Dhoni's city Ranchi tomorrow(Oct.23). The skipper will be hoping to gift his fans a win. But that could be in the hands of his bowlers.
ಅಭಿಪ್ರಾಯ ಬರೆಯಿರಿ