Englishहिन्दीമലയാളംதமிழ்తెలుగు

ಹುಬ್ಬಳ್ಳಿ: ಬ್ರಾಡ್ಮನ್ ಸಮಕ್ಕೆ ನಿಂತ ಪೂಜಾರಾ

Posted by:
Updated: Friday, October 11, 2013, 18:26 [IST]
 

ಹುಬ್ಬಳ್ಳಿ, ಅ.11: ಗಂಡು ಮೆಟ್ಟಿನ ನಾಡಿನಲ್ಲಿ ಕ್ರಿಕೆಟ್ ಲೋಕದ ದಂತಕಂತೆ ಡಾನ್ ಬ್ರಾಡ್ಮನ್ ಅವರ ಸಮಕ್ಕೆ ಭಾರತೀಯ ಬ್ಯಾಟ್ಸ್ ಮನ್ ನಿಂತಿದ್ದಾರೆ. ಭಾರತ ಎ ತಂಡದ ಆಟಗಾರ ಚೇತೇಶ್ವರ್ ಪೂಜಾರ ಭರ್ಜರಿ ತ್ರಿಶತಕ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ.

ವೆಸ್ಟ್ ಇಂಡೀಸ್ 'ಎ' ವಿರುದ್ಧದ 4 ದಿನಗಳ ಟೆಸ್ಟ್ ಪಂದ್ಯದಲ್ಲಿ ಭಾರತ 'ಎ' ತಂಡದ ಆಟಗಾರ ಚೇತೇಶ್ವರ್ ಪೂಜಾರ ಭರ್ಜರಿ ತ್ರಿಶತಕ(306 ನಾಟೌಟ್) ಸಿಡಿಸಿದ್ದಾರೆ. ನಿನ್ನೆ ಶತಕ ಸಿಡಿಸಿ ಅಜೇಯರಾಗಿ ಉಳಿದಿದ್ದ ಪೂಜಾರ, ಶುಕ್ರವಾರ ತ್ರಿಶತಕ ಪೂರೈಸಿದರು. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಸರ್ ಡಾನ್ ಬ್ರಾಡ್ಮನ್, ಬ್ರಿಯಾನ್ ಲಾರಾ ಅವರು ಮಾಡಿದ ದಾಖಲೆಯನ್ನು ಪೂಜಾರಾ ಸರಿಗಟ್ಟಿದ್ದಾರೆ.

ಹುಬ್ಬಳ್ಳಿ: ಬ್ರಾಡ್ಮನ್ ಸಮಕ್ಕೆ ನಿಂತ ಪೂಜಾರಾ

ಚೇತೇಶ್ವರ್ ಪೂಜಾರ ಅವರ ದೀರ್ಘ ಇನ್ನಿಂಗ್ಸ್ ನಲ್ಲಿ ಭರ್ಜರಿ 33 ಬೌಂಡರಿಗಳಿದ್ದವು. ಈ ಮೂಲಕ ಮುಂಬರುವ ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಪೂಜಾರ ಭರ್ಜರಿಯಾಗಿ ಸಿದ್ಧವಾಗಿದ್ದಾರೆ. ಇಂದು ಪಂದ್ಯದ 3ನೇ ದಿನವಾಗಿದ್ದು, ಭಾರತ 150 ಓವರ್ ಗಳಲ್ಲಿ 564/9 ಸ್ಕೋರ್ ಮಾಡಿ 296 ರನ್ ಮುನ್ನಡೆ ಸಾಧಿಸಿದೆ. ದಿನದ ಕೊನೆಗೆ ವೆಸ್ಟ್ ಇಂಡೀಸ್ ಎ ತಂಡ 35 ಓವರ್ ಗಳಲ್ಲಿ 116/3 ಸ್ಕೋರ್ ಮಾಡಿ ಸಂಕಷ್ಟಕ್ಕೆ ಸಿಲುಕಿತ್ತು.

ಪೂಜಾರ ದಾಖಲೆ: ಸೌರಾಷ್ಟ್ರ ಮೂಲದ ಚೇತೇಶ್ವರ್ ಪೂಜಾರಾ ಅವರು ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಮೂರು ತ್ರಿಶತಕ ದಾಖಲಿಸಿದ್ದಾರೆ. ಇದಕ್ಕೂ ಮುನ್ನ ಅವರ ಸಹ ಆಟಗಾರ ರವೀಂದ್ರ ಜಡೇಜ ಅವರು ಇದೇ ದಾಖಲೆ ಬರೆದಿದ್ದರು.

ತ್ರಿಶತಕ ಸಾಧಕರ ಸಂಪೂರ್ಣ ಪಟ್ಟಿ
ಅದರೆ, ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್ ತ್ರಿಶತಕ ವೀರರ ಪಟ್ಟಿಯಲ್ಲಿ ಇಂದಿಗೂ ಮುಂದಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಬ್ರಾಡ್ಮನ್ 6 ತ್ರಿಶತಕ ದಾಖಲಿಸಿದ್ದಾರೆ. ಬಿಲ್ ಪಾನ್ಸ್ ಫಾರ್ಡ್ ಹಾಗೂ ವಾಲಿ ಹಮ್ಮಂಡ್ ಅವರು ನಾಲ್ಕು ಶತಕ ದಾಖಲಿಸಿದ್ದರೆ, ಡಬ್ಲ್ಯೂ ಜಿ ಗ್ರೇಸ್, ಗ್ರಹಾಂ ಹಿಕ್, ಬ್ರಿಯಾನ್ ಲಾರಾ, ಮೈಕಲ್ ಹಸ್ಸಿ ಹಾಗೂ ರವೀಂದ್ರ ಜಡೇಜ ಮೂರು ತ್ರಿಶತಕ ಹೊಡೆದಿದ್ದಾರೆ.

ಪೂಜಾರಾ ಇತ್ತೀಚೆಗೆ ಎರಡನೇ ತ್ರಿಶತಕ ದಾಖಲಿಸಿದ್ದಾರೆ. ಕರ್ನಾಟಕ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ 352 ರನ್ ಹೊಡೆದಿದ್ದರು. ಒಟ್ಟಾರೆ ಪುಜಾರಾ ಅವರು ಆರು ತ್ರಿಶತಕ ಗಳಿಸಿದ್ದಾರೆ. ಅಂಡರ್ 14, ಅಂಡರ್ 19 ಹಾಗೂ ಅಂಡರ್ 22 ಮಟ್ಟದಲ್ಲೂ ತ್ರಿಶತಕ ದಾಖಲಿಸಿದ್ದಾರೆ.

ಭಾರತದ ಇತರೆ ಆಟಗಾರರ ಪೈಕಿ ವಿಜಯ್ ಹಜಾರೆ, ರಮಣ್ ಲಂಬಾ, ವಿವಿಎಸ್ ಲಕ್ಷ್ಮಣ್, ವೀರೆಂದರ್ ಸೆಹ್ವಾಗ್ ಹಾಗೂ ವಾಸೀಂ ಜಾಫರ್ ತಲಾ ಎರಡು ತ್ರಿಶತಕ ದಾಖಲಿಸಿದ್ದಾರೆ.

Story first published:  Friday, October 11, 2013, 18:04 [IST]
English summary
Hubli : Cheteshwar Pujara joined Sir Don Bradman, Brian Lara and other greats when he notched up his third first-class triple hundred here on Friday.
ಅಭಿಪ್ರಾಯ ಬರೆಯಿರಿ