Englishहिन्दीമലയാളംதமிழ்తెలుగు

111 ವರ್ಷ ಹಳೆ ದಾಖಲೆ ಮುರಿದ ಆಸೀಸ್

Posted by:
Updated: Thursday, July 11, 2013, 22:43 [IST]
 

ನ್ಯಾಟಿಂಗ್ ಹ್ಯಾಮ್, ಜು.11: ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಸಾಂಪ್ತದಾಯಿಕ ಕ್ರಿಕೆಟ್ ಯುದ್ಧ ಆರಂಭಗೊಂಡಿದೆ. ಆಷಸ್ ನ ಮೊದಲ ಟೆಸ್ಟ್ ಪಂದ್ಯ ಕುತೂಹಲ, ದಾಖಲೆ, ಯುವ ಪ್ರತಿಭೆಗಳ ಪ್ರದರ್ಶನಕ್ಕೆ ವೇದಿಕೆಯಾಗಿದೆ. ಆಸ್ಟ್ರೇಲಿಯಾದ ಎಡಗೈ ಸ್ಪಿನ್ನರ್ ಆಷ್ಟನ್ ಅಗರ್ ಗುರುವಾರ (ಜು.11) 111 ವರ್ಷ ಹಳೆ ದಾಖಲೆಯನ್ನು ಮುರಿದಿದ್ದಾರೆ. ಆದರೆ, ಶತಕದ ಹೊಸ್ತಿಲಲ್ಲಿ ಎಡವಿದ್ದಾರೆ.

ಸ್ಕೋರ್ ಕಾರ್ಡ್ ನೋಡಿ

11 ಸ್ಥಾನದಲ್ಲಿ ಆಡಲು ಬಂದ ಆಸ್ಟ್ರೇಲಿಯಾದ ಸ್ಪಿನ್ನರ್ ಆಷ್ಟನ್ ಅಗರ್ ಅವರು ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ 98 ರನ್ ಗಳಿಸಿ ಔಟಾಗಿದ್ದಾರೆ. ಅಗರ್ ಶತಕಕ್ಕಾಗಿ ಇಡೀ ಮೈದಾನವೇ ಕಾತುರದಿಂದ ಕಾದಿತ್ತು. ಆದರೆ, ಅಗರ್ ದಿಟ್ಟತನದ ಹೋರಾಟಕ್ಕೆ ಆಸ್ಟ್ರೇಲಿಯಾದ ಪ್ರಧಾನಿ ಕೆವಿನ್ ರುಡ್ ಕೂಡಾ ಹೊಗಳಿ ಟ್ವೀಟ್ ಮಾಡಿದ್ದಾರೆ ನೋಡಿ..

111 ವರ್ಷ ಹಳೆ ದಾಖಲೆ ಮುರಿದ ಆಸೀಸ್

19 ವರ್ಷದ ಎಡಗೈ ಆಟಗಾರ ಆಸ್ಟನ್ ಟೆಸ್ಟ್ ಇತಿಹಾಸದಲ್ಲೇ ಅಭೂತಪೂರ್ವ ಸಾಧನೆ ಮಾಡಿದ್ದಾರೆ. 11ನೇ ಸ್ಥಾನದಲ್ಲಿ ಕಣಕ್ಕಿಳಿದು ಯಾರೂ 98ರನ್ ಗಳಿಸಿರಲಿಲ್ಲ. ಅಗರ್ 101 ಎಸೆತಗಳಲ್ಲಿ 98 ರನ್ (12 ಬೌಂಡರಿ, 1 ಸಿಕ್ಸರ್) ಗಳಿಸಿದರೆ ಇನ್ನೊಂದು ತುದಿಯಲ್ಲಿ ಫಿಲ್ ಹ್ಯೂಸ್ ಜೊತೆ 10ನೇ ವಿಕೆಟ್ ಗೆ 163 ಜೊತೆಯಾಟ ನಡೆಸಿದರು.

ಅಗರ್ ಅವರ ಅದ್ಭುತ ಆಟಕ್ಕೆ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಕೊನೆಯಾಡಿದರು. ಬ್ರಾಡ್ ಎಸೆತವನ್ನು ಪುಲ್ ಮಾಡಲು ಹೋದ ಅಗರ್ ಕ್ಯಾಚಿತ್ತು ಪೆವಿಲಿಯನ್ ಗೆ ತೆರಳುವಾಗ ಎಲ್ಲಾ ಪ್ರೇಕ್ಷಕರು ಎದ್ದು ನಿಂತು ಕರತಾಡನ ಮಾಡಿದರು.

ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ನ ವೇಗಿ ಟಿನೋ ಬೆಸ್ಟ್ 11ನೇ ಸ್ಥಾನದಲ್ಲಿ ಬಂದು 95 ರನ್ ಗಳಿಸಿ [ಸ್ಕೋರ್ ಕಾರ್ಡ್ ನೋಡಿ] ಔಟಾಗಿದ್ದರು. ಇದಕ್ಕೂ ಮುನ್ನ ಆಸ್ಟ್ರೇಲಿಯಾದ ವಾರ್ವಿಕ್ ಆರ್ಮ್ ಸ್ಟ್ರಾಂಗ್ ಚೊಚ್ಚಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 1902ರಲ್ಲಿ 45 ರನ್ ಗಳಿಸಿದ್ದೇ ದೊಡ್ಡ ಮೊತ್ತವಾಗಿತ್ತು [ಸ್ಕೋರ್ ಕಾರ್ಡ್ ನೋಡಿ]

ಗ್ಲೆನ್ ಮೆಗ್ ಗ್ರಾಥ್ ಅವರಿಂದ ಸಾಂಪ್ರದಾಯಿಕ ಬ್ಯಾಗಿ ಗ್ರೀನ್ ಕ್ಯಾಪ್ ಧರಿಸಿದ ಎಡಗೈ ಸ್ಪಿನ್ನರ್ ಆಷ್ಟನ್ ಅಗರ್ ಅವರು ಮೊದಲ ಪಂದ್ಯದಲ್ಲೇ ಎಲ್ಲರ ಗಮನ ಸೆಳೆದಿದ್ದಾರೆ.
ದಟ್ಸ್ ಕ್ರಿಕೆಟ್

Story first published:  Thursday, July 11, 2013, 19:42 [IST]
English summary
Australia's Ashton Agar today broke a 111-year record during the second day of the first Ashes Test against England here at Trent Bridge.
ಅಭಿಪ್ರಾಯ ಬರೆಯಿರಿ