Englishहिन्दीമലയാളംதமிழ்తెలుగు

ಅಸೀಸ್ ವಿರುದ್ಧ ಭಾರತಕ್ಕೆ 'ವಿರಾಟ್' ವಿಜಯ

Posted by:
Updated: Wednesday, October 16, 2013, 22:06 [IST]
 

ಜೈಪುರ, ಅ.16: ಇಲ್ಲಿ ನಡೆದ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧ ಟೀಂ ಇಂಡಿಯಾ ಅಮೋಘ ಜಯ ದಾಖಲಿಸಿದೆ. 360 ರನ್ ಚೇಸ್ ಮಾಡಿದ ಧೋನಿ ಪಡೆ 43.3 ಓವರ್ ಗಳಲ್ಲೇ ಗುರಿ ಮುಟ್ಟಿ ವಿಜಯೋತ್ಸವ ಆಚರಿಸಿತು.

123 ಎಸೆತಗಳಲ್ಲಿ 141 ರನ್ ನಾಟೌಟ್ (17 ಬೌಂಡರಿ, 4 ಸಿಕ್ಸರ್, 191 ನಿಮಿಷ) ಚೆಚ್ಚಿ ತಂಡದ ಗೆಲುವಿಗೆ ರೋಹಿತ್ ಶರ್ಮ ಅಧಾರವಾದರು. ರೋಹಿತ್ ಶರ್ಮಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ಸಿಕ್ಕಿತು.

ಇನ್ನೊಂದು ತುದಿಯಲ್ಲಿ ಶಿಖರ್ ಧವನ್ ಶತಕ ವಂಚಿತರಾದರೂ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. 86 ಎಸೆತಗಳಲ್ಲಿ 95 ರನ್ (14 ಬೌಂಡರಿ) ಗಳಿಸಿ ಉತ್ತಮ ಆರಂಭ ಒದಗಿಸಿದರು.
ಸ್ಕೋರ್ ಕಾರ್ಡ್ ನೋಡಿ

ತಂಡದ ಮೊತ್ತ 176 ರನ್ ಆಗಿದ್ದಾಗ ಧವನ್ ವಿಕೆಟ್ ಬಿತ್ತು. ವಿರಾಟ್ ಕೊಹ್ಲಿ ನಂತರ ಪಂದ್ಯದ ಗತಿ ಬದಲಿಸಿ ಬಿಟ್ಟರು. 52 ಎಸೆತಗಳಲ್ಲಿ 100 ರನ್ ಗಳಿಸಿ ಅತಿ ವೇಗವಾಗಿ ಶತಕ ಗಳಿಸಿದ ಭಾರತೀಯ ಆಟಗಾರ ಎನಿಸಿದರು. ಈ ಮೂಲಕ ವೀರೇಂದರ್ ಸೆಹ್ವಾಗ್ ದಾಖಲೆ ಮುರಿದರು.

ಅಸೀಸ್ ವಿರುದ್ಧ ಭಾರತಕ್ಕೆ 'ವಿರಾಟ್' ವಿಜಯ

ಕೊಹ್ಲಿ 8 ಬೌಂಡರಿ, 7 ಸಿಕ್ಸರ್ ಸಿಡಿಸಿದರು. ಎಲ್ಲವೂ 80 ನಿಮಿಷಗಳ ಆಟದಲ್ಲೇ ಬಂದಿದ್ದು ವಿಶೇಷ.ಆಸೀಸ್ ತಂಡ 26 ಇತರೆ ರನ್ ಗಳನ್ನು ಕೊಡುಗೆ ನೀಡಿತು. ಕೊಹ್ಲಿ ಹಾಗೂ ರೋಹಿತ್ 186 ರನ್ (104 ಎಸೆತ) ಜೊತೆಯಾಟ ಹಾಗೂ ಧವನ್-ರೋಹಿತ್ 176 ರನ್ (157 ಎಸೆತ) ಜೊತೆಯಾಟ ಭಾರತದ ಗೆಲುವಿಗೆ ಕಾರಣವಾಯಿತು.

ಆಸೀಸ್ ಇನ್ನಿಂಗ್ಸ್:
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡ 5 ವಿಕೆಟ್ ಕಳೆದುಕೊಂಡು 359 ರನ್ ಬೃಹತ್ ಮೊತ್ತ ದಾಖಲಿಸಿತು.

ನಾಯಕ ಜಾರ್ಜ್ ಬೈಲಿ(92 ನಾಟೌಟ್) ಸೇರಿದಂತೆ ಐವರು ಆಟಗಾರರು 50 ಪ್ಲಸ್ ರನ್ ಚೆಚ್ಚಿ ಭಾರತದ ಬೌಲರ್ ಗಳ ಬೆವರಿಳಿಸಿದರು. ಕೊನೆಯ 10 ಓವರ್ ಗಳಲ್ಲಿ 122 ರನ್ ಬಾರಿಸಿದರ್. ಫಿಲ್ ಹ್ಯೂಸ್(83), ಅರೋನ್ ಫಿಂಚ್ (50), ಶೇನ್ ವಾಟ್ಸನ್(59), ಗ್ಲೆನ್ ಮ್ಯಾಕ್ಸ್ ವೆಲ್(53) ತಂಡದ ಮೊತ್ತ ಹೆಚ್ಚಿಸಿದರು.

ಇದು ಭಾರತದ ನೆಲದಲ್ಲಿ ಭಾರತದ ವಿರುದ್ಧ ಆಸೀಸ್ ದಾಖಲಿಸಿದ ಅತಿದೊಡ್ಡ ಸ್ಕೋರ್ ಆಗಿದೆ. ಈ ಮುಂಚೆ 2009ರಲ್ಲಿ ಹೈದರಾಬಾದಿನಲ್ಲಿ 350/4 ಸ್ಕೋರ್ ಮಾಡಿತ್ತು. ಈ ಮುಂಚೆ ಕೂಡಾ ಆಸೀಸ್ ತಂಡ ಭಾರತದ ವಿರುದ್ಧ 359 ರನ್ ಸ್ಕೋರ್ ಮಾಡಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆದ 2003ರ ವಿಶ್ವಕಪ್ ಫೈನಲ್ ನಲ್ಲಿ 359/2 ಹಾಗೂ 2004ರಲ್ಲಿ ಸಿಡ್ನಿಯಲ್ಲಿ ನಡೆದ ವಿಬಿ ಸರಣಿ ಪಂದ್ಯದಲ್ಲಿ 359/4 ರನ್ ಗಳಿಸಿತ್ತು.

Story first published:  Wednesday, October 16, 2013, 21:27 [IST]
English summary
Jaipur Second ODI : India beat Australia win by 9 wickets. An inspired India tonight pulled off an incredible nine-wicket victory over Australia in the second cricket one-dayer, achieving the second highest ever run chase in ODI history in what turned out to be a high scoring contest.
ಅಭಿಪ್ರಾಯ ಬರೆಯಿರಿ