Englishहिन्दीമലയാളംதமிழ்తెలుగు

ಕೆಎಸ್ ಸಿಎ ಚುನಾವಣೆ ಸ್ಪರ್ಧಿಸಲ್ಲ ;ಶ್ರೀನಾಥ್, ಕುಂಬ್ಳೆ

Posted by:
Updated: Friday, October 18, 2013, 17:10 [IST]
 

ಕೆಎಸ್ ಸಿಎ ಚುನಾವಣೆ ಸ್ಪರ್ಧಿಸಲ್ಲ ;ಶ್ರೀನಾಥ್, ಕುಂಬ್ಳೆ
 

ಬೆಂಗಳೂರು, ಅ.18 : ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಚುನಾವಣೆಗೆ ಇನ್ಮುಂದೆ ಸ್ಪರ್ಧಿಸುವುದಿಲ್ಲ ಎಂದು ಹಾಲಿ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರು ಘೋಷಿಸಿದ್ದಾರೆ. ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ '3 ವರ್ಷಗಳ ಸಾಧನೆ' ಕುರಿತ ಪುಸ್ತಕ ಬಿಡುಗಡೆ ಮಾಡಿದ ನಂತರ ಸುದ್ದಿಗೋಷ್ಠಿಯಲ್ಲಿ ಕುಂಬ್ಳೆ ಮಾತನಾಡಿದರು.

ಕೆಎಸ್ ಸಿಎ ಚುನಾವಣೆಯಿಂದ ಹಿಂದೆ ಸರಿಯುವುದಾಗಿ 43 ವರ್ಷದ ಅನಿಲ್ ಕುಂಬ್ಳೆ ತಮ್ಮ ನಿರ್ಧಾರ ಪ್ರಕಟಿಸಿದರು. ' ಕಳೆದ ಮೂರು ವರ್ಷದ ಆಡಳಿತ ನಮಗೆ ತೃಪ್ತಿ ತಂದಿದೆ, ರಾಜ್ಯದ ವಿವಿಧೆಡೆ ಅಂತಾರಾಷ್ಟ್ರೀಯ ಮಟ್ಟದ ಮೈದಾನ ಹಾಗೂ ಕ್ರಿಕೆಟ್ ಕೊಂಡೊಯ್ದ ತೃಪ್ತಿ ಇದೆ. ಮುಂದಿನ ಬಾರಿ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ' ಎಂದು ಸ್ಪಷ್ಟಪಡಿಸಿದರು.

ಇದರ ಬೆನ್ನಲ್ಲೆ ಮಾತನಾಡಿದ ಹಾಲಿ ಕಾರ್ಯದರ್ಶಿ, ಕುಂಬ್ಳೆ ಸಹ ಆಟಗಾರ ಜಾವಗಲ್ ಶ್ರೀನಾಥ್ 'ತಾವೂ ಕೂಡಾ ಚುನಾವಣೆ ನಿಲ್ಲುವುದಿಲ್ಲ ಹಾಗೂ ಕಾರ್ಯದರ್ಶಿ ಹುದ್ದೆ ಆಡಳಿತ ಅವಧಿ ವಿಸ್ತರಣೆ ಬಯಸುವುದಿಲ್ಲ' ಎಂದರು. ಸುದ್ದಿಗೋಷ್ಠಿಯಲ್ಲಿ ಕೆಎಸ್ ಸಿಎ ಕಾರ್ಯದರ್ಶಿ, ಮಾಜಿ ಕ್ರಕೆಟಿಗ ಜಾವಗಲ್ ಶ್ರೀನಾಥ್, ರಾಹುಲ್ ದ್ರಾವಿಡ್ ಉಪಸ್ಥಿತರಿದ್ದರು.

ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಹಾಗೂ ವೆಂಕಟೇಶ್ ಪ್ರಸಾದ್ ಅವರು ನವೆಂಬರ್ 21, 2010ರಂದು ಕೆಎಸ್ ಸಿಎ ಆಡಳಿತ ಚುಕ್ಕಾಣಿ ಹಿಡಿದಿದ್ದರು. ಇವರುಗಳಿಗೆ ಮಾಜಿ ಟೆಸ್ಟ್ ಆಲ್ ರೌಂಡರ್ ರೋಜರ್ ಬಿನ್ನಿ ಹಾಗೂ ಉದ್ಯಮಿ ಸದಾನಂದ ಮಯ್ಯ ಸಾಥ್ ನೀಡಿದ್ದರು. ಅಂದಿನ ಚುನಾವಣೆಯಲ್ಲಿ ಮೈಸೂರು ಮಹಾರಾಜ ಶ್ರೀಕಂಠದತ್ತ ಒಡೆಯರ್ ಅವರ ಬಣವನ್ನು 33 ಮತಗಳಿಂದ ಕುಂಬ್ಳೆ ಪಡೆ ಸೋಲಿಸಿತ್ತು.

ಕುಂಬ್ಳೆ ರಾಜಕೀಯಕ್ಕೆ?: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆದು ರಾಜಕೀಯ ಪ್ರವೇಶಿಸುತ್ತಿದ್ದೀರಂತೆ ಹೌದಾ? ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅನಿಲ್ ಕುಂಬ್ಳೆ, ನನಗೆ ಕ್ರಿಕೆಟ್ ಆಡಿ ಮಾತ್ರ ಗೊತ್ತಿದೆ. ರಾಜಕೀಯ ಪ್ರವೇಶ ಸುದ್ದಿ ಎಲ್ಲವೂ ಸುಳ್ಳು. ನಾನು ರಾಜಕೀಯ ಪಕ್ಷ ಸೇರುವುದಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ರಾಹುಲ್ ದ್ರಾವಿಡ್, ಕುಂಬ್ಳೆ, ಶ್ರೀನಾಥ್ ಅವರು ಚುನಾವಣೆಗೆ ಸ್ಪರ್ಧಿಸದಿದ್ದರೂ ಕೆಎಸ್ ಸಿಎ ಪರ ಇದ್ದೇ ಇರುತ್ತಾರೆ. ಕರ್ನಾಟಕ ಕ್ರಿಕೆಟ್ ಅಭಿವೃದ್ಧಿ ಹಾಗೂ ಯುವ ಕ್ರಿಕೆಟರ್ ಗಳ ಏಳಿಗೆಗೆ ನಾವು ಸದಾ ನೆರವು ನೀಡುತ್ತೇವೆ ಎಂದಿದ್ದಾರೆ.

Story first published:  Friday, October 18, 2013, 17:05 [IST]
English summary
Former India captain Anil Kumble will not seek re-election in the forthcoming Karnataka State Cricket Association elections. Former teammate Javagal Srinath too will not seek an extension for the post of secretary.
ಅಭಿಪ್ರಾಯ ಬರೆಯಿರಿ