Englishहिन्दीമലയാളംதமிழ்తెలుగు

ಟೀಂ ಇಂಡಿಯಾವನ್ನು ಬಗ್ಗುಬಡಿದ ಶ್ರೀಲಂಕಾ

Posted by:
Updated: Wednesday, July 3, 2013, 17:51 [IST]
 

ಟೀಂ ಇಂಡಿಯಾವನ್ನು ಬಗ್ಗುಬಡಿದ ಶ್ರೀಲಂಕಾ
 

ಕಿಂಗ್‌ಸ್ಟನ್, ಜು.3: ಸೆಲ್ಕಾನ್ ಮೊಬೈಲ್ ಕಪ್ ತ್ರಿಕೋನ ಸರಣಿಯ ಮೂರನೆ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಶ್ರೀಲಂಕಾ ತಂಡ ಭಾರಿ ಅಂತರದ ಜಯ ದಾಖಲಿಸಿದೆ. 349 ರನ್ ಗಳ ಬೃಹತ್ ಟಾರ್ಗೆಟ್ ಪಡೆದ ಟೀಂ ಇಂಡಿಯಾ 187 ರನ್ ಗಳಿಗೆ ಸುಸ್ತಾಗಿ ಮಲಗಿಬಿಟ್ಟಿತು.

ಈ ಸೋಲಿನಿಂದಾಗಿ ಸೆಲ್ಕಾನ್ ಮೊಬೈಲ್ ಕಪ್ ತ್ರಿಕೋನ ಸರಣಿಯಲ್ಲಿ ಭಾರತದ ಫೈನಲ್ ಹಾದಿ ಕಠಿಣವಾಗಿದೆ. ಭಾರತ ಮುಂದಿನ ಪಂದ್ಯವನ್ನು ವೆಸ್ಟ್ ಇಂಡೀಸ್ ವಿರುದ್ಧ ಜು.5 ರಂದು ಆಡಲಿದೆ.

ಸ್ಕೋರ್ ಕಾರ್ಡ್ ನೋಡಿ

ಬೃಹತ್ ಮೊತ್ತ ಬೆನ್ನಟ್ಟಿದ ಕೊಹ್ಲಿ ಪಡೆ ಆರಂಭದಲ್ಲೇ ಮುಗ್ಗರಿಸಿತು. ಕುಲಶೇಖರ ಬೌಲಿಂಗ್ ನಲ್ಲಿ ರೋಹಿತ್ ಶರ್ಮ ಕೇವಲ 5 ರನ್ ಗಳಿಸಿ ಪೆವಿಲಿಯನ್ ಗೆ ತೆರಳಿದರು. ಶಿಖರ್ ಧವನ್ ಹಾಗೂ ಮುರಳಿ ವಿಜಯ್ ಹಾಗೂ ಹೀಗೂ ತಂಡದ ಮೊತ್ತವನ್ನು 10 ಓವರ್ ಗಳಲ್ಲಿ ಕೇವಲ 28 ರನ್ ಮಾತ್ರ ಗಳಿಸಿದಾಗಲೇ ಭಾರತ ಗೆಲುವಿನ ಹಾದಿಯಿಂದ ಹಿಂದೆ ಸರಿಯುತ್ತಿರುವ ಸೂಚನೆ ಸಿಕ್ಕಿತು.

ಶಿಖರ್ ಧವನ್ 24 ರನ್, ಕೊಹ್ಲಿ 2 ರನ್ ಗಳಿಸಿ ಔಟಾದ ಮೇಲೆ 30 ರನ್ ಗಳಿಸಿದ್ದ ವಿಜಯ್ ಕೂಡಾ ಪೆವಿಲಿಯನ್ ಸೇರಿದರು. ದಿನೇಶ್ ಕಾರ್ತಿಕ್ 22, ಸುರೇಶ್ ರೈನಾ 33 ರನ್ ಗಳಿಸಿ ಹೋರಾಟ ತೋರಿದರು.

ರವೀಂದ್ರ ಜಡೇಜ 49 ರನ್ ಗಳಿಸಿ ಔಟಾಗದೆ ಉಳಿದು ಲಂಕಾ ತಂಡ ಗೆಲುವಿನ ಸಂಭ್ರಮವನ್ನು ಕ್ರೀಸ್ ನಲ್ಲಿ ನಿಂತು ನೋಡಿದ್ದಷ್ಟೇ ಬಂತು. ಲಂಕಾ ಪರ ಸ್ಪಿನ್ನರ್ ಹೆರತ್ 3, ಮಾಲಿಂಗ, ಸೇನಾನಾಯಕೆ ತಲಾ 2, ಕುಲ ಶೇಖರ, ಮ್ಯಾಥ್ಯೂಸ್ ತಲಾ 1 ವಿಕೆಟ್ ಪಡೆದರು.

ಶ್ರೀಲಂಕಾ ಇನ್ನಿಂಗ್ಸ್: ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಉಪುಲ್ ತರಂಗ ಮತ್ತು ಮಹೇಲ ಜಯವರ್ಧನೆ ಅವರ ಆಕರ್ಷಕ ಶತಕಗಳ ನೆರವಿನಲ್ಲಿ 50 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 348 ರನ್ ಗಳಿಸಿತು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಲಂಕಾದ ಪರ ಆರಂಭಿಕ ದಾಂಡಿಗರಾದ ಉಪುಲ್ ತರಂಗ ಮತ್ತು ಮಹೇಲ ಜಯವರ್ಧನೆ ಮೊದಲ ವಿಕೆಟ್‌ಗೆ 38.4 ಓವರ್‌ಗಳಲ್ಲಿ 213 ರನ್ ಸೇರಿಸಿದರು.

ಜಯವರ್ಧನೆ 112 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ 107 ರನ್ (16ನೇ ಏಕದಿನ ಶತಕ) ಗಳಿಸಿ ರವಿಚಂದ್ರನ್ ಅಶ್ವಿನ್ ಎಸೆತದಲ್ಲಿ ಯಾದವ್‌ಗೆ ಕ್ಯಾಚ್ ನೀಡಿ ಔಟಾದರು. ತರಂಗ ಔಟಾಗದೆ 174 ರನ್ (159ಎ, 19ಬೌ,3ಸಿ) ಗಳಿಸಿ ಭಾರತಕ್ಕೆ ಮುಳುವಾದರು. ಇದು ಅವರ 13ನೇ ಏಕದಿನ ಶತಕವಾಗಿದೆ. ನಾಯಕ ಏಂಜೆಲೊ ಮ್ಯಾಥ್ಯೂಸ್ ಔಟಾಗದೆ 44 ರನ್(29ಎ, 4ಬೌ, 1ಸಿ) ಸೇರಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಕೇವಲ ಒಂದು ವಿಕೆಟ್ ಕಳೆದುಕೊಂಡು 348 ರನ್ ಗಳಿಸಿತು.

ಧೋನಿ ಬದಲಿಗೆ ತಂಡದಲ್ಲಿ ಮುರಳಿ ವಿಜಯ್ ಮತ್ತು ಭುವನೇಶ್ವರ ಕುಮಾರ್ ಬದಲಿಗೆ ಶಮಿ ಅಹ್ಮದ್ ಅಂತಿಮ ಹನ್ನೊಂದರಲ್ಲಿ ಸ್ಥಾನ ಪಡೆದಿದ್ದಾರೆ. ಲಂಕಾ ತಂಡದಲ್ಲೂ ಎರಡು ಬದಲಾವಣೆ ಮಾಡಲಾಗಿದ್ದು, ಜೀವನ್ ಮೆಂಡಿಸ್ ಮತ್ತು ಅಜಂತ ಮೆಂಡಿಸ್‌ನ್ನು ಕೈ ಬಿಟ್ಟು ಕುಶಲ್ ಪೆರೆರಾ ಮತ್ತು ಸಚಿತ್ರ ಸೇನನಾಯಕರನ್ನು ಸೇರಿಸಿಕೊಳ್ಳಲಾಗಿತ್ತು.

Story first published:  Wednesday, July 3, 2013, 9:14 [IST]
English summary
Upul Tharanga scored a career-best unbeaten 174 as Sri Lanka produced a clinical display to thrash India by 161 runs in the third match of the ODI tri-series.
ಅಭಿಪ್ರಾಯ ಬರೆಯಿರಿ