Englishहिन्दीമലയാളംதமிழ்తెలుగు

ಆಸ್ಟ್ರೇಲಿಯಾ ಸರಣಿ: ತಂಡಕ್ಕೆ ಮರಳಿದ ಯುವರಾಜ್

Posted by:
Updated: Monday, September 30, 2013, 14:48 [IST]
 

ಆಸ್ಟ್ರೇಲಿಯಾ ಸರಣಿ: ತಂಡಕ್ಕೆ ಮರಳಿದ ಯುವರಾಜ್
 

ಬೆಂಗಳೂರು, ಸೆ.30 : ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಯುವರಾಜ್ ಸಿಂಗ್ ಅವರು ಆಯ್ಕೆಯಾಗಿದ್ದಾರೆ.

ವೀರೆಂದರ್ ಸೆಹ್ವಾಗ್, ಗೌತಮ್ ಗಂಭೀರ್, ಹರ್ಭಜನ್ ಸಿಂಗ್ ಹಾಗೂ ಜಹೀರ್ ಖಾನ್ ಮತ್ತೊಮ್ಮೆ ಆಯ್ಕೆದಾರರ ಅವಕೃಪೆಗೆ ಒಳಗಾಗಿದ್ದಾರೆ.

ಸಂದೀಪ್ ಪಾಟೀಲ್ ನೇತೃತ್ವದ ಸಮಿತಿ ಯುವರಾಜ್ ಸಿಂಗ್ ಅವರ ಫಾರ್ಮ್ ನೋಡಿಕೊಂಡು ಮತ್ತೊಂದು ಅವಕಾಶ ನೀಡಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಇಂಡಿಯಾ ಎ ಹಾಗೂ ಇಂಡಿಯಾ ಬ್ಲೂ ತಂಡದಲ್ಲಿ ಆಡಿದ್ದ ಯುವರಾಜ್ ಸಿಂಗ್ ಉತ್ತಮ ಪ್ರದರ್ಶನ ನೀಡಿದ್ದರು.

ಜಿಂಬಾಬ್ವೆ ವಿರುದ್ಧದ ಪಂದ್ಯವಾಡಿದ್ದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್, ಚೇತೇಶ್ವರ್ ಪೂಜಾರ, ಅಂಜಿಕ್ಯ ರಹಾನೆ, ಪರ್ವೇಜ್ ರಸೂಲ್ ಹಾಗೂ ಮೋಹಿತ್ ಶರ್ಮ ಅವರನ್ನು ಕೈಬಿಡಲಾಗಿದೆ. ಚಾಂಪಿಯನ್ಸ್ ಟ್ರೋಫಿ ಆಡಿದ್ದ ತಂಡದಲ್ಲಿದ್ದ ಉಮೇಶ್ ಯಾದವ್ ಅವರು ಸಹ ಅವಕೃಪೆಗೆ ಒಳಗಾಗಿದ್ದಾರೆ.

ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಮುಂದಿನ ತಿಂಗಳು ನಡೆಯಲಿರುವ ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಹಾಗೂ ಏಕೈಕ ಟಿ20 ಪಂದ್ಯಗಳಿಗೆ ಆಯ್ಕೆಗೊಂಡಿರುವ ತಂಡ ಇಂತಿದೆ:

ಎಂಎಸ್ ಧೋನಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಸುರೇಶ್ ರೈನಾ, ರವೀಂದ್ರ ಜಡೇಜ, ಆರ್ ಆಶ್ವಿನ್, ಭುವನೇಶ್ವರ್ ಕುಮಾರ್, ಇಶಾಂತ್ ಶರ್ಮಾ, ಆರ್ ವಿನಯ್ ಕುಮಾರ್, ಅಮಿತ್ ಮಿಶ್ರಾ, ಅಂಬಟಿ ರಾಯುಡು, ಶಮಿ ಅಹ್ಮದ್, ಜಯದೇವ್ ಉನದ್ಕತ್

ಆಸ್ಟ್ರೇಲಿಯಾ ಸರಣಿ ವೇಳಾಪಟ್ಟಿ (ಎಲ್ಲಾ ಪಂದ್ಯಗಳು ಹಗಲು/ರಾತ್ರಿ)
ಅಕ್ಟೋಬರ್ 10: ಟಿ20, ರಾಜ್ ಕೋಟ್
ಅಕ್ಟೋಬರ್ 13: ಮೊದಲ ಏಕದಿನ ಪಂದ್ಯ : ಪುಣೆ
ಅಕ್ಟೋಬರ್ 16: ಎರಡನೇ ಏಕದಿನ ಪಂದ್ಯ : ಜೈಪುರ
ಅಕ್ಟೋಬರ್ 19: ಮೂರನೇ ಏಕದಿನ ಪಂದ್ಯ : ಮೊಹಾಲಿ
ಅಕ್ಟೋಬರ್ 23: ನಾಲ್ಕನೇ ಏಕದಿನ ಪಂದ್ಯ : ರಾಂಚಿ
ಅಕ್ಟೋಬರ್ 26: ಐದನೇ ಏಕದಿನ ಪಂದ್ಯ : ಕಟಕ್
ಅಕ್ಟೋಬರ್ 30: ಆರನೇ ಏಕದಿನ ಪಂದ್ಯ : ನಾಗಪುರ
ನವೆಂಬರ್ 02: ಏಳನೇ ಏಕದಿನ ಪಂದ್ಯ : ಬೆಂಗಳೂರು

ದಟ್ಸ್ ಕ್ರಿಕೆಟ್

Story first published:  Monday, September 30, 2013, 12:32 [IST]
English summary
Yuvraj Singh is selected in the squad to play three ODIs and one-off T20 in the homes series against Australia next month. The selectors have picked a 15-man squad for the lone T20I and first three ODIs.India will play one T20 International and seven ODIs against Australia starting from October 10.
ಅಭಿಪ್ರಾಯ ಬರೆಯಿರಿ