Englishहिन्दीമലയാളംதமிழ்తెలుగు

ರಾಬಿನ್ ಉತ್ತಪ್ಪ ಅಮೋಘ 223 ನಾಟ್ ಔಟ್

Posted by:
Published: Thursday, July 18, 2013, 12:53 [IST]
 

ಬೆಂಗಳೂರು, ಜು.18: ಟೀಂ ಇಂಡಿಯಾ ಸೇರುವ ಬಯಕೆ ಹೊಂದಿರುವ ಕರ್ನಾಟಕದ ಪ್ರತಿಭಾವಂತ ಕ್ರಿಕೆಟರ್ ರಾಬಿನ್ ಉತ್ತಪ್ಪ ಬುಧವಾರ ಪ್ರಸಕ್ತ ಸೀಸನ್ ಭರ್ಜರಿಯಾಗಿ ಆರಂಭಿಸಿದ್ದಾರೆ.

ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ XI (KSCA XI) ಪರ ಆಡುತ್ತಾ ಜಾರ್ಖಂಡ್ ಕ್ರಿಕೆಟ್ ಅಸೋಸಿಯೇಷನ್ ತಂಡದ ಮೇಲೆ ಭರ್ಜರಿ 223 ರನ್ ಬಾರಿಸಿ ಔಟಾಗದೆ ಉಳಿದಿದ್ದಾರೆ. ನಾಲ್ಕು ದಿನಗಳ ಶಫಿ ದಾರಾಶಾ ಟ್ರೋಫಿ 2013 ಟೂರ್ನಿ ಜು.17 ರಿಂದ ಆರಂಭಗೊಂಡಿದ್ದು ಮೊದಲ ದಿನವೇ ಉತ್ತಪ್ಪ ಅಮೋಘ ಆರಂಭ ಒದಗಿಸಿದ್ದಾರೆ.

ತುಮಕೂರು ರಸ್ತೆಯಲ್ಲಿರುವ ಆಲೂರು ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 276 ಎಸೆತಗಳನ್ನು ಎದುರಿಸಿದ ರಾಬಿನ್ 25 ಬೌಂಡರಿ, 4 ಸಿಕ್ಸರ್ ಇದ್ದ 223 ರನ್ ಬಾರಿಸಿದರು. ಈ ಮೂಲಕ ದಿನದ ಅಂತ್ಯಕ್ಕೆ ಕೆಎಸ್ ಸಿಎ 94 ಓವರ್ ಗಳಲ್ಲಿ 393/2 ಸ್ಕೋರ್ ಮಾಡಿತ್ತು. ಮನೀಶ್ ಪಾಂಡೆ 67 ಎಸೆತಗಳಲ್ಲಿ 51 ರನ್ ಗಳಿಸಿ ಔಟಾಗದೆ ಉಳಿದಿದ್ದರು. ಕೆಎ ರಾಹುಲ್ 68 ರನ್ ಗಳಿಸಿದರು.

ರಣಜಿ ಟ್ರೋಫಿ ಬಿಟ್ಟರೆ ನಾಲ್ಕು ದಿನಗಳ ಪಂದ್ಯಗಳನ್ನು ಉಳ್ಳ ಈ ಟೂರ್ನಿಯನ್ನು ಕೆಎಸ್ ಸಿಎ ಆಯೋಜಿಸುತ್ತಾ ಬಂದಿದೆ. 16 ತಂಡಗಳು ಬೆಂಗಳೂರು, ಮೈಸೂರಿನ ಕ್ರೀಡಾಂಗಣದಲ್ಲಿ ಸೆಣಸಾಡಲಿವೆ.

ಸಂಕ್ಷಿಪ್ತ ಸ್ಕೋರ್:
ಕೆಎಸ್ ಸಿಎ XI : 94 ಓವರ್ ಗಳಲ್ಲಿ 393/2 ( ರಾಬಿನ್ ಉತ್ತಪ್ಪ 223, ಕೆಎಲ್ ರಾಹುಲ್ 68(153 ಎಸೆತ, 8 ಬೌಂಡರಿ), ಗಣೇಶ್ ಸತೀಶ್ 38, ಮನೀಶ್ ಪಾಂಡೆ 51(67 ಎಸೆತ, 6 ಬೌಂಡರಿ, 1 ಸಿಕ್ಸರ್), ರಾಹುಲ್ ಶುಕ್ಲಾ 1/82, ಸಮರ್ ಖಾದ್ರಿ 1/91)

ಆಲೂರು, ಬಿಜಿಎಸ್ ಕ್ರೀಡಾಂಗಣ, ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಆದಿತ್ಯ ಅಗ್ಲೋಬಲ್, ಎಸ್ ಜೆ ಸಿಇ ಕಾಲೇಜು ಮೈದಾನ, ಗಂಗೋತ್ರಿ ಗ್ಲೈಡ್ಸ್ ಕ್ರೀಡಾಂಗಣಗಳಲ್ಲಿ ನಡೆದಿರುವ ಪಂದ್ಯಗಳ ಸ್ಕೋರ್ ವಿವರಗಳು ಇಲ್ಲಿವೆ

English summary
Robin Uthappa, who is aiming to make a comeback to the Indian team, began the new season with a bang. The right-hander smashed 223 not out for Karnataka State Cricket Association XI (KSCA XI) against Jharkhand Cricket Association on the opening day of the four-day Safi Darashah Trophy 2013 here on Wednesday (July 17).
ಅಭಿಪ್ರಾಯ ಬರೆಯಿರಿ