Englishहिन्दीമലയാളംதமிழ்తెలుగు

ಶ್ರೀಶಾಂತ್ ಗೆ ನಿಷೇಧ ಹೇರಿ ಬಿಸಿಸಿಐ ಹೇಳಿದ್ದೇನು?

Posted by:
Updated: Friday, September 13, 2013, 19:24 [IST]
 

ಶ್ರೀಶಾಂತ್ ಗೆ ನಿಷೇಧ ಹೇರಿ ಬಿಸಿಸಿಐ ಹೇಳಿದ್ದೇನು?
 

ಮುಂಬೈ, ಸೆ.13: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಸಂಬಂಧ ಭಾರತೀಯ ಕ್ರಿಕೆಟಿಗ ಶ್ರೀಶಾಂತ್ ಸೇರಿದಂತೆ ನಾಲ್ವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಜೀವ ನಿಷೇಧ ಹೇರಿದೆ.

ಬಿಸಿಸಿಐ ಸಮನ್ವಯ ಸಮಿತಿ ಸಭೆಯಲ್ಲಿ ಕಳಂಕಿತ ರಾಜಸ್ತಾನ ರಾಯಲ್ಸ್ ತಂಡದ ಆಟಗಾರರಾದ ಶ್ರೀಶಾಂತ್, ಅಜಿತ್ ಚಾಂಡೀಲಾ, ಅಂಕಿತ್ ಚೌವ್ಹಾಣ್ ಹಾಗೂ ಅಮಿತ್ ಸಿಂಗ್ ಅವರ ವಿರುದ್ಧ ಆಜೀವ ನಿಷೇಧ ಹೇರುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಶ್ರೀಶಾಂತ್ ಮತ್ತು ಅಜಿತ್ ಚಾಂಡೀಲಾ ಮತ್ತು ಅಂಕಿತ್ ಚೌವ್ಹಾಣ್ ಅವರು ಹಣ ಪಡೆದು ಕಳ್ಳಾಟದಲ್ಲಿ ಪಾಲ್ಗೊಂಡಿದ್ದರು ಎಂದು ತನಿಖೆಯಿಂದಾಗಿ ತಿಳಿದುಬಂದಿದೆ. ಎಂದು ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥ ರವಿ ಸವಾನಿ ಹೇಳಿದ್ದಾರೆ.

ಬಿಸಿಸಿಐ ನೀಡಿದ ಪತ್ರಿಕಾ ಹೇಳಿಕೆ ಇಲ್ಲಿದೆ:

* ಅಮಿತ್ ಸಿಂಗ್ ಅವರಿಗೆ ಐದು ವರ್ಷಗಳ ಕಾಲ ಎಲ್ಲಾ ಮಾದರಿ ಕ್ರಿಕೆಟ್ ಆಡುವುದನ್ನು ನಿಷೇಧಿಸಲಾಗಿದೆ. ಬಿಸಿಸಿಐ ಆಯೋಜನೆಯ ಯಾವುದೇ ಕಾರ್ಯಕ್ರಮದಲ್ಲೂ ಭಾಗವಹಿಸುವಂತಿಲ್ಲ.
* ಹರ್ಮಿತ್ ಸಿಂಗ್ ವಿರುದ್ಧ ಕೇಸು ಮುಚ್ಚಲಾಗಿದೆ. ಹರ್ಮಿತ್ ವಿರುದ್ಧ ಯಾವುದೇ ಸಾಕ್ಷಿಗಳು ಸಿಕ್ಕಿಲ್ಲ ಎಂದು ಹೇಳಲಾಗಿದೆ.
* ಸಿದ್ದಾರ್ಥ್ ತ್ರಿವೇದಿ ಅವರಿಗೆ ಒಂದು ವರ್ಷಗಳ ಕ್ರಿಕೆಟ್ ಆಟದಿಂದ ನಿಷೇಧ ಹೇರಲಾಗಿದೆ. ಈ ಅವಧಿಯಲ್ಲಿ ಬಿಸಿಸಿಐ ಆಯೋಜನೆಯ ಯಾವುದೇ ಕಾರ್ಯಕ್ರಮದಲ್ಲೂ ಭಾಗವಹಿಸುವಂತಿಲ್ಲ.
* ಅಂಕಿತ್ ಚೌಹಾಣ್ ಅವರು ಆಜೀವ ನಿಷೇಧಕ್ಕೆ ಒಳಗಾಗಿದ್ದಾರೆ. ಇನ್ಮುಂದೆ ಬಿಸಿಸಿಐ ಆಯೋಜನೆಯ ಯಾವುದೇ ಕಾರ್ಯಕ್ರಮದಲ್ಲೂ ಭಾಗವಹಿಸುವಂತಿಲ್ಲ.
* ಶ್ರೀಶಾಂತ್ ಗೂ ಕೂಡಾ ಆಜೀವ ನಿಷೇಧ ಹೇರಲಾಗಿದೆ.ಇನ್ಮುಂದೆ ಬಿಸಿಸಿಐ ಆಯೋಜನೆಯ ಯಾವುದೇ ಕಾರ್ಯಕ್ರಮ, ಕ್ರಿಕೆಟ್ ಪಂದ್ಯಗಳಲ್ಲಿ ಭಾಗವಹಿಸುವಂತಿಲ್ಲ.
-ಸಂಜಯ್ ಪಟೇಲ್

ಶ್ರೀಶಾಂತ್, ಅಜಿತ್ ಚಂಡಿಲಾ, ಅಂಕಿತ್ ಚೌಹಾಣ್ ವಿರುದ್ಧ ಕೋರ್ಟಿನಲ್ಲಿ ಪ್ರಕರಣ ಇನ್ನೂ ಜಾರಿಯಲ್ಲಿದ್ದು ಎಲ್ಲರಿಗೂ ಸದ್ಯಕ್ಕೆ ಜಾಮೀನು ಸಿಕ್ಕಿದೆ. ಬಿಸಿಸಿಐ ಮೇಲ್ಕಂಡ ಕ್ರಮ ಕೈಗೊಳ್ಳುವ ಮುನ್ನ ಆಟಗಾರರ ಹೇಳಿಕೆಗಳು, ರವಿ ಸವಾನಿ ತಂಡದ ತನಿಕಾ ವರದಿಯನ್ನು ಆಧರಿಸಿ ಚರ್ಚೆ ನಡೆಸಿದೆ. ನವದೆಹಲಿಯ ಐಟಿಸಿ ಮೌರ್ಯದಲ್ಲಿ ನಡೆದ ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷ ಎನ್ ಶ್ರೀನಿವಾಸನ್, ಅರುಣ್ ಜೇಟ್ಲಿ, ನಿರಂಜನ್ ಶಾ ಮುಂತಾದ ನಾಯಕರು ಪಾಲ್ಗೊಂಡಿದ್ದರು.

Story first published:  Friday, September 13, 2013, 18:20 [IST]
English summary
The Board of Control for Cricket in India (BCCI) on Friday handed out life bans to S Sreesanth and Ankeet Chavan for their involved in IPL spot-fixing.Here is BCCI's full statement
ಅಭಿಪ್ರಾಯ ಬರೆಯಿರಿ