Englishहिन्दीമലയാളംதமிழ்తెలుగు

ಶಿವಮೊಗ್ಗ, ಹುಬ್ಬಳ್ಳಿಗೆ ಯುವರಾಜ, ಸೆಹ್ವಾಗ್

Posted by:
Updated: Tuesday, September 10, 2013, 17:55 [IST]
 

ಶಿವಮೊಗ್ಗ, ಹುಬ್ಬಳ್ಳಿಗೆ ಯುವರಾಜ, ಸೆಹ್ವಾಗ್
 

ಬೆಂಗಳೂರು, ಸೆ.10: ಕರ್ನಾಟಕದ ಶಿವಮೊಗ್ಗ, ಹುಬ್ಬಳ್ಳಿಯ ಕ್ರಿಕೆಟ್ ಅಭಿಮಾನಿಗಳಿಗೆ ಸವಿ ಸುದ್ದಿ ಇಲ್ಲಿದೆ. ಯುವರಾಜ್ ಸಿಂಗ್, ವೀರೇಂದ್ರ ಸೆಹ್ವಾಗ್ ಹಾಗೂ ಗೌತಮ್ ಗಂಭೀರ್ ಅವರು ನಿಮ್ಮೂರಲ್ಲೇ ಆಡಲು ಬರುತ್ತಿದ್ದಾರೆ. ಭಾರತ 'ಎ' ಹಾಗೂ ವೆಸ್ಟ್ ಇಂಡೀಸ್ 'ಎ' ವಿರುದ್ಧದ ಸರಣಿ ವೇಳಾಪಟ್ಟಿ ಮಂಗಳವಾರ ಘೋಷಣೆಯಾಗಿದೆ.

ಭಾರತ ಎ ತಂಡಕ್ಕೆ ಯುವರಾಜ್ ಸಿಂಗ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಮೂರು ಏಕದಿನ ಪಂದ್ಯಗಳು, ಒಂದು ಟಿ20 ಪಂದ್ಯಕ್ಕೆ ಯುವಿ ನಾಯಕರಾಗಿದ್ದಾರೆ. ಸೆಹ್ವಾಗ್, ಗಂಭೀರ್ ಹಾಗೂ ಜಹೀರ್ ಅವರು ಎರಡು ನಾಲ್ಕು ದಿನಗಳ ಪಂದ್ಯವಾಡುವ ಭಾರತ ಎ ತಂಡವನ್ನು ಸೇರಲಿದ್ದಾರೆ.

ಯುವರಾಜ್ ಸಿಂಗ್ ಸದ್ಯ ಫ್ರಾನ್ಸ್ ನಲ್ಲಿ ಇರ್ಫಾನ್ ಪಠಾಣ್ ಜತೆಯಲ್ಲಿ ವಿಶೇಷ ತರಬೇತಿ ಪಡೆಯುತ್ತಿದ್ದಾರೆ. ಇರ್ಫಾಣ್ ಪಠಾಣ್ ಹಾಗೂ ಯೂಸುಫ್ ಪಠಾಣ್ ಸೋದರರು ಮತ್ತೆ ತಂಡ ಸೇರಿದ್ದಾರೆ. ಬಲಗೈ ವೇಗಿ ಪ್ರವೀಣ್ ಕುಮಾರ್ ಕೂಡಾ ತಂಡಕ್ಕೆ ಆಯ್ಕೆಯಾಗಿದ್ದಾರೆ.

ನಾಲ್ಕು ದಿನಗಳ ಪಂದ್ಯಕ್ಕೆ ಚೇತೇಶ್ವರ ಪೂಜಾರಾ ನಾಯಕರಾಗಿದ್ದರೆ, ಮಹಮ್ಮದ್ ಕೈಫ್ ಮತ್ತೊಮ್ಮೆ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

ಎಲ್ಲಾ ಪಂದ್ಯಗಳು ಕರ್ನಾಟಕದಲ್ಲಿ ನಡೆಯುತ್ತಿರುವುದು ವಿಶೇಷ. ಮೂರು ಏಕದಿನ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯುತ್ತಿದ್ದರೆ, ಶಿವಮೊಗ್ಗದಲ್ಲಿ ಏಕೈಕ ಟಿ 20 ಪಂದ್ಯ ಆಯೋಜನೆಗೊಂಡಿದೆ. ಮೊದಲ ನಾಲ್ಕು ದಿನಗಳ ಪಂದ್ಯ ಮೈಸೂರಿನಲ್ಲಿ ನಡೆದರೆ ಮತ್ತೊಂದು ಹುಬ್ಬಳ್ಳಿಯಲ್ಲಿ ನಡೆಯಲಿದೆ.

ತಂಡಗಳು ಇಂತಿದೆ:
ಭಾರತ ಎ ಏಕದಿನ ಹಾಗೂ ಟಿ 20 : ಯುವರಾಜ್ ಸಿಂಗ್(ನಾಯಕ), ಉನ್ಮುಕ್ತ್ ಚಂದ್, ರಾಬಿನ್ ಉತ್ತಪ್ಪ, ಬಾಬಾ ಅಪರಾಜಿತ್, ಕೇದಾರ್ ಜಾಧವ್, ನಮನ್ ಓಜಾ, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ಪ್ರವೀಣ್ ಕುಮಾರ್, ಸುಮಿತ್ ಅಗರವಾಲ್, ಶಬಾಜ್ ನದೀಂ, ಮನದೀಪ್ ಸಿಂಗ್, ರಾಹುಲ್ ಶರ್ಮ

ನಾಲ್ಕುದಿನಗಳ ಮೊದಲ ಪಂದ್ಯಕ್ಕೆ : ಚೇತೇಶ್ವರ ಪೂಜಾರಾ (ನಾಯಕ) ಜಿವೊಜೊತ್ ಸಿಂಗ್, ಕೆಎಲ್ ರಾಹುಲ್, ಮನಪ್ರೀತ್ ಜುನೇಜಾ, ರಜತ್ ಪಾಲಿವಾಲ್, ಹರ್ಷದ್ ಖಾಡಿವಾಲೆ, ಪರ್ವೇಜ್ ರಸೂಲ್, ಭಾರ್ಗವ್ ಭಟ್, ಈಶ್ವರ್ ಪಾಂಡೆ, ಶಮಿ ಅಹ್ಮದ್, ಅಶೋಕ್ ದಿಂಡಾ, ರೋಹಿತ್ ಮೋತ್ವಾನಿ(ವಿಕೇಟ್ ಕೀಪರ್) ಧವಲ್ ಕುಲಕರ್ಣಿ, ಪರಸ್ ದೋಗ್ರಾ

ಎರಡನೇ ಹಾಗೂ ಮೂರನೇ ಪಂದ್ಯಕ್ಕೆ ; ಚೇತೇಶ್ವರ್ ಪೂಜಾರಾ, ಗೌತಮ್ ಗಂಭೀರ್, ವೀರೇಂದರ್ ಸೆಹ್ವಾಗ್, ಶೆಲ್ಡನ್ ಜಾಕ್ಸನ್, ಅಭಿಶೇಕ್ ನಾಯರ್, ಪರಸ್ ದೋಗ್ರಾ, ಉದಯ ಕೌಲ್ (ವಿಕೆಟ್ ಕೀಪರ್), ಪರ್ವೇಜ್ ರಸೂಲ್, ಭಾರ್ಗವ್ ಭಟ್, ಧವಳ್ ಕುಲಕರ್ಣಿ, ಜಹೀರ್ ಖಾನ್, ಈಶ್ವರ್ ಪಾಂಡೆ, ಮಹಮ್ಮದ್ ಶಮಿ, ಮಹಮ್ಮದ್ ಕೈಫ್.

ಭಾರತ ಎ vs ವೆಸ್ಟ್ ಇಂಡೀಸ್ ಎ ಸರಣಿ ವೇಳಾಪಟ್ಟಿ
ಸೆಪ್ಟೆಂಬರ್ 15: ಮೊದಲ ಏಕದಿನ ಪಂದ್ಯ, ಬೆಂಗಳೂರು
ಸೆಪ್ಟೆಂಬರ್ 17: ಎರಡನೇ ಏಕದಿನ ಪಂದ್ಯ, ಬೆಂಗಳೂರು
ಸೆಪ್ಟೆಂಬರ್ 19: ಮೂರನೇ ಏಕದಿನ ಪಂದ್ಯ, ಬೆಂಗಳೂರು

ಸೆಪ್ಟೆಂಬರ್ 21: ಟಿ20 ಪಂದ್ಯ, ಬೆಂಗಳೂರು

ಸೆಪ್ಟೆಂಬರ್ 25 ರಿಂದ 28 : ಮೊದಲ ನಾಲ್ಕು ದಿನ ಪಂದ್ಯ, ಮೈಸೂರು
ಅಕ್ಟೋಬರ್ 2 ರಿಂದ 5 : ಎರಡನೇ ನಾಲ್ಕು ದಿನ ಪಂದ್ಯ, ಶಿವಮೊಗ್ಗ
ಅಕ್ಟೋಬರ್ 9 ರಿಂದ 12 : ಮೂರನೇ ನಾಲ್ಕು ದಿನ ಪಂದ್ಯ, ಹುಬ್ಬಳ್ಳಿ

ದಟ್ಸ್ ಕ್ರಿಕೆಟ್

Story first published:  Tuesday, September 10, 2013, 17:35 [IST]
English summary
Virender Sehwag, Gautam Gambhir, Yuvraj Singh and Zaheer Khan were handed lifelines to revive their international careers by the national selectors as they were on Tuesday picked in India A squads for series against West Indies A at home.
ಅಭಿಪ್ರಾಯ ಬರೆಯಿರಿ