Englishहिन्दीമലയാളംதமிழ்తెలుగు

ಚಿತ್ರ:ಎಂಎಸ್ ಧೋನಿ ಹೊಸ ಹೇರ್ ಸ್ಟೈಲ್

Posted by:
Published: Monday, September 23, 2013, 15:43 [IST]
 

ರಾಂಚಿ, ಸೆ.23: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಅವರು ತಮ್ಮ ತವರು ನೆಲದಲ್ಲಿ ವಿನೂತನ ಹೇರ್ ಸ್ಟೈಲ್ ಕಾಣಿಸಿಕೊಂಡಿದ್ದಾರೆ.

ಜಾರ್ಖಂಡ್ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಚಾಂಪಿಯನ್ಸ್ ಲೀಗ್ ಟಿ 20 ಪಂದ್ಯದಲ್ಲಿ ಎಂಎದ್ ಧೋನಿ ಅವರ ಹೇರ್ ಸ್ಟೈಲ್ ಅಭಿಮಾನಿಗಳಿಗೆ ಖುಷಿ ತಂದಿದೆ.

ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ mohawk ಮಾದರಿ ಕೇಶ ವಿನ್ಯಾಸದಲ್ಲಿ ಧೋನಿ ಕಾಣಿಸಿಕೊಂಡಿದ್ದರು. ಟೈಟನ್ಸ್ ವಿರುದ್ಧ ಧೋನಿ ಪಡೆ ವಿಜಯೋತ್ಸವ ಆಚರಿಸಿದೆ.

ಧೋನಿ ಕೇಶ ವಿನ್ಯಾಸ ಫೇಮಸ್: ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಸಂದರ್ಭದಲ್ಲಿ ಉದ್ದುದ್ದಾ ಕೂದಲು ಬಿಟ್ಟಿದ್ದ ಧೋನಿ ಎಲ್ಲರನ್ನು ಸೆಳೆದಿದ್ದರು. 2006ರಲ್ಲಿ ಪಾಕಿಸ್ತಾನ ಪ್ರವಾಸದ ವೇಳೆ ಅಂದಿನ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಕೂಡಾ ಧೋನಿ ಹೇರ್ ಸ್ಟೈಲ್ ಗೆ ನಾನು ಕೂಡಾ ಫ್ಯಾನ್ ಎಂದಿದ್ದರು.

2007ರಲ್ಲಿ ಟಿ 20 ವಿಶ್ವಕಪ್ ಗೆದ್ದ ತಂಡದ ನಾಯಕರಾಗಿದ್ದ ಧೋನಿ ಹೊಸ ಬಗೆ ಕೇಶ ವಿನ್ಯಾಸದಲ್ಲಿ ಕಾಣಿಸಿಕೊಂಡಿದ್ದರು. 2011ರಲ್ಲಿ ವಿಶ್ವಕಪ್ ಗೆದ್ದಾಗಲೂ ಧೋನಿ ಹೊಸ ರೀತಿ ಹೇರ್ ಸ್ಟೈಲ್ ಜನಪ್ರಿಯತೆ ಪಡೆದಿತ್ತು. ಈಗ ಫುಟ್ಬಾಲ್ ಪ್ರಪಂಚದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ mohawk ಹೇರ್ ಸ್ಟೈಲ್ ನಲ್ಲಿ ಧೋನಿ ಕಾಣಿಸಿಕೊಂಡ ಮೇಲೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಚರ್ಚೆ ಆರಂಭವಾಗಿದೆ... ಧೋನಿ ಹೇರ್ ಸ್ಟೈಲ್ ಗಳನ್ನು ನೋಡಿ ...

ಮುಷರಫ್ ಗೆ ಇಷ್ಟಪಟ್ಟ ಸ್ಟೈಲ್

ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಸಂದರ್ಭದಲ್ಲಿ ಉದ್ದುದ್ದಾ ಕೂದಲು ಬಿಟ್ಟಿದ್ದ ಧೋನಿ ಎಲ್ಲರನ್ನು ಸೆಳೆದಿದ್ದರು.

ಹೇರ್ ಸ್ಟೈಲ್ ಇಷ್ಟ

ಬಗೆ ಬಗೆ ಹೇರ್ ಸ್ಟೈಲ್ ಮಾಡಿಕೊಳ್ಳುವುದು ಧೋನಿಗೆ ಇಷ್ಟವಂತೆ.

ಇದು ಒಂದು ಸ್ಟೈಲ್

ಮಹಿಳೆಯರನ್ನು ಕ್ರಿಕೆಟ್ ನತ್ತ ಆಕರ್ಷಿಸುವ ಒಂದು ತಂತ್ರ ಇರಬಹುದೇ ಎಂದು ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ

ವಿಶ್ವಕಪ್ ಜತೆ

ವಿಶ್ವಕಪ್ ಗೆದ್ದ ಮೇಲೆ ಹರಕೆ ಹೊತ್ತಿದ್ದಕ್ಕೋ ಏನೋ ತಲೆ ನುಣ್ಣಗೆ ಮಾಡಿಕೊಂಡಿದ್ದ ಧೋನಿ

ಹೀಗಿದೆ ಹೊಸ ಸ್ಟೈಲ್

ಫುಟ್ಬಾಲ್ ನಲ್ಲಿ ರೌಲ್, ಮಾರಿಯೋ ಬಾಲೊಟೆಲ್ಲಿ ಈ ರೀತಿ ಸ್ಟೈಲ್ ಮಾಡಿ ಪ್ರೇಕ್ಷಕರ ಆಕರ್ಷಣೆಗೆ ಒಳಪಟ್ಟಿದ್ದರು.

ಧೋನಿ ಸ್ಟೈಲ್ ಯಾರಿಗಾಗಿ

ಫುಟ್ಬಾಲ್ ಪ್ರೇಮಿಯಾಗಿರುವ ಧೋನಿ ಅವರು ಫುಟ್ಬಾಲ್ ಆಟಗಾರರ ಕೇಶ ವಿನ್ಯಾಸ ತಾವೂ ಅಳವಡಿಸಿಕೊಂಡಿರಬಹುದು. ಆದರೆ, ಕ್ರಿಕೆಟ್ ಪಂದ್ಯದ ವೇಳೆ ಸದಾಕಾಲ ಹೆಲ್ಮೆಟ್ ಅಥವಾ ಕ್ಯಾಪ್ ಧರಿಸುವ ಧೋನಿ ಹೇರ್ ಸ್ಟೈಲ್ ಯಾರಿಗಾಗಿ .. ಅದಕ್ಕೆ ಅವರೇ ಉತ್ತರಿಸಬೇಕು

ಸಿಎಸ್ ಕೆ ಅಭಿಮಾನಿಗಳು

ಧೋನಿ ನಮ್ಮ ಚೆನ್ನೈ ತಂಡದ ನಾಯಕ..ಹಳೆ ತಮಿಳು ಚಿತ್ರದಲ್ಲಿ ಸೆಂಥಿಲ್ ಮಾಡಿದ್ದ ಹೇರ್ ಸ್ಟೈಲ್ ನೋಡಿ ತಾವು ಅದೇ ರೀತಿ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ ಎನ್ನುತ್ತಿದ್ದಾರಂತೆ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳುLaughing

ಧೋನಿ ಹೇರ್ ಸ್ಟೈಲ್ ಬಗ್ಗೆ ಟ್ವೀಟ್

ಧೋನಿ ಹೇರ್ ಸ್ಟೈಲ್ ಬಗ್ಗೆ ಹೀಗೊಂದು ಟ್ವೀಟ್

English summary
Chennai Super Kings captain MS Dhoni surprised his home fans at the JSCA International Cricket Stadium by revealing a new hairstyle.
ಅಭಿಪ್ರಾಯ ಬರೆಯಿರಿ