Englishहिन्दीമലയാളംதமிழ்తెలుగు

ಜಿಂಬಾಬ್ವೆ ಪ್ರವಾಸ: ಧೋನಿಗೆ ರೆಸ್ಟ್, ಕೊಹ್ಲಿ ನಾಯಕ

Posted by:
Updated: Friday, July 5, 2013, 17:51 [IST]
 

ಜಿಂಬಾಬ್ವೆ ಪ್ರವಾಸ: ಧೋನಿಗೆ ರೆಸ್ಟ್, ಕೊಹ್ಲಿ ನಾಯಕ
 

ಬೆಂಗಳೂರು, ಜು.5: ಸ್ನಾಯು ಸೆಳೆತಕ್ಕೆ ಒಳಗಾಗಿರುವ ಎಂಎಸ್ ಧೋನಿ ಅವರು ಜಿಂಬಾಬ್ವೆ ಪ್ರವಾಸದಿಂದ ಹೊರಗುಳಿದಿದ್ದಾರೆ. ಟೀಂ ಇಂಡಿಯಾವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಮತ್ತೊಮ್ಮೆ ವಿರಾಟ್ ಕೊಹ್ಲಿಗೆ ನೀಡಲಾಗಿದೆ.

ಜು.24ರಿಂದ ಆರಂಭವಾಗಲಿರುವ ಜಿಂಬಾಬ್ವೆ ಪ್ರವಾಸದಲ್ಲಿ ಭಾರತ ತಂಡ 5 ಏಕದಿನ ಪಂದ್ಯಗಳನ್ನು ಆಡಲಿದೆ. ಚೇತೇಶ್ವರ ಪೂಜರಾ ಹಾಗೂ ಅಜಿಂಕ್ಯ ರಹಾನೆ ತಂಡಕ್ಕೆ ಮರಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ವೇಗಿ ಪರ್ವೇಜ್ ರಸೂಲ್ ತಂಡಕ್ಕೆ ಸೇರಲಿರುವ ಹೊಸ ಮುವಾಗಿದ್ದಾರೆ.

ಸಂದೀಪ್ ಪಾಟೀಲ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ ಶುಕ್ರವಾರ(ಜು.4) ಸಭೆ ಸೇರಿ ಜಿಂಬಾಬ್ವೆ ಪ್ರವಾಸಕ್ಕೆ ಭಾರತ ತಂಡವನ್ನು ಆಯ್ಕೆ ಮಾಡಿತು. ಪ್ರಸ್ತುತ ವೆಸ್ಟ್ ಇಂಡೀಸ್ ನಲ್ಲಿ ನಡೆದಿರುವ ಸೆಲ್ಕಾನ್ ಮೊಬೈಲ್ ಕಪ್ ತ್ರಿಕೋನ ಸರಣಿಯಲ್ಲಿ ವಿರಾಟ್ ಕೊಹ್ಲಿ ನಾಯಕರಾಗಿದ್ದಾರೆ.

ಹಾಲಿ ವಿಂಡೀಸ್ ಪ್ರವಾಸದಲ್ಲಿರುವ ಭಾರತ ತಂಡದಲ್ಲಿರುವ ಇಶಾಂತ್ ಶರ್ಮ, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್ ಹಾಗೂ ಉಮೇಶ್ ಯಾದವ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ಭಾರತ ತಂಡ: ವಿರಾಟ್ ಕೊಹ್ಲಿ(ನಾಯಕ) ಶಿಖರ್ ಧವನ್, ರೋಹಿತ್ ಶರ್ಮ, ದಿನೇಶ್ ಕಾರ್ತಿಕ್, ಚೇತೇಶ್ವರ್ ಪೂಜಾರಾ, ಸುರೇಶ್ ರೈನಾ, ಅಂಬಟಿ ರಾಯುಡು, ಅಜಿಂಕ್ಯ ರಹಾನೆ, ರವೀಂದ್ರ ಜಡೇಜ, ಅಮಿತ್ ಮಿಶ್ರಾ, ಪರ್ವೇಜ್ ರಸೂಲ್, ಶಮಿ ಅಹಮದ್, ಆರ್ ವಿನಯ್ ಕುಮಾರ್, ಜಯದೇವ್ ಉನದ್ಕತ್, ಮೋಹಿತ್ ಶರ್ಮ.

ವೇಳಾಪಟ್ಟಿ:
* ಜು.24: ಮೊದಲ ಏಕದಿನ ಪಂದ್ಯ, ಹರಾರೆ ಕ್ರೀಡಾ ಕ್ಲಬ್, ಹರಾರೆ
* ಜು.26: ಎರಡನೇ ಏಕದಿನ ಪಂದ್ಯ, ಹರಾರೆ ಕ್ರೀಡಾ ಕ್ಲಬ್, ಹರಾರೆ
* ಜು.31: ನಾಲ್ಕನೇ ಏಕದಿನ ಪಂದ್ಯ, ಕ್ವೀನ್ಸ್ ಕ್ರೀಡಾ ಕ್ಲಬ್, ಬುಲವಾಯೊ
* ಅಗಸ್ಟ್ 3: ಐದನೇ ಏಕದಿನ ಪಂದ್ಯ, ಕ್ವೀನ್ಸ್ ಕ್ರೀಡಾ ಕ್ಲಬ್, ಬುಲವಾಯೊ

ದಟ್ಸ್ ಕ್ರಿಕೆಟ್

Story first published:  Friday, July 5, 2013, 16:35 [IST]
English summary
MS Dhoni has been rested for India's tour to Zimbabwe. Virat Kohli will captain the side in the five One Day Internationals starting on July 24. Cheteshwar Pujara and Ajinkya Rahane returned to the side. Jammu and Kashmir's spinner Parvez Rasool made it to the Indian team for the first time.
ಅಭಿಪ್ರಾಯ ಬರೆಯಿರಿ