Englishहिन्दीമലയാളംதமிழ்తెలుగు

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಸ್ಟುವರ್ಟ್ ಬಿನ್ನಿ ಆಯ್ಕೆ

Posted by:
Updated: Friday, July 5, 2013, 17:56 [IST]
 

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಸ್ಟುವರ್ಟ್ ಬಿನ್ನಿ ಆಯ್ಕೆ
 

ಬೆಂಗಳೂರು, ಜು.4: ಜಿಂಬಾಬ್ವೆ ಪ್ರವಾಸಕ್ಕೆ ವಿರಾಟ್ ಕೊಹ್ಲಿ ನಾಯಕತ್ವದ ತಂಡ ಆಯ್ಕೆ ಮಾಡಿದ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ 'ಎ' ತಂಡವನ್ನು ಬಿಸಿಸಿಸಿ ಆಯ್ಕೆ ಸಮಿತಿ ಶುಕ್ರವಾರ ಪ್ರಕಟಿಸಿದೆ.

ಸಂದೀಪ್ ಪಾಟೀಲ್ ನೇತೃತ್ವದ ಆಯ್ಕೆ ಸಮಿತಿ ಪ್ರಕಟಿಸಿದ ತಂಡಕ್ಕೆ ಚೇತೇಶರ ಪೂಜಾರ ನಾಯಕರಾಗಿದ್ದಾರೆ. ಮುಂದಿನ ತಿಂಗಳು ದಕ್ಷಿಣ ಆಫ್ರಿಕಾದಲ್ಲಿ ಟೀಂ ಇಂಡಿಯಾ ಎ ತಂಡ, ಅಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾದ 'ಎ' ತಂಡಗಳು ತ್ರಿಕೋನ ಸರಣಿಯಲ್ಲಿ ಸೆಣಸಲಿವೆ.

ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆಯಾಗಿರುವ ಟೀಂ ಇಂಡಿಯಾದ ಬಹುತೇಕ ಸದಸ್ಯರೇ ಭಾರತ 'ಎ' ತಂಡದಲ್ಲೂ ಇರುವುದು ವಿಶೇಷ. ಕರ್ನಾಟಕದ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ ಹಾಗೂ ಪಂಜಾಬ್ ವೇಗಿ ಸಿದ್ದಾರ್ಥ್ ಕೌಲ್ ಮತ್ತು ಜಾರ್ಖಂಡ್ ನ ಎಡಗೈ ಸ್ಪಿನ್ನರ್ ಶಬಾಜ್ ನದೀಂ ತಂಡದಲ್ಲಿ ಹೊಸ ಮುಖಗಳಾಗಿದ್ದಾರೆ.

ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆಯಾಗಿರುವ ಭಾರತ ತಂಡದಲ್ಲಿರುವ 9 ಜನ ಸದಸ್ಯರು ಎ ತಂಡದಲ್ಲೂ ಆಯ್ಕೆಯಾಗಿದ್ದರು. ಜಿಂಬಾಬ್ವೆ ಪ್ರವಾಸ ಆಗಸ್ಟ್ 3 ಕ್ಕೆ ಮುಕ್ತಾಯವಾಗಲಿದ್ದು 5 ದಿನಗಳ ನಂತರ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಪಂದ್ಯವಾಡಬೇಕಿದೆ. ಆಗಸ್ಟ್ 27 ರಂದು ದಕ್ಷಿಣ ಆಫ್ರಿಕಾ ಪ್ರವಾಸ ಮುಕ್ತಾಯವಾಗಲಿದೆ.


ಭಾರತ ಎ ತಂಡ ಇಲ್ಲಿದೆ: ಚೇತೇಶ್ವರ್ ಪೂಜಾರ(ನಾಯಕ), ಶಿಖರ್ ಧವನ್, ಮುರಳಿ ವಿಜಯ್, ರೋಹಿತ್ ಶರ್ಮ, ಸುರೇಶ್ ರೈನಾ, ಅಂಬಟಿ ರಾಯುಡು, ದಿನೇಶ್ ಕಾರ್ತಿಕ್, ಅಜಿಂಕ್ಯ ರಹಾನೆ, ವೃದ್ಧಿಮಾನ್ ಸಹಾ, ಪರ್ವೇಜ್ ರಸೂಲ್, ಶಬಾಜ್ ನದೀಂ, ಶಮಿ ಅಹ್ಮದ್, ಸ್ಟುವರ್ಟ್ ಬಿನ್ನಿ, ಈಶ್ವರ್ ಪಾಂಡೆ, ಜಯದೇವ್ ಉನದ್ಕತ್, ಸಿದ್ದಾರ್ಥ್ ಕೌಲ್

ಭಾರತ 'ಎ' ತಂಡ ದಕ್ಷಿಣ ಆಫ್ರಿಕಾ ಪ್ರವಾಸ ವೇಳಾಪಟ್ಟಿ:
* ಆಗಸ್ಟ್ 8, ಗುರುವಾರ: ಮೊದಲ ಏಕದಿನ ಪಂದ್ಯ ಅಸ್ಟೇಲಿಯಾ 'ಎ' ವಿರುದ್ಧ
* ಆಗಸ್ಟ್ 9 ಶುಕ್ರವಾರ : ಎರಡನೇ ಏಕದಿನ ಪಂದ್ಯ ದಕ್ಷಿಣ ಆಫ್ರಿಕಾ'ಎ 'ವಿರುದ್ಧ
* ಆಗಸ್ಟ್ 11 ಭಾನುವಾರ: ಮೂರನೇ ಏಕದಿನ ಪಂದ್ಯ ಅಸ್ಟೇಲಿಯಾ 'ಎ' ವಿರುದ್ಧ
* ಆಗಸ್ಟ್ 12 ಸೋಮವಾರ: ನಾಲ್ಕನೇ ಏಕದಿನ ಪಂದ್ಯ ದಕ್ಷಿಣ ಆಫ್ರಿಕಾ'ಎ 'ವಿರುದ್ಧ

* ಆಗಸ್ಟ್ 14 ಬುಧವಾರ: ತ್ರಿಕೋನ ಸರಣಿ ಫೈನಲ್ ದಕ್ಷಿಣ ಆಫ್ರಿಕಾವಿರುದ್ಧ

* ಆಗಸ್ಟ್ 17-20 ಶನಿವಾರ : ಮೊದಲ 4 ದಿನ ಪಂದ್ಯ

* ಆಗಸ್ಟ್ 24-27 ಶನಿವಾರ: ಎರಡನೇ 4 ದಿನ ಪಂದ್ಯ

ದಟ್ಸ್ ಕ್ರಿಕೆಟ್

Story first published:  Friday, July 5, 2013, 17:54 [IST]
English summary
Cheteshwar Pujara will lead India 'A' team to South Africa next month. India 'A' will play a tri-series tournament involving South Africa 'A' and Australia 'A' and will also face the hosts in two four-day matches.
ಅಭಿಪ್ರಾಯ ಬರೆಯಿರಿ