Englishहिन्दीമലയാളംதமிழ்తెలుగు

ಯುವಿ ವೀರಾವೇಷ, ವಿನಯ್ ಆಟ ಬೊಂಬಾಬ್

Posted by:
Published: Friday, October 11, 2013, 15:31 [IST]
 

ರಾಜ್ ಕೋಟ್, ಅ.11: ಆಲ್ ರೌಂಡರ್ ಯುವರಾಜ್ ಸಿಂಗ್ ಮತ್ತು ನಾಯಕ ಎಂಎಸ್ ಧೋನಿ ಜತೆಯಾಟ ಮುರಿಯಲು ವಿಫಲವಾದ ಆಸೀಸ್ ಪಡೆ ಏಕೈಕ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಕಳೆದುಕೊಂಡಿದೆ.

ಯುವರಾಜ್ ಸಿಂಗ್ ಹಾಗೂ ಧೋನಿ 5ನೇ ವಿಕೆಟ್ ಗೆ ಮುರಿಯದ ಜತೆಯಾಟದಲ್ಲಿ ದಾಖಲಿಸಿದ 102 ರನ್ ಗಳ ನೆರವಿನಿಂದ ಆಸ್ಟ್ರೇಲಿಯ ವಿರುದ್ಧ ಟೀಂ ಇಂಡಿಯಾ 6 ವಿಕೆಟ್ ಗಳ ಜಯ ಗಳಿಸಿದೆ. ಗೆಲುವಿಗೆ 202 ರನ್ ಗಳ ಕಠಿಣ ಸವಾಲನ್ನು ಪಡೆದ ಭಾರತಕ್ಕೆ ಯುವರಾಜ್ ಸಿಂಗ್ ಔಟಾಗದೆ 77 ರನ್(55ಎ, 8ಬೌ, 5ಸಿ) ಮತ್ತು ಧೋನಿ ಔಟಾಗದೆ 24 ರನ್(21ಎ, 2ಬೌ) ಸೇರಿಸಿ ಇನ್ನೂ ಎರಡು ಎಸೆತಗಳು ಬಾಕಿ ಉಳಿದಿರುವಂತೆ 4 ವಿಕೆಟ್ ನಷ್ಟದಲ್ಲಿ ಅಗತ್ಯದ ರನ್ ಸೇರಿಸಿ ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮುನ್ನ ಆಸ್ಟ್ರೇಲಿಯದ ಪರ ಆರಂಭಿಕ ಆಟಗಾರ ಆರನ್ ಫಿಂಚ್, ಮ್ಯಾಕ್ಸ್ ವೆಲ್ ಹಾಗೂ ಮ್ಯಾಡಿಸನ್ ಬ್ಯಾಟಿಂಗ್ ನೆರವಿನಿಂದ 200 ರನ್ ಗಡಿ ದಾಟಿದರು. ಭಾರತದ ಪರ ಬೌಲರ್ ಭುವನೇಶ್ವರ ಕುಮಾರ್ (3-35) ಮತ್ತು ವಿನಯ್ ಕುಮಾರ್ (3-25) ಯಶಸ್ವಿಯಾದರು. ಜಡೇಜ 23ಕ್ಕೆ 1 ವಿಕೆಟ್ ಪಡೆದರು. ಆರ್.ಅಶ್ವಿನ್, ಇಶಾಂತ್ ಶರ್ಮ, ವಿರಾಟ್ ಕೊಹ್ಲಿ ಎಸೆತಕ್ಕೆ ಭಾರಿ ಪೆಟ್ಟು ಬಿತ್ತು. ಭಾರತದ ವಿಜಯೋತ್ಸವ ಚಿತ್ರಗಳು ಇಲ್ಲಿವೆ ನೋಡಿ

ಯುವಿ ಆರ್ಭಟ

ಕ್ಯಾನ್ಸರ್ ಗೆದ್ದ ಯುವರಾಜ್ ಸಿಂಗ್ ಮತ್ತೊಮ್ಮೆ ಭಾರತ ತಂಡಕ್ಕೆ ಮರಳಿದ್ದು 35 ಎಸೆತಗಳಲ್ಲಿ 77 ರನ್ ಗಳಿಸಿ ಭರ್ಜರಿ ಆಟ ಪ್ರದರ್ಶಿಸಿದರು.

ಯುವರಾಜ್ ಹಾಗೂ ಧೋನಿ ಜೋಡಿ

ಯುವರಾಜ್ ಸಿಂಗ್ ಹಾಗೂ ಎಂಎಸ್ ಧೋನಿ ಮುರಿಯದ 102 ರನ್ ಗಳ ಜೊತೆಯಾಟ ಪಂದ್ಯದಲ್ಲಿ ಮಹತ್ವದ ಪಾತ್ರ ವಹಿಸಿತು.

ಜಡೇಜ ಸೂಪರ್

ಸ್ಪಿನ್ನರ್ ಗಳ ಪೈಕಿ ರವೀಂದ್ರ ಜಡೇಜ 4 ಓವರ್ ಗಳಲಿ 23 ರನ್ ನೀಡಿ 1 ವಿಕೆಟ್ ಕಿತ್ತು ಉತ್ತಮ ಪ್ರದರ್ಶನ ನೀಡಿದರು.

ವಿನಯ್ ಗೆ ಮೂರು ವಿಕೆಟ್

ವ್ಯಾಟ್ಸನ್ ವಿಕೆಟ್ ಸೇರಿದಂತೆ ಮೂರು ವಿಕೆಟ್ ಕಿತ್ತ ಕರ್ನಾಟಕದ ಆಟಗಾರ ವಿನಯ್ ಕುಮಾರ್ 26 ರನ್ನಿತ್ತು 3 ವಿಕೆಟ್ ಕಿತ್ತಿದ್ದಲ್ಲದೆ ಅದ್ಭುತ ಕ್ಯಾಚ್ ಹಿಡಿದು ತಂಡಕ್ಕೆ ಉತ್ತಮ ಕೊಡುಗೆ ನೀಡಿದರು.

ಫಿಂಚ್ ಅಮೋಘ ಬ್ಯಾಟಿಂಗ್

ಆಸೀಸ್ ಪರ ಆರಂಭಿಕ ಬ್ಯಾಟ್ಸ್ ಮನ್ ಅರೋನ್ ಫಿಂಚ್ 52 ಎಸೆತದಲ್ಲಿ 89 ರನ್ ಚೆಚ್ಚಿದರು.

ಮ್ಯಾಡಿಸನ್ ಕಮಾಲ್

ಮೊದಲ ಪಂದ್ಯದಲ್ಲೆ ಉತ್ತಮ ಪ್ರದರ್ಶಿಸಿದ ನಿಕ್ ಮ್ಯಾಡಿಂಸನ್ 16 ಎಸೆತಗಳಲ್ಲಿ 34 ರನ್ ಚೆಚ್ಚಿದರು.

English summary
Yuvraj Singh made a superb comeback to the Indian team with a 35-ball 77 not out to script the team's six-wicket win over Australia in the one off Twenty20 International here at the Saurashtra Cricket Association (SCA) Stadium on Thursday night.
ಅಭಿಪ್ರಾಯ ಬರೆಯಿರಿ