Englishहिन्दीമലയാളംதமிழ்తెలుగు

ಧೋನಿಗೆ ಹೆಲಿಕಾಪ್ಟರ್ ಶಾಟ್ ಹೇಳಿಕೊಟ್ಟ ಮಿತ್ರ ಇನ್ನಿಲ್ಲ

Posted by:
Updated: Wednesday, July 17, 2013, 18:10 [IST]
 

ನವದೆಹಲಿ, ಜು.17: ಸಂತೋಷ್ ಲಾಲ್, ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರ ಪರಮಾಪ್ತ ಮಿತ್ರ. ಧೋನಿ ಉದ್ದ ಕೂದಲಿನ ಹೇರ್ ಸ್ಟೈಲ್, ಹೆಲಿಕಾಪ್ಟರ್ ಶಾಟ್ ಎಲ್ಲಕ್ಕೂ ಲಾಲ್ ಪ್ರೇರಣೆ ಹಾಗೂ ಗುರುವಾಗಿದ್ದರು. ಧೋನಿ ಆಪ್ತಮಿತ್ರ ಲಾಲ್ ಬುಧವಾರ ಅನಾರೋಗ್ಯದಿಂದ ಅಸುನೀಗಿದ್ದಾರೆ.

ಎರಡು ತಿಂಗಳು ಕ್ರಿಕೆಟ್ ನಿಂದ ರಜೆ ಪಡೆದು ನ್ಯೂಯಾರ್ಕಿಗೆ ತೆರಳಬೇಕಿದ್ದ ಧೋನಿ ದಂಪತಿ, ಲಾಲ್ ಗಾಗಿ ತಮ್ಮ ಟ್ರಿಪ್ ಕ್ಯಾನ್ಸಲ್ ಮಾಡಿದ್ದರು. ದೆಹಲಿಯ ಆಸ್ಪತ್ರೆಗೆ ಲಾಲ್ ರನ್ನು ಸೇರಿಸಿ ಸೂಕ್ತ ಚಿಕಿತ್ಸೆ ಸಿಗುವಂತೆ ಧೋನಿ ಮಾಡಿದ್ದರು. ಆದರೆ, acute pancreatitis ನಿಂದ ಬಳಲುತ್ತಿದ್ದ ಲಾಲ್ ರನ್ನು ಉಳಿಸಿಕೊಳ್ಳುವಲ್ಲಿ ಧೋನಿ ವಿಫಲವಾಗಿದ್ದಾರೆ.

ಧೋನಿಗೆ ಹೆಲಿಕಾಪ್ಟರ್ ಶಾಟ್ ಹೇಳಿಕೊಟ್ಟ ಮಿತ್ರ ಇನ್ನಿಲ್ಲ

ಧೋನಿ ಜೊತೆ ರಣಜಿ ಕ್ರಿಕೆಟ್ ಆಡಿದ್ದ ಲಾಲ್, ರೈಲ್ವೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದರು. ರಾಂಚಿ ಆಸ್ಪತ್ರೆಯಲ್ಲಿ ಒದ್ದಾಡುತ್ತಿದ್ದ ಲಾಲ್ ಅವರನ್ನು ದೆಹಲಿಗೆ ವಿಮಾನದ ಮೂಲಕ ಧೋನಿ ಕರೆ ತಂದಿದ್ದರು. ಆದರೆ, ಸಂತೋಷ್ ಲಾಲ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಜಾರ್ಖಂಡ್ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ ರಾಜೆಶ್ ವರ್ಮ ಅವರು ಸಂಸ್ಥೆ ವತಿಯಿಂದ ಲಾಲ್ ಕುಟುಂಬಕ್ಕೆ 1 ಲಕ್ಷ ರು ತಕ್ಷಣದ ಪರಿಹಾರ ಘೋಷಿಸಿದ್ದಾರೆ. ಜೆಎಸ್ ಸಿಎ ಸದಸ್ಯರು ವೈಯಕ್ತಿಕವಾಗಿ 39,500 ರು ನೀಡಲು ಮುಂದಾಗಿದ್ದಾರೆ.

ಧೋನಿ ಅವರ 'ಹೆಲಿಕಾಪ್ಟರ್' ಶಾಟ್ ಝಲಕ್ ಇಲ್ಲಿದೆ ನೋಡಿ

Story first published:  Wednesday, July 17, 2013, 12:08 [IST]
English summary
Santosh Lal, who taught India captain MS Dhoni the 'helicopter' shot, passed away here on Wednesday due to acute pancreatitis.
ಅಭಿಪ್ರಾಯ ಬರೆಯಿರಿ