Englishहिन्दीമലയാളംதமிழ்తెలుగు

ಬೆಂಗಳೂರು ಪಂದ್ಯಕ್ಕೆ ಟಿಕೆಟ್ ಬೇಕಾ ಟಿಕೆಟ್

Posted by:
Updated: Monday, October 21, 2013, 12:25 [IST]
 

ಬೆಂಗಳೂರು, ಅ.21: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯ ಏಳನೇ ಹಾಗೂ ಅಂತಿಮ ಅಂತಾರಾಷ್ಟ್ರೀಯ ಏಕದಿನ ಪಂದ್ಯ ನವೆಂಬರ್ 2 ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಅಕ್ಟೋಬರ್ 24 ರಿಂದ ಟಿಕೆಟ್ ನೀಡಲಾಗುತ್ತದೆ ಎಂದು ಕೆಎಸ್ ಸಿಎ ಪ್ರಕಟಿಸಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ ಕಾರ್ಯದರ್ಶಿ ಜಾವಗಲ್ ಶ್ರೀನಾಥ್ ಮಾತನಾಡಿ, 'ಸ್ಟೇಡಿಯಂ ಬಾಕ್ಸ್ ಕಚೇರಿಯಲ್ಲಿ ಅಕ್ಟೋಬರ್ 24 ಹಾಗೂ 25 ರಂದು ಪಂದ್ಯದ ಟಿಕೆಟ್ ಗಳನ್ನು ಮಾರಲಾಗುತ್ತದೆ. ಇದಲ್ಲದೆ ಬುಕ್ ಮೈಶೋ.ಕಾಂ ವೆಬ್ ತಾಣದ ಮೂಲಕ ಆನ್ ಲೈನ್ ಟಿಕೆಟ್ ಖರೀದಿ ಅವಕಾಶ ಕೂಡಾ ಲಭ್ಯವಿದೆ ಎಂದರು.

ಟಿಕೆಟ್ ದರಗಳು 300 ರು ನಿಂದ 12,500 ರು ತನಕ ಇದೆ. ಮೊದಲ ದಿನದ ಮಾರಾಟದಲ್ಲಿ 300 ರು ಮುಖಬೆಲೆಯ ಟಿಕೆಟ್ ಗಳನ್ನು ಮಾತ್ರ ಮಾರಲಾಗುತ್ತದೆ ಎಂದು ಶ್ರೀನಾಥ್ ವಿವರಿಸಿದರು.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಚುನಾವಣೆಗೆ ಇನ್ಮುಂದೆ ಸ್ಪರ್ಧಿಸುವುದಿಲ್ಲ ಎಂದು ಹಾಲಿ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ, ಕಾರ್ಯದರ್ಶಿ ಜಾವಗಲ್ ಶ್ರೀನಾಥ್ ಇತ್ತೀಚೆಗೆ ಘೋಷಿಸಿದ್ದರು.

ಬೆಂಗಳೂರು ಪಂದ್ಯಕ್ಕೆ ಟಿಕೆಟ್ ಬೇಕಾ ಟಿಕೆಟ್

ಅದೇ ತಂಡ : ಬಿಸಿಸಿಐ ಆಯ್ಕೆ ಸಮಿತಿಯು ಉಳಿದ ನಾಲ್ಕು ಪಂದ್ಯಗಳಿಗೆ ತಂಡದಲ್ಲಿ ಯಾವುದೇ ಬದಲಾವಣೆ ಮಾಡದೆ 15 ಮಂದಿ ಆಟಗಾರರನ್ನು ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ತಂಡ ಇಂತಿದೆ: ಮಹೇಂದ್ರ ಸಿಂಗ್ ಧೋನಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಸುರೇಶ್ ರೈನಾ, ರವೀಂದ್ರ ಜಡೇಜಾ, ಆರ್. ಅಶ್ವಿನ್, ಭುವನೇಶ್ವರ ಕುಮಾರ್, ಇಶಾಂತ್ ಶರ್ಮಾ, ವಿನಯ್ ಕುಮಾರ್, ಅಮಿತ್ ಮಿಶ್ರಾ, ಅಂಬಾಟಿ ರಾಯುಡು, ಮೊಹಮ್ಮದ್ ಶಮಿ, ಜೈದೇವ್ ಉನದ್ಕಟ್


ಟಿಕೆಟ್ ಮಾರಾಟ ಬೆಲೆ ವಿವರ:
* ಆನ್ ಲೈನ್ ಟಿಕೆಟ್ ಬುಕ್ಕಿಂಗೆ www.bookmyshow.com, helpline - 022 39895050
* ಅಕ್ಟೋಬರ್ 24: ಸ್ಟೇಡಿಯಂನ ಗೇಟ್ ಸಂಖ್ಯೆ 9 ಬಳಿ ಕೌಂಟರ್, D ಸ್ಟ್ಯಾಂಡ್ ಟಿಕೆಟ್ ಮಾತ್ರ. ಟಿಕೆಟ್ ಬೆಲೆ 300 ರು
* ಅಕ್ಟೋಬರ್ 25: ಸ್ಟೇಡಿಯಂನ ಗೇಟ್ ಸಂಖ್ಯೆ 4 ಹಾಗೂ 7ರ ಬಳಿ ಕೌಂಟರ್ ಪಬ್ಲಿಕ್ ಸ್ಟ್ಯಾಂಡ್

ಟಿಕೆಟ್ ದರ:
A-Upper: Rs. 1,500
B-Upper: Rs. 1,500
N-Stand: Rs. 3,000
A-Lower: Rs. 3,500
A-Executive: Rs. 4,500
P-Annex Lower: Rs. 5,000
P-Terrace: Rs. 7,000
P-Corporate: Rs. 8,000
P-Upper: Rs. 12,500
ದಟ್ಸ್ ಕ್ರಿಕೆಟ್

Story first published:  Monday, October 21, 2013, 12:12 [IST]
English summary
The sale of tickets for the seventh and final One Day International between India and Australia to be held on November 2 (Saturday) at the M Chinnaswamy Stadium, Banaglore will begin on October 24 (Thursday) said KSCA Secretary Javagal Srinath
ಅಭಿಪ್ರಾಯ ಬರೆಯಿರಿ