Englishहिन्दीമലയാളംதமிழ்తెలుగు

ಸಚಿನ್ ತೆಂಡೂಲ್ಕರ್ 50000 ರನ್ ನಾಟೌಟ್

Posted by:
Published: Sunday, October 6, 2013, 15:38 [IST]
 

ನವದೆಹಲಿ, ಅ.6: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ತಮ್ಮ ದಾಖಲೆಯ ಪಟ್ಟಿ ಶನಿವಾರ ನಡೆದ ಚಾಂಪಿಯನ್ಸ್ ಲೀಗ್ ಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ತಮ್ಮ ವೃತ್ತಿ ಜೀವನದ 50 ಸಾವಿರ ರನ್ ಪೂರೈಸಿದರು.

ಕ್ರಿಕೆಟ್ ಜಗತ್ತಿನಲ್ಲಿ ಇಲ್ಲಿವರೆಗೂ ಸುಮಾರು 15 ಜನ ಆಟಗಾರರು 50000 ರನ್ ಗಡಿದಾಟಿದ್ದಾರೆ. ವಿಶ್ವದ 16ನೇ ಆಟಗಾರರಾಗಿ ಸಚಿನ್ ಸೇರ್ಪಡೆಗೊಂಡಿದ್ದಾರೆ. ಅಲ್ಲದೇ ಈ ಪಟ್ಟಿಗೆ ಸೇರಿದ ಮೊದಲ ಏಷ್ಯನ್ ಆಟಗಾರ ಎನಿಸಿದ್ದಾರೆ.

ಟ್ರಿನಿಡಾಡ್ ಅಂಡ್ ಟೋಬ್ಯಾಗೊ ವಿರುದ್ಧದ ಚಾಂಪಿಯನ್ಸ್ ಲೀಗ್ ಸೆಮಿಫೈನಲ್ ಪಂದ್ಯದಲ್ಲಿ ಸಚಿನ್ ಈ ಸಾಧನೆ ಜತೆಗೆ ತಂಡದ ಗೆಲುವನ್ನು ಆಚರಿಸಿಕೊಂಡರು. ಟ್ರಿನಿಡಾಡ್ ತಂಡವನ್ನು ಮುಂಬೈ ತಂಡಾ 6 ವಿಕೆಟ್ ಗಳಿಂದ ಸೋಲಿಸಿತು. ಫೈನಲ್ ನಲ್ಲಿ ಮುಂಬೈ ತಂಡ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಮುಖಾಮುಖಿಯಾಗಲಿದೆ.

ಸಚಿನ್ ತೆಂಡೂಲ್ಕರ್ 50000 ರನ್ ನಾಟೌಟ್

50 ಸಾವಿರ ರನ್ ಗಡಿ ದಾಟಲು ಸಚಿನ್ ಗೆ 26 ರನ್ ಅವಶ್ಯವಿತ್ತು. ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ವೆಸ್ಟ್ ಇಂಡೀಸ್ ನ ಸ್ಪಿನ್ನರ್ ಸುನೀಲ್ ನಾರಾಯಣ್ ಅವರ ಓವರ್ ನಲ್ಲಿ ಒಂದು ರನ್ ಗಳಿಸಿ 50 ಸಾವಿರ ರನ್ ಗಡಿ ದಾಟಿದರು. ಸಚಿನ್ ಈ ಪಂದ್ಯದಲ್ಲಿ 35 ರನ್ ಸ್ಕೋರ್ ಮಾಡಿದರು.

ಇಂಗ್ಲೆಂಡಿನ ಮಾಜಿ ಆಟಗಾರ ಗ್ರಹಾಂ ಗೂಚ್ ಅವರು ಅತ್ಯಧಿಕ ರನ್ ಕಲೆ ಹಾಕಿರುವ ಕ್ರಿಕೆಟರ್ ಎನಿಸಿದ್ದಾರೆ. ಎಲ್ಲಾ ಪ್ರಕಾರಗಳು ಸೇರಿ ಸುಮಾರು 67,057 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.

ಭಾರತದ ಸಚಿನ್ ತೆಂಡೂಲ್ಕರ್ ಅವರು 953 ಪಂದ್ಯಗಳಿಂದ (307 ಪ್ರಥಮ ದರ್ಜೆ, 551 ಎ ಶ್ರೇಣಿ ಹಾಗೂ 95 ಟಿ 20) 50,009 ರನ್ ಗಳಿಸಿದ್ದಾರೆ. ಈ ರನ್ ಗಳಿಕೆ ವಿಂಗಂಡಿಸಿದರೆ, ಪ್ರಥಮದರ್ಜೆ : 25228, ಎ ಶ್ರೇಣಿ : 21999, ಟಿ20: 2782 ರನ್ ಗಳಾಗುತ್ತದೆ.

ಚಾಂಪಿಯನ್ಸ್ ಲೀಗ್ ಫೈನಲ್ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಅವರು ಆಡುತ್ತಿರುವುದರಿಂದ 50,009 ಪ್ಲಸ್ ಹಾಗೂ ಕೌಂಟಿಂಗ್ ಎನ್ನಬಹುದು. ಈ ಪಂದ್ಯದ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ರಾಹುಲ್ ದ್ರಾವಿಡ್ ಅವರ ಕಟ್ಟ ಕಡೆಯ ಪಂದ್ಯವಾಗಿದೆ. ಸಚಿನ್ ಅವರು ಇನ್ಮುಂದೆ ಟಿ20 ಪಂದ್ಯಗಳಲ್ಲಿ ಕಾಣಿಸಿಕೊಳ್ಳುವುದು ಅನುಮಾನವಾದರೂ 200ನೇ ಟೆಸ್ಟ್ ಆಡಲು ತುದಿಗಾಲಲ್ಲಿ ನಿಂತಿದ್ದಾರೆ.

English summary
Sachin Tendulkar added another record to his illustrious career when he became the first Asian batsman to complete 50,000 runs across all formats during the Champions League 2013 semi-final here on Saturday night (October 5).
ಅಭಿಪ್ರಾಯ ಬರೆಯಿರಿ