Englishहिन्दीമലയാളംதமிழ்తెలుగు

ಅಧ್ಯಕ್ಷರಾಗಿ ಶ್ರೀನಿವಾಸನ್ ಆಯ್ಕೆ, ಅಧಿಕಾರ ಸದ್ಯಕ್ಕಿಲ್ಲ

Posted by:
Updated: Sunday, September 29, 2013, 12:41 [IST]
 

ಚೆನ್ನೈ, ಸೆ.29: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷರಾಗಿ ಸತತ ಮೂರನೇ ಬಾರಿಗೆ ಉದ್ಯಮಿ ಎನ್ ಶ್ರೀನಿವಾಸನ್ ಆಯ್ಕೆಗೊಂಡಿದ್ದಾರೆ. ಆದರೆ, ಸುಪ್ರೀಂಕೋರ್ಟ್ ನಿರ್ದೇಶನ ಸಿಗುವ ತನಕ ಅಧಿಕಾರ ವಹಿಸಿಕೊಳ್ಳುವಂತಿಲ್ಲ.

ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಶ್ರೀನಿವಾಸನ್ ಹೆಸರು ಬಲವಾಗಿ ಕೇಳಿ ಬಂದಿತ್ತು. ಹೀಗಾಗಿ ಭಾನುವಾರ ನಡೆಡ ಬಿಸಿಸಿಐ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸಲು ಶ್ರೀನಿವಾಸನ್ ಅವರು ಸುಪ್ರೀಂಕೋರ್ಟ್ ಅನುಮತಿ ಪಡೆಯಬೇಕಾಗಿತ್ತು.

ಚುನಾವಣೆಗೆ ಸ್ಪರ್ಧಿಸಲು ಅನುಮತಿ ನೀಡಿರುವ ಸುಪ್ರೀಂಕೋರ್ಟ್, ಮುಂದಿನ ಆದೇಶದ ತನಕ ಅಧಿಕಾರ ಸ್ವೀಕರಿಸದಿರುವಂತೆ ಸೂಚಿಸಿದೆ.

ದಕ್ಷಿಣ ಭಾರತದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಗೋವಾ, ತಮಿಳುನಾಡು, ಕೇರಳ ಹಾಗೂ ಹೈದರಾಬಾದ್ ಕ್ರಿಕೆಟ್ ಸಂಸ್ಥೆಗಳು ಶ್ರೀನಿವಾಸನ್ ಹೆಸರು ಶಿಫಾರಸು ಮಾಡಿ ಸಂಪೂರ್ಣ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಶ್ರೀನಿವಾಸನ್ ಆಯ್ಕೆ ಸುಲಭವಾಯಿತು.

ಇಬ್ಬರು ಉಪಾಧ್ಯಕ್ಷರು: ಕೇಂದ್ರ ವಲಯದ ಸುಧೀರ್ ದಬೀರ್ ಹಾಗೂ ಪಶ್ಚಿಮ ವಲಯದ ನಿರಂಜನ್ ಶಾ ಅವರು ರಾಜೀವ್ ಶುಕ್ಲಾ ಹಾಗೂ ರವಿ ಸಾವಂತ್ ಅವರ ಬದಲಿಗೆ ಅಧಿಕಾರ ಸ್ವೀಕರಿಸುವ ಸಾಧ್ಯತೆ ನಿಚ್ಚಳವಾಗಿದೆ.

ಅಧ್ಯಕ್ಷರಾಗಿ ಶ್ರೀನಿವಾಸನ್ ಆಯ್ಕೆ, ಅಧಿಕಾರ ಸದ್ಯಕ್ಕಿಲ್ಲ

ಸಾವಂತ್ ಅವರು ಖಜಾಂಚಿ ಸ್ಥಾನವನ್ನು ತೊರೆಯುವ ಸಾಧ್ಯತೆಯಿದ್ದು ಹರ್ಯಾಣದ ಅನಿರುದ್ಧ್ ಚೌಧರಿ ಅವರಿಗೆ ಸ್ಥಾನ ಸಿಗಲಿದೆ. ಅನಿರುದ್ಧ್ ಅವರು ಐಪಿಎಲ್ ನ ಮುಂದಿನ ಚೇರ್ಮನ್ ಆಗುವ ಸಾಧ್ಯತೆಯೂ ಇದೆ.

ಉತ್ತರ ವಲಯದ ಉಪಾಧ್ಯಕ್ಷ ಬಿಜೆಪಿ ನಾಯಕ ಅರುಣ್ ಜೇಟ್ಲಿ ಅವರು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಂದಿನ ವರ್ಷದ ತನಕ ಸಂಸ್ಥೆಯಲ್ಲಿ ಮುಂದುವರೆಯಲು ಸಾಧ್ಯವಿಲ್ಲ ಎಂದು ಅಧ್ಯಕ್ಷರಿಗೆ ತಿಳಿಸಿದ್ದಾರೆ. ಜೇಟ್ಲಿ ಸ್ಥಾನಕ್ಕೆ ದೆಹಲಿಯ ಎಸ್ ಪಿ ಬನ್ಸಾಲ್ ಬರಲಿದ್ದಾರೆ.

ಶ್ರೀನಿವಾಸನ್ ಅವರ ಮರು ಆಯ್ಕೆಗೆ ಬಿಹಾರ ಕ್ರಿಕೆಟ್ ಸಂಸ್ಥೆ(ಸಿಎಬಿ) ಕಾರ್ಯದರ್ಶಿ ಆದಿತ್ಯ ವರ್ಮಾ ವಿರೋಧ ವ್ಯಕ್ತ ಪಡಿಸಿ ಕೋರ್ಟ್ ಮೆಟ್ಟಿಲೇರಿದ್ದನ್ನು ಇಲ್ಲಿ ಸ್ಮರಿಸಬಹುದು. (ಪಿಟಿಐ)

Story first published:  Sunday, September 29, 2013, 12:40 [IST]
English summary
Defying intense criticism, N Srinivasan was elected unopposed as BCCI President for a third year during the Board's AGM on Sunday(sept 29) even though he will not take charge till further orders from the Supreme Court.
ಅಭಿಪ್ರಾಯ ಬರೆಯಿರಿ