Englishहिन्दीമലയാളംதமிழ்తెలుగు

ಸಿಎಲ್ಟಿ20: ಸಚಿನ್ vs ರಾಹುಲ್ ಕದನ ಚಿತ್ರಗಳು

Posted by:
Published: Monday, September 23, 2013, 15:09 [IST]
 

ಜೈಪುರ, ಸೆ.23: ಈ ಬಾರಿಯ ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಟೂರ್ನಿ ಆರಂಭದಲ್ಲೇ ಕ್ರಿಕೆಟ್ ಲೋಕದ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಅವರನ್ನು ಒಂದೇ ಪಂದ್ಯದಲ್ಲಿ ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ಸಚಿನ್ ಹಾಗೂ ರಾಹುಲ್ ನಡುವಿನ ಪೈಪೋಟಿ ಎಂದೇ ಪ್ರಚಾರ ಪಡೆದಿದ್ದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ರಾಜಸ್ಥಾನ ರಾಯಲ್ಸ್ ತಂಡ 7 ವಿಕೆಟ್ ಗಳಿಂದ ಸೋಲಿಸಿದೆ.

ಸ್ಪಾಟ್ ಫಿಕ್ಸಿಂಗ್ ಪ್ರಕರಣದ ನಂತರ ರಾಯಲ್ಸ್ ಗೆ ಈ ಗೆಲುವು ಹೊಸ ಹುರುಪು ನೀಡಿದೆ. ರಾಯಲ್ಸ್ ಪರ ವಿಕ್ರಮ್ ಜೀತ್ ಮಲ್ಲಿಕ್ ಹಾಗೂ ಸಂಜು ಸ್ಯಾಮ್ಸನ್ ಉತ್ತಮ ಆಟ ಪ್ರದರ್ಶಿಸಿ ರಾಹುಲ್ ಪಡೆಗೆ ಸತತ 9ನೇ ಗೆಲುವು ತಂದು ಕೊಟ್ಟರು. ಐಪಿಎಲ್ 6 ನಲ್ಲಿ 8 ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸಿದ್ದು ರಾಹುಲ್ ಪಡೆ ಸಾಧನೆಯಾಗಿತ್ತು. 143ರನ್ ಚೇಸ್ ಮಾಡಿ ಇನ್ನೂ 2 ಎಸೆತ ಬಾಕಿ ಇರುವಂತೆ ಗೆಲುವು ಸಾಧಿಸಿದ ರಾಜಸ್ಥಾನ ರಾಯಲ್ಸ್ ವಿಜಯೋತ್ಸವ ಚಿತ್ರಗಳು ಇಲ್ಲಿವೆ ನೋಡಿ

ದಿನೇಶ್ ಕಾರ್ತಿಕ್

ಮುಂಬೈ ತಂಡ ಆಟಗಾರ ದಿನೇಶ್ ಕಾರ್ತಿಕ್ ಅವರು ವಿಕ್ರಮ್ ಜೀತ್ ಮಲ್ಲಿಕ್ ಗೆ ಕ್ಲೀನ್ ಬೋಲ್ಡ್ ಆಗಿದ್ದು ಹೀಗೆ

ರಾಹುಲ್ ಆಟ ವ್ಯರ್ಥ

ನಾಯಕ ರೋಹಿತ್ ಶರ್ಮ ಅವರು 37 ಎಸೆತದಲಿ 44 ರನ್ ಗಳಿಸಿದ್ದು ವ್ಯರ್ಥವಾಯಿತು. ರಿಕಿ ಪಾಂಟಿಂಗ್, ಹರ್ಭಜನ್ ಸಿಂಗ್ ನಂತರ ಸಚಿನ್ ಅವರಿಗೆ ಮತ್ತೆ ನಾಯಕ ಸ್ಥಾನದ ಆಫರ್ ನೀಡಲಾಗಿತ್ತು. ಆದರೆ, ರೋಹಿತ್ ಸೂಕ್ತ ಎಂದು ಸಚಿನ್ ಅವರು ಕ್ಯಾಪ್ಟನ್ ಆಗಲು ಒಪ್ಪಲಿಲ್ಲ

ರಾಹುಲ್ ನಿರಾಶೆ

ಮುಂಬೈ ಇಂಡಿಯನ್ಸ್ ತಂಡದ ಆಟಗಾರರು ರಾಜಸ್ಥಾನ ರಾಯಲ್ಸ್ ನಾಯಕ ರಾಹುಲ್ ದ್ರಾವಿಡ್ ಅವರನ್ನು ಕೇವಲ 1 ರನ್ ಗೆ ಔಟ್ ಮಾಡಿದ ಸಂಭ್ರಮದಲ್ಲಿದ್ದಾರೆ. ನ್ಯಾಥನ್ ಬೌಲಿಂಗ್ ನಲ್ಲಿ ಕೀರನ್ ಪೊಲ್ಲಾರ್ಡ್ ಗೆ ದ್ರಾವಿಡ್ ಕ್ಯಾಚಿತ್ತು ನಿರ್ಗಮಿಸಿದರು.

ವಿಕ್ರಮ ಜೀತ್ ಭರವಸೆ

ವೇಗಿ ವಿಕ್ರಮ್ ಜೀತ್ ಮೂರು ವಿಕೆಟ್ ಕೀಳುವ ಮೂಲಕ ರಾಹುಲ್ ಪಡೆಗೆ ಹೊಸ ಭರವಸೆ ಮೂಡಿಸಿದ್ದಾರೆ.

ನಿರೀಕ್ಷೆಗೆ ತಕ್ಕ ಆಟ

ಚಾಂಪಿಯನ್ಸ್ ಲೀಗ್ ಟಿ20ಯ ಕಿರಿಯ ಆಟಗಾರ ಎನಿಸಿರುವ 18 ವರ್ಷದ ರಾಯಲ್ಸ್ ಆಟಗಾರ ಸಂಜು ಸಾಮ್ಸನ್ ನಿರೀಕ್ಷೆಗೆ ತಕ್ಕ ಆಟ ಪ್ರದರ್ಶಿಸಿ ಅರ್ಧ ಶತಕ ದಾಖಲಿಸಿದರು.

English summary
Rajasthan Royals maintained their unbeaten record at home - Sawai Mansingh Stadium by registering a 7-wicket win against Mumbai Indians in Champions League.
ಅಭಿಪ್ರಾಯ ಬರೆಯಿರಿ