Englishहिन्दीമലയാളംதமிழ்తెలుగు

ತಂಡದಿಂದ ಅರ್ಜುನ್ ತೆಂಡೂಲ್ಕರ್ ಹೊರಕ್ಕೆ

Posted by:
Updated: Tuesday, July 9, 2013, 15:01 [IST]
 

ಮುಂಬೈ, ಜು.9: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರನ್ನು 14 ವರ್ಷ ವಯೋಮಿತಿಯೊಳಗಿನ ಸಂಭಾವ್ಯ ತಂಡದಿಂದ ಹೊರ ಹಾಕಲಾಗಿದೆ. 30 ಮಂದಿ ಸದಸ್ಯರ ಸಂಭಾವ್ಯ ಪಟ್ಟಿಯಲ್ಲಿ ಅರ್ಜುನ್ ಹೆಸರು ಕಾಣಿಸಿಕೊಂಡಿಲ್ಲ.

ವರ್ಷದಾರಂಭದಲ್ಲಿ ಮುಂಬೈ 14 ವರ್ಷ ವಯೋಮಿತಿಯೊಳಗಿನ ತಂಡದ ಸದಸ್ಯರಾಗಿದ್ದ ಅರ್ಜುನ್, ಪಶ್ಚಿಮ ವಲಯ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಟೂರ್ನಿಯ ಒಂದು ಪಂದ್ಯದಲ್ಲೂ ಅರ್ಜುನ್ ಗೆ ಆಡಲು ಅವಕಾಶ ಸಿಕ್ಕಿರಲಿಲ್ಲ. ಮುಂಬೈ ಪಶ್ಚಿಮ ವಲಯ ಟೂರ್ನಿ ಗೆದ್ದುಕೊಂಡಿತ್ತು.

ತಂಡದಿಂದ ಅರ್ಜುನ್ ತೆಂಡೂಲ್ಕರ್ ಹೊರಕ್ಕೆ

ಅರ್ಜುನ್ ತೆಂಡೂಲ್ಕರ್ ಆಯ್ಕೆ ಬಗ್ಗೆ ಈ ಹಿಂದೆ ಅನೇಕ ಪೋಷಕರು ಟೀಕಿಸಿದ್ದರು. ಎಡಗೈ ಬ್ಯಾಟ್ಸ್ ಮನ್ ಅರ್ಜುನ್ ಅವರಿಗಿಂತ ಪ್ರತಿಭಾವಂತರು ಇರುವಾಗ ಅರ್ಜುನ್ ಅವರನ್ನು ಆಯ್ಕೆ ಮಾಡಲು ಯಾವ ಮಾನದಂಡ ಅನುಸರಿಸಲಾಗಿದೆ ಎಂದು ಪ್ರಶ್ನಿಸಲಾಗಿತ್ತು.

ಕಳಪೆ ಫಾರ್ಮ್ ಮುಂದುವರೆಸಿರುವ ಅರ್ಜುನ್ ಆಯ್ಕೆಯಾಗಿ ನಡೆಯುವ ಪಂದ್ಯಾವಳಿಗಳಲ್ಲಿ ಕನಿಷ್ಠ 50 ರನ್ ಬಾರಿಸಲು ಸಾಧ್ಯವಾಗಿರಲಿಲ್ಲ. ಉತ್ತಮ ಸಾಧನೆ ತೋರದ ಅರ್ಜುನ್ ಅವರನ್ನು ಆಯ್ಕೆ ಮಾಡುವ ಪ್ರಶ್ನೆ ಬರಲೇ ಇಲ್ಲ. ಮುಂಬೈ ಜೂನಿಯರ್ ತಂಡದಲ್ಲಿ ಬರೀ ಪ್ರತಿಭಾವಂತರಿಗೆ ಮಾತ್ರ ಅವಕಾಶ ಪ್ರಭಾವ ಬೀರಿ ಸ್ಥಾನ ಪಡೆಯಲು ಸಾಧ್ಯವಿಲ್ಲ ಎಂದು ಎಂಸಿಎ ಅಧಿಕಾರಿಯೊಬ್ಬರು ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

ಇನ್ನೆರಡು ವರ್ಷಗಳಲ್ಲಿ ಅರ್ಜುನ್ ಮತ್ತೊಮ್ಮೆ ತಂಡ ಸೇರುವ ಅವಕಾಶಗಳಿದೆ. ಸಚಿನ್ ಮಗ ಎಂದಾಕ್ಷಣ ತಂಡಕ್ಕೆ ಸೇರಿಸಿಕೊಳ್ಳಲು ಬರುವುದಿಲ್ಲ. ಅದು ಸಚಿನ್ ಅವರಿಗೂ ಗೊತ್ತು. ಕಠಿಣ ಶ್ರಮ, ಪ್ರತಿಭೆ ಹಾಗೂ ಹಾಲಿ ಸಾಧನೆ ನೋಡಿ ಆಯ್ಕೆ ಮಾಡಲಾಗುತ್ತದೆ ಎಂದು ಎಂಸಿಎ ಅಧಿಕಾರಿಗಳು ಹೇಳಿದರು.

ಸಚಿನ್ ಮಗನ ಆಯ್ಕೆ ವಿವಾದದ ಬಗ್ಗೆ ಮಾತನಾಡಿದ್ದ ಮುಂಬೈನ ಮಾಜಿ ಕೋಚ್ ಪ್ರವೀಣ್ ಆಮ್ರೆ,'ಈಗ ಜೂನಿಯರ್ ಕ್ರಿಕೆಟ್ ನಲ್ಲಿ ಸರಿಯಾದ ದಾಖಲೆ ಇಟ್ಟುಕೊಂಡಿಲ್ಲ. ನಮ್ಮ ಕಾಲದಲ್ಲಿ ಹೀಗೆ ಎಂದಿಗೂ ಆಗಿಲ್ಲ.

ನಮ್ಮ ಕಾಲದಲ್ಲಿ ಮಾಜಿ ಕ್ರಿಕೆಟರ್ ಗಳು ಆಯ್ಕೆ ಸಮಿತಿಯಲ್ಲಿದ್ದರು. ಈಗ ದುಡ್ಡು ಪಡೆದು ಕೆಲಸ ನಿರ್ವಹಿಸುವ ಅಧಿಕಾರಿಗಳೇ ಹೆಚ್ಚಾಗಿದ್ದಾರೆ. ಪ್ರತಿಭೆಗೆ ತಕ್ಕ ಮನ್ನಣೆ ಸಿಗುತ್ತಿಲ್ಲ. ಆಯ್ಕೆದಾರರು ಮೈದಾನಕ್ಕೆ ತೆರಳಿ ಪಂದ್ಯ ನೋಡುವುದಿಲ್ಲ. ಆಯ್ಕೆ ನಡೆಯುವುದೇ ಬೇರೆ ರೀತಿಯಲ್ಲಿ ಎಂದು ಅಮ್ರೆ ಅಭಿಪ್ರಾಯಪಟ್ಟಿದ್ದರು.

Story first published:  Tuesday, July 9, 2013, 14:49 [IST]
English summary
The selectors have sent a strong message to Sachin Tendulkar's son Arjun by not picking him in the 30-man Under-14 category probables list for Mumbai.
ಅಭಿಪ್ರಾಯ ಬರೆಯಿರಿ