Englishहिन्दीമലയാളംதமிழ்తెలుగు

ಏಕದಿನ ಪಂದ್ಯದಲ್ಲಿ 248 ರನ್ ಸಿಡಿಸಿದ ಧವನ್

Posted by:
Updated: Monday, August 12, 2013, 17:24 [IST]
 

ಬೆಂಗಳೂರು, ಆ.12: ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಅವರು ಸೋಮವಾರ ಹೊಸ ದಾಖಲೆ ಬರೆದಿದ್ದಾರೆ. ಪ್ರಪ್ರಥಮ ಬಾರಿಗೆ ಭಾರತ 'ಎ' ಪರ ದ್ವಿಶತಕ ಸಿಡಿಸಿದ್ದಾರೆ. ದಕ್ಷಿಣ ಆಫ್ರಿಕಾ 'ಎ' ತಂಡದ ವಿರುದ್ಧ ಎಲ್ ಸಿ ಡಿ ವಿಲೆಯರ್ಸ್ ಓವಲ್ ಮೈದಾನದಲ್ಲಿ ಧವನ್ ದ್ವಿಶತಕ ಹಾಗೂ ಪೂಜಾರಾ ಶತಕ ನೆರವಿನಿಂದ ಭಾರತ 'ಎ' 433/3 ಸ್ಕೋರ್ ಗಳಿಸಿದೆ.

ದೆಹಲಿಯ ಎಡಗೈ ಬ್ಯಾಟ್ಸ್ ಮನ್ ಶಿಖರ್ ಧವನ್ ಅವರು ಕೇವಲ 132 ಎಸೆತಗಳಲ್ಲಿ 24 ಬೌಂಡರಿ ಹಾಗೂ 4 ಸಿಕ್ಸ್ ಸಿಡಿಸುವ ಮೂಲಕ ದ್ವಿಶತಕದ ಗಡಿ ದಾಟಿದರು. ಆದರೆ, ಅಂತಿಮವಾಗಿ 150 ಎಸೆತಗಳಲ್ಲಿ 248 ರನ್ ಗಳಿಸಿ ಔಟಾದರು.

ಏಕದಿನ ಪಂದ್ಯದಲ್ಲಿ 248 ರನ್ ಸಿಡಿಸಿದ ಧವನ್

194 ನಿಮಿಷ ಕ್ರೀಸ್ ನಲ್ಲಿ ವೀರಾಶೇಷದ ಬ್ಯಾಟಿಂಗ್ ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸಿದರು. ಶಿಖರ್ ಧವನ್ 248ರನ್ ಇನ್ನಿಂಗ್ಸ್ ನಲ್ಲಿ 30 ಬೌಂಡರಿ ಹಾಗೂ 7 ಸಿಕ್ಸ್ ಇತ್ತು. ಇದು ಭಾರತದ ಪರ ಅತ್ಯಧಿಕ ವೈಯಕ್ತಿಕ ಮೊತ್ತ ಎನಿಸಿದೆ. ಆದರೆ, ಇಂಗ್ಲೆಂಡಿನ ಸರೆ ಪರ ಆಡಿದ್ದ ಅಲಿ ಬ್ರೌನ್ ಅವರು ಗ್ಲಾಮರ್ಗನ್ ವಿರುದ್ಧ 268 ರನ್ ಹೊಡೆದಿದ್ದು ಇನ್ನೂ ದಾಖಲೆಯಾಗಿ ಉಳಿದಿದೆ.

ಏಕದಿನ ಕ್ರಿಕೆಟ್ ನಲ್ಲಿ ಭಾರತದ ಪರ ಸಚಿನ್ ತೆಂಡೂಲ್ಕರ್ (200 ನಾಟೌಟ್) ಹಾಗೂ ವೀರೇಂದರ್ ಸೆಹ್ವಾಗ್ (219) ದ್ವಿಶತಕ ಸಿಡಿಸಿದ ವೀರರಾಗಿದ್ದಾರೆ. ಈ ದಾಖಲೆ ಮತ್ತೆ ಯಾವ ತಂಡದಿಂದಲೂ ಕಂಡು ಬಂದಿಲ್ಲ.

ದಕ್ಷಿಣ ಆಫ್ರಿಕಾ 'ಎ' ವಿರುದ್ಧದ ಈ ಪಂದ್ಯವನ್ನು ಭಾರತ 'ಎ' ತಂಡ ಗೆದ್ದರೆ ಆಗಸ್ಟ್ 14ರಂದು ಆಸ್ಟ್ರೇಲಿಯಾ 'ಎ' ತಂಡವನ್ನು ಎದುರಿಸಬೇಕಾಗುತ್ತದೆ.

ಟಾಪ್ 5 ವೈಯಕ್ತಿಕ ಮೊತ್ತಗಳು
* 268 : ಆಲಿ ಬ್ರೌನ್(ಇಂಗ್ಲೆಂಡ್) ಸರೆ ಪರ vs ಗ್ಲಾಮರ್ಗನ್ (20020
* 248 : ಶಿಖರ್ ಧವನ್ (ಭಾರತ) ಭಾರತ 'ಎ' ಪರ vs ದಕ್ಷಿಣ ಆಫ್ರಿಕಾ 'ಎ' (2013)
* 222 ನಾಟೌಟ್ : ಗ್ರಹಾಂ ಪೊಲ್ಲಾಕ್ (ದಕ್ಷಿಣ ಆಫ್ರಿಕಾ) ಈಸ್ಟರ್ನ್ ಪ್ರಾವಿನ್ಸ್ ಪರ vs ಬಾರ್ಡರ್ (1974)
* 222 : ಜಾಮಿ ಹೌ(ನ್ಯೂಜಿಲೆಂಡ್) ಸೆಂಟ್ರಲ್ ಡಿಸ್ಟಿಕ್ಸ್ ಪರ vs ನಾರ್ಥನ್ ಡಿಸ್ಟಿಕ್ಸ್ (2013)
* 219 : ವಿರೇಂದರ್ ಸೆಹ್ವಾಗ್ (ಭಾರತ) ಭಾರತ ಪರ vs ವೆಸ್ಟ್ ಇಂಡೀಸ್ (2011)

Story first published:  Monday, August 12, 2013, 17:10 [IST]
English summary
Opener Shikhar Dhawan created history by smashing the first ever double hundred in one-day 'A' cricket for a country during India A-South Africa A tri-series match here at the LC de Villiers Oval ground on Monday. Dhawan's sensational knock and captain Cheteshwar Pujara's 118 not out (97 balls, 8x4) powered India A to a mammoth 433/3 Dhawan's sensational knock and captain Cheteshwar Pujara's 118 not out (97 balls, 8x4) powered I in 50 overs.
ಅಭಿಪ್ರಾಯ ಬರೆಯಿರಿ