Englishहिन्दीമലയാളംதமிழ்తెలుగు

2013-14 ಸೀಸನ್: ರಣಜಿ ತಂಡಕ್ಕೆ ವಿನಯ್ ನಾಯಕ

Posted by:
Updated: Friday, September 20, 2013, 18:42 [IST]
 

2013-14 ಸೀಸನ್: ರಣಜಿ ತಂಡಕ್ಕೆ ವಿನಯ್ ನಾಯಕ
 

ಬೆಂಗಳೂರು, ಸೆ.20: 2013-14ರ ಋತುವಿನ ಕರ್ನಾಟಕ ರಣಜಿ ತಂಡಕ್ಕೆ ವೇಗಿ ವಿನಯ್ ಕುಮಾರ್ ಅವರನ್ನು ನಾಯಕರಾಗಿ ಆಯ್ಕೆ ಮಾಡಲಾಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಶುಕ್ರವಾರ ಸಂಭಾವ್ಯ ತಂಡ ಹಾಗೂ ನಾಯಕನ ಆಯ್ಕೆ ಪ್ರಕಟಿಸಿದೆ.

ಜೆ ಅಭಿರಾಮ್ ನೇತೃತ್ವದ ಆಯ್ಕೆ ಸಮಿತಿಯಲ್ಲಿ ದೊಡ್ಡ ಗಣೇಶ್, ಫಜಲ್ ಖಲೀಲ್, ಸಂಜಯ್ ದೇಸಾಯಿ ಅವರು ಶುಕ್ರವಾರ 30 ಮಂದಿ ಸಂಭಾವ್ಯ ತಂಡವನ್ನು ಹೆಸರಿಸಿದೆ. ಸೋಮವಾರ (ಸೆ.23) ದಿಂದ ಬೆಂಗಳೂರಿನಲ್ಲಿ ನಡೆಯಲಿರುವ ತರಬೇತಿ ಶಿಬಿರ ಆರಂಭಗೊಳ್ಳಲಿದ್ದು 30 ಸಂಭಾವ್ಯ ಆಟಗಾರರು ಸೇರ್ಪಡೆಯಾಗಲಿದ್ದಾರೆ.

ಇಂಡಿಯಾ ಎ ತಂಡದಲ್ಲಿದ್ದ ವಿನಯ್, ಉತ್ತಪ್ಪ ಅಲ್ಲದೆ ಸಂಭಾವ್ಯ ಪಟ್ಟಿಯಲ್ಲಿ ಅಭಿಮನ್ಯು ಮಿಥುನ್, ಮನೀಶ್ ಪಾಂಡೆ, ಸೈಯದ್ ಕಿರ್ಮಾನಿ ಅವರ ಮಗ ಸಾದಿಖ್ ಕಿರ್ಮಾನಿ ಅವರನ್ನು ಸೇರ್ಪಡೆಗೊಳಿಸಲಾಗಿದೆ.

ಮುಂಬೈ, ಪಂಜಾಬ್, ಗುಜರಾತ್, ದೆಹಲಿ, ಒಡಿಶಾ, ಹರ್ಯಾಣ, ವಿದರ್ಭ ಹಾಗೂ ಜಾರ್ಖಂಡ್ ಜತೆಯಲ್ಲಿ ಕರ್ನಾಟಕ 'ಎ' ಗುಂಪಿನಲ್ಲಿದೆ. ಕಳೆದ ವರ್ಷ ಕರ್ನಾಟಕ ತಂಡ ಕ್ವಾಟರ್ ಫೈನಲ್ ಹಂತ ದಾಟಲಾಗದೆ ಸೌರಾಷ್ಟ್ರದ ವಿರುದ್ಧ ಸೋತಿದ್ದನ್ನು ಇಲ್ಲಿ ಸ್ಮರಿಸಬಹುದು.

ಕರ್ನಾಟಕ ಪ್ರಸಕ್ತ ಋತುವಿನಲ್ಲಿ ತನ್ನ ಮೊದಲ ಪಂದ್ಯವನ್ನು ಜಾರ್ಖಂಡ್ ವಿರುದ್ಧ ನವೆಂಬರ್ 7 ರಂದು ಬೆಂಗಳೂರಿನಲ್ಲಿ ಆಡಲಿದೆ. ರಣಜಿ ಟ್ರೋಫಿ ಪಂದ್ಯಾವಳಿಗಳು ಅಕ್ಟೋಬರ್ 27ರಿಂದ ಆರಂಭವಾಗಲಿದೆ.

ಸಂಭಾವ್ಯ ತಂಡ ಇಂತಿದೆ: ಆರ್ ವಿನಯ್ ಕುಮಾರ್ (ನಾಯಕ), ರಾಬಿನ್ ಉತ್ತಪ್ಪ, ಕೆಎಲ್ ರಾಹುಲ್, ಸಮರ್ಥ್ ಆರ್, ಮಾಯಾಂಕ್ ಅಗರ್ವಾಲ್, ಗಣೇಶ್ ಸತೀಶ್, ಮನೀಶ್ ಪಾಂಡೆ, ಸ್ಟುವರ್ಟ್ ಬಿನ್ನಿ, ಕುನಾಲ್ ಕಪೂರ್, ಅಮಿತ್ ವರ್ಮಾ, ಕರುಣ್ ನಾಯರ್, ಅಭಿಮನ್ಯು ಮಿಥುನ್, ಶರತ್ ಎಚ್ ಎಸ್, ಅರವಿಂದ್ ಎಸ್, ಅಪ್ಪಣ್ಣ ಕೆಪಿ, ಅಕ್ಷಯ್ ಎಸ್ ಎಲ್, ಗೌತಮ್ ಸಿಎಂ(ವಿಕೆಟ್ ಕೀಪರ್), ರೋನಿತ್ ಮೋರೆ, ಅವಿನಾಶ್ ಕೆಸಿ, ಸುನೀಲ್ ರಾಜು, ಗೌತಮ್ ಕೆ, ಸುಚಿತ್ ಜೆ, ಅಬ್ರಾರ್ ಖಾಜಿ, ಎಸ್ಕೆ ಮೊಯಿದ್ದೀನ್, ಶ್ರೇಯಾಸ್ ಗೋಪಾಲ್, ಸಾದಿಕ್ ಕಿರ್ಮಾನಿ, ಪರಪ್ಪ ಮರ್ಡಿ, ಅಭಿಷೇಕ್ ರೆಡ್ಡಿ, ಅನಿರುದ್ಧ್ ಜೋಶಿ, ನಿಶ್ಚಲ್ ಡಿ,

ಬ್ಯಾಟಿಂಗ್ ಕೋಚ್ : ಜೆ ಅರುಣ್ ಕುಮಾರ್
ಬೌಲಿಂಗ್ ಕೋಚ್ : ಮಾನ್ಸೂರ್ ಅಲಿ ಖಾನ್ (ಇಬ್ಬರನ್ನು ಎರಡನೇ ಅವಧಿಗೆ ಮುಂದುವರೆಸಲಾಗಿದೆ)

ರಣಜಿ ಗುಂಪುಗಳು:
ಎ ಗುಂಪು : ಕರ್ನಾಟಕ, ಮುಂಬೈ, ಪಂಜಾಬ್, ಗುಜರಾತ್, ದೆಹಲಿ, ಒಡಿಶಾ, ಹರ್ಯಾಣ, ವಿದರ್ಭ ಹಾಗೂ ಜಾರ್ಖಂಡ್
ಬಿ ಗುಂಪು: ಸೌರಾಷ್ಟ್ರ, ಸರ್ವೀಸಸ್, ಉತ್ತರ ಪ್ರದೇಶ, ರೈಲ್ವೇಸ್, ಬರೋಡಾ, ಮಧ್ಯಪ್ರದೇಶ, ಬೆಂಗಾಳ, ತಮಿಳುನಾಡು
ಸಿ ಗುಂಪು : ಹೈದರಾಬಾದ್, ಮಹಾರಾಷ್ಟ್ರ, ಆಂಧ್ರಪ್ರದೇಶ, ಅಸ್ಸಾಂ, ಕೇರಳ, ಗೋವಾ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ
ದಟ್ಸ್ ಕ್ರಿಕೆಟ್

Story first published:  Friday, September 20, 2013, 18:22 [IST]
English summary
Paceman R Vinay Kumar has been retained as captain of Karnataka Ranji Trophy squad for the 2013-14 season, it was announced by the state selectors on Friday.
ಅಭಿಪ್ರಾಯ ಬರೆಯಿರಿ