Englishहिन्दीമലയാളംதமிழ்తెలుగు

ಸಚಿನ್ ಲಾರಾ ದಾಖಲೆ ಮುರಿಯಲಿ: ಆಪ್ತನ ಅಪೇಕ್ಷೆ

Posted by:
Published: Thursday, October 17, 2013, 17:31 [IST]
 

ಬೆಂಗಳೂರು, ಅ.17: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸಚಿನ್ ತಮ್ಮ ವೃತ್ತಿ ಜೀವನದ ಕಟ್ಟ ಕಡೆಯ ಆಟ ಆಡುವಾಗ ಅವರ ಆಪ್ತರೊಬ್ಬರು ಪಂದ್ಯ ನೋಡಲು ಆಲ್ಲಿರುವುದಿಲ್ಲ. ಸಚಿನ್ ಬೀಳ್ಕೊಡುಗೆ ನೇರ ನೋಡಲು ಸಾಧ್ಯವಾಗದ ಸಚಿನ್ ಆಪ್ತರೊಬ್ಬರು ತಮ್ಮ ಅಪೇಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.

ಟೆಸ್ಟ್ ಪಂದ್ಯವೊಂದರಲ್ಲಿ 400 ರನ್ ಸಿಡಿಸಿರುವ ಲಾರಾ ದಾಖಲೆಯನ್ನು ಸಚಿನ್ ಮುರಿಯಬೇಕೆಂಬುದು ನನ್ನ ಆಸೆ ಎಂದಿದ್ದಾರೆ. ಸಚಿನ್ ಗೆ 20ಕ್ಕೂ ಹೆಚ್ಚು ಬ್ಯಾಟ್ ಗಳನ್ನು ತಯಾರಿಸಿರುವ ಇಲ್ಲವೇ ರಿಪೇರಿ ಮಾಡಿಕೊಟ್ಟಿರುವ ವ್ಯಕ್ತಿ ಬೆಂಗಳೂರಿನ ರಾಮ್ ಭಂಡಾರಿ ಅವರ ಆಸೆಯಾಗಿದೆ.

ಲಾರಾ ಅವರ 400 ಟೆಸ್ಟ್ ರನ್ ದಾಖಲೆಯನ್ನು ಸಚಿನ್ ಮುರಿಯಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ. ಅದು ಬಹುತೇಕರು ಸಾಧಿಸಬಹುದಾದ ದಾಖಲೆಯಲ್ಲ. ಅದು ಸಾಧ್ಯವಾದರೆ, ಇಡೀ ಭಾರತೀಯರು ಹೆಮ್ಮೆ ಪಡುತ್ತಾರೆ' ಎಂದು ರಾಮ್ ಭಂಡಾರಿ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಸಚಿನ್ ಅವರಿಂದ ಅಷ್ಟು ದೊಡ್ಡ ದಾಖಲೆಯನ್ನು ನಿರೀಕ್ಷಿಸುವುದು ಅಷ್ಟು ಸೂಕ್ತವಲ್ಲ ನಿಜ ಆದರೆ, ಅಸಾಧ್ಯವಾದ ದಾಖಲೆಯನ್ನು ಮುರಿಯಲು ಸಚಿನ್ ಅವರಿಗೆ ಮಾತ್ರ ಸಾಧ್ಯ ಎಂದು ಭಂಡಾರಿ ಅಭಿಪ್ರಾಯಪಟ್ಟಿದ್ದಾರೆ.

ಸಚಿನ್ ಲಾರಾ ದಾಖಲೆ ಮುರಿಯಲಿ: ಆಪ್ತನ ಅಪೇಕ್ಷೆ

'ಕ್ರಿಕೆಟ್ ಒಂದು ವಿಶಿಷ್ಟವಾದ ಕ್ರೀಡೆ. ಅಲ್ಲಿ ಏನು ಬೇಕಾದರೂ ನಡೆಯಬಹುದು. ಏಕ ಪಂದ್ಯದಲ್ಲಿ ಎರಡು ಸೆಂಚುರಿ ಹೊಡೆಯುವುದನ್ನು ಯಾರಾದರೂ ಯೋಚಿಸಿದ್ದರಾ?, ಅದನ್ನ ಸಚಿನ್ ಸಾಧಿಸಿ ತೋರಿಸಿದರು. ಹೀಗೆ ಯಾರೂ ಊಹಿಸಲಾಗದ್ದನ್ನೇ ಸಚಿನ್ ಸಾಧಿಸಿರುವಾಗ, ಎಲ್ಲರೂ ಯೋಚಿಸಬಹುದಾದದ್ದನ್ನು ಅವರು ಸಾಧಿಸಲು ಯಾಕೆ ಸಾಧ್ಯವಿಲ್ಲ? ಎಂದು ಭಂಡಾರಿ ಪ್ರಶ್ನಿಸುತ್ತಾರೆ.

ಮೂಲತಃ ಬಿಹಾರದವರಾದ ಭಂಡಾರಿ 1979ರಲ್ಲಿ ಬೆಂಗಳೂರಿಗೆ ಬಂದವರು. ಮನೆಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ಬ್ಯಾಟ್ ತಯಾರಿಸುವುದು, ರಿಪೇರಿ ಮಾಡುವುದು ಪಾರ್ಟ್ ಟೈಮ್ ಕೆಲಸ. ಯುವಕರಿಗೆ ಅವಕಾಶ ನೀಡಲು ಸಚಿನ್ ಅವರು ನಿವೃತ್ತಿ ಘೋಷಿಸಿದ್ದಾರೆ. ಅವರ ನಿರ್ಧಾರವನ್ನು ನಾವೆಲ್ಲ ಗೌರವಿಸಬೇಕಿದೆ ಎಂದಿದ್ದಾರೆ.

English summary
He won't be there to watch Sachin Tendulkar's farewell Test series but the man who claims to have repaired and crafted more than 20 bats for the senior batsman wants him to break Brian Lara's record of 400 runs in a Test before saying goodbye to the game.
ಅಭಿಪ್ರಾಯ ಬರೆಯಿರಿ