Englishहिन्दीമലയാളംதமிழ்తెలుగు

ಪಾಕಿಸ್ತಾನ ಚಿರಯುವಕ ಕ್ರಿಕೆಟರ್ ನಿಂದ ವಿಶ್ವ ದಾಖಲೆ

Posted by:
Published: Monday, July 15, 2013, 16:39 [IST]
 

 ಪಾಕಿಸ್ತಾನ ಚಿರಯುವಕ ಕ್ರಿಕೆಟರ್ ನಿಂದ ವಿಶ್ವ ದಾಖಲೆ
 

ಜಾರ್ಜ್ ಟೌನ್, ಜು.15: ಪಾಕಿಸ್ತಾನದ ಆಲ್ ರೌಂಡರ್ ಶಹೀದ್ ಅಫ್ರಿದಿಗೆ ವಯಸ್ಸೆ ಆಗುವುದಿಲ್ಲ. ಬಹುಶಃ ಅಧಿಕವರ್ಷದಲ್ಲಿ ಜನಿಸಿರಬೇಕು ಹೀಗಾಗಿ ನಾಲ್ಕುವರ್ಷಕ್ಕೊಮ್ಮೆ ಅಫ್ರಿದಿಗೆ ಒಂದು ವರ್ಷವಾಗುತ್ತೆ ಎಂಬ ಜೋಕು ಎಲ್ಲರಿಗೂ ಗೊತ್ತಿರುವುದೇ. ಆದರೆ, ಇತ್ತೀಚೆಗೆ ಕಳಪೆ ಫಾರ್ಮ್, ಫಿಟ್ನೆಸ್ ಕೊರತೆ ಅನುಭವಿಸಿದ್ದ ಅಫ್ರಿದಿ ಏಕದಿನ ಇತಿಹಾಸದಲ್ಲೇ ಅಭೂತಪೂರ್ವ ದಾಖಲೆ ಬರೆದಿದ್ದಾರೆ.

ಭಾನುವಾರ(ಜು.14) ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯವನ್ನು ಪಾಕಿಸ್ತಾನ ತಂಡ 126 ರನ್ ಗಳಿಂದ ಗೆಲ್ಲಲು ಶಹೀದ್ ಅಫ್ರಿದಿ ಆಟವೇ ಕಾರಣವಾಗಿದೆ. ಈ ಪಂದ್ಯದಲ್ಲಿ ಅಫ್ರಿದಿ ವಿನೂತನ ODI ರೆಕಾರ್ಡ್ ಮಾಡಿದ್ದಾರೆ.

ಏಕದಿನ ಕ್ರಿಕೆಟ್ ನಲ್ಲಿ 7000 ರನ್, 350 ವಿಕೆಟ್ ಗಳಿಸಿದ ಏಕೈಕ ಆಟಗಾರ ಎನಿಸಿದ್ದಾರೆ, ಆಫ್ರಿದಿ ಸಯ್ದ್ 7,277 ರನ್ ಹಾಗೂ 355 ವಿಕೆಟ್ ಪಡೆದಿದ್ದಾರೆ.

33 ವರ್ಷ ವಯಸ್ಸಿನ ಅಫ್ರಿದಿ 75 ರನ್ ಹೊಡೆದು 12 ರನ್ನಿಗೆ 7 ವಿಕೆಟ್ ಕಿತ್ತು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಪಾಕಿಸ್ತಾನಕ್ಕೆ 1-0 ಅಂತರದ ಮುನ್ನಡೆ ಒದಗಿಸಿದ್ದಾರೆ. 7 ವಿಕೆಟ್ ಪಡೆದು ಅತ್ಯಂತ ಯಶಸ್ವಿ ಪಾಕಿಸ್ತಾನಿ ಬೌಲರ್ ಎನಿಸಿದ್ದಾರೆ. ವಿಶ್ವದ ಅತ್ಯುತ್ತಮ ಬೌಲಿಂಗ್ ಅಂಕಿ ಅಂಶದಲ್ಲಿ ಎರಡನೇ ಸ್ಥಾನದಲ್ಲಿ ಅಫ್ರಿದಿ ಬೌಲಿಂಗ್ ಅಂಕಿ ಅಂಶ ಇದೆ.

ಶ್ರೀಲಂಕಾದ ಆರಂಭಿಕ ಆಟಗಾರ ಎಡಗೈ ಸ್ಪಿನ್ನರ್ ಸನತ್ ಜಯಸೂರ್ಯ ಅವರು 323 ವಿಕೆಟ್ ಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದರೂ 445 ಪಂದ್ಯಗಳಲ್ಲಿ 13,430 ರನ್ ಬಾರಿಸಿದ್ದಾರೆ. 1996ರಲ್ಲಿ ಕೀನ್ಯಾದಲ್ಲಿ ಭರ್ಜರಿಯಾಗಿ ಏಕದಿನ ಕ್ರಿಕೆಟ್ ಲೋಕಕ್ಕೆ ಎಂಟ್ರಿ ಕೊಟ್ಟ ಅಫ್ರಿದಿ ನಂತರದ ದಿನಗಳಲ್ಲಿ ಲೆಗ್ ಸ್ಪಿನ್ನರ್ ಆಗಿ ತಂಡಕ್ಕೆ ಆಧಾರವಾಗಿ ಬೆಳೆದಿದ್ದಾರೆ.

ದಟ್ಸ್ ಕ್ರಿಕೆಟ್

English summary
Pakistan all-rounder Shahid Afridi has set a world record. He has achieved something which no other cricketer has managed so far in the history of One Day Internationals. He set the record during Pakistan's 126-run victory over West Indies here on Sunday (July 14).
ಅಭಿಪ್ರಾಯ ಬರೆಯಿರಿ