Englishहिन्दीമലയാളംதமிழ்తెలుగు

200ನೇ ಟೆಸ್ಟ್ ಆಡಲು ಮಾಸ್ಟರ್ ಬ್ಲಾಸ್ಟರ್ ಸಜ್ಜು

Posted by:
Updated: Monday, July 8, 2013, 18:45 [IST]
 

ಜೋಹಾನ್ಸ್ ಬರ್ಗ್, ಜು.8: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ತಮ್ಮ ವೃತ್ತಿ ಜೀವನದ 200ನೇ ಟೆಸ್ಟ್ ಪಂದ್ಯವಾಡಲು ಸಜ್ಜಾಗಿದ್ದಾರೆ.ಆದರೆ, ಸಚಿನ್ ಅಭಿಮಾನಿಗಳು ಕೇಪ್ ಟೌನ್ ನಲ್ಲಿ ಜ.2, 2014ರ ತನಕ ಕಾಯಬೇಕು.

ಟೀಂ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸದ ವೇಳಾಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿದೆ. ನವೆಂಬರ್ 18ರಂದು ಟ್ವೆಂಟಿ 20 ಕ್ರಿಕೆಟ್ ಪಂದ್ಯದ ಮೂಲಕ ದಕ್ಷಿಣ ಆಫ್ರಿಕಾ ಪ್ರವಾಸ ಆರಂಭವಾಗಲಿದೆ. ಭಾರತ ತಂಡ 2 ಟಿ20 ಪಂದ್ಯಗಳು, 7 ಏಕದಿನ ಪಂದ್ಯಗಳು ಹಾಗೂ 3 ಟೆಸ್ಟ್ ಪಂದ್ಯಗಳನ್ನು ಆಡಲಿದೆ.

ಪ್ರವಾಸದ ಮೊದಲ ಟೆಸ್ಟ್ ಪಂದ್ಯ ಡರ್ಬನ್ ನಲ್ಲಿ ಡಿ.26ರಂದು ನಡೆಯಲಿದೆ. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಸೇರಿದಂತೆ ಎರಡು ಪಂದ್ಯಗಳನ್ನು ಆಡಿದರೆ ತೆಂಡೂಲ್ಕರ್ ಅವರ 200ನೇ ಟೆಸ್ಟ್ ಗಡಿ ಮುಟ್ಟಿದ್ದಂತಾಗುತ್ತದೆ. ಸಚಿನ್ 198 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.

200ನೇ ಟೆಸ್ಟ್ ಆಡಲು ಮಾಸ್ಟರ್ ಬ್ಲಾಸ್ಟರ್ ಸಜ್ಜು

ಏಕದಿನ ಹಾಗೂ ಟಿ20 ಚಾಂಪಿಯನ್ ಗಳಾಗಿರುವ ಭಾರತ ತಂಡ ಟೆಸ್ಟ್ ಕ್ರಿಕೆಟ್ ನಲ್ಲೂ ನಂ.1 ಸ್ಥಾನ ಪಡೆದಿದೆ. ಅಗ್ರಸ್ಥಾನ ಕಾಯ್ದುಕೊಳ್ಳಲು ಹೋರಾಟ ನಡೆಸಬೇಕಿದೆ.ಸಚಿನ್ ಅವರು 200ನೇ ಟೆಸ್ಟ್ ಆಡುವುದನ್ನು ನಾವು ಹರ್ಷದಿಂದ ಎದುರು ನೋಡುತ್ತಿದ್ದೇವೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಅಸೋಸಿಯೇಷನ್ ನ ಸಿಇಒ ನಾಸೆಲ್ ಅಪ್ಪಯ್ಯ ಅವರು ಹೇಳಿದ್ದಾರೆ.

ಎರಡನೇ ಟೆಸ್ಟ್ ಕೇಪ್ ಟೌನ್ ನಲ್ಲಿ ಜ.2, 2014 ಹಾಗೂ ಮೂರನೇ ಹಾಗೂ ನಾಲ್ಕನೇ ಜೋಹಾನ್ಸ್ ಬರ್ಗ್ ಜ.15 ರಂದು ನಡೆಯಲಿದೆ.

ವೇಳಾಪಟ್ಟಿ ಇಂತಿದೆ:

* 18 November: T20 Tour match, India v SA Invitation XI, Senwes Park, Potchefstroom (Day/Night)
* 21 November: 1st T20 International, Bidvest Wanderers Stadium, Johannesburg (Day/Night)
* 24 November: 2nd T20 International, Sahara Park Newlands, Cape Town (Day)
* 27 November: 1st ODI, Sahara Stadium Kingsmead, Durban (Day/Night)
* 30 November: 2nd ODI, Axxess St. George's, Port Elizabeth (Day)
* 3 December: 3rd ODI, Buffalo Park, East London (Day/Night)
* 6 December: 4th ODI, SuperSport Park, Centurion (Day/Night)
* 8 December: 5th ODI, Bidvest Wanderers Stadium, Johannesburg (Day)
*12 December: 6th ODI, Chevrolet Park, Bloemfontein (Day/Night)
* 15 December: 7th ODI, Sahara Park Newlands, Cape Town (Day)
* 18-19 December: India v SA Invitation XI, Boland Park, Paarl
* 22-23 December: India v SA Invitation XI, The Oval, Pietermaritzburg
* 26-30 December: 1st Test match, Sahara Stadium Kingsmead, Durban
* 2-6 January: 2nd Test match, Sahara Park Newlands, Cape Town
* 15-19 January: 3rd Test match, Bidvest Wanderers Stadium, Johannesburg


Story first published:  Monday, July 8, 2013, 18:35 [IST]
English summary
Sachin Tendulkar is set to play his landmark 200th Test in Cape Town on January 2, 2014 against South Africa as India's tour schedule was announced on Monday by Cricket South Africa (CSA).
ಅಭಿಪ್ರಾಯ ಬರೆಯಿರಿ