Englishहिन्दीമലയാളംதமிழ்తెలుగు

ವಿರಾಟ್ ಕೊಹ್ಲಿ ಟೀಂ ಇಂಡಿಯಾದ 22ನೇ ನಾಯಕ

Posted by:
Updated: Wednesday, July 3, 2013, 17:52 [IST]
 

ಕಿಂಗ್ ಸ್ಟನ್(ಜಮೈಕಾ, ಜು.2: ಯುವ ಆಟಗಾರ ವಿರಾಟ್ ಕೊಹ್ಲಿ ಮಂಗಳವಾರ ರಾತ್ರಿ ಶ್ರೀಲಂಕಾ ವಿರುದ್ಧದ ಪಂದ್ಯದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಈ ಮೂಲಕ ದೇಶದ 22ನೇ ಏಕದಿನ ಕ್ರಿಕೆಟ್ ಪಂದ್ಯಗಳ ನಾಯಕನಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಸೆಲ್ಕಾನ್ ಮೊಬೈಲ್ ಕಪ್ ತ್ರಿಕೋನ ಏಕದಿನ ಸರಣಿಯಲ್ಲಿ ಭಾರತಕ್ಕೆ ಈ ಪಂದ್ಯ ಮಹತ್ವದ್ದಾಗಿದೆ.

ಸ್ನಾಯು ಸೆಳೆತಕ್ಕೆ ಒಳಗಾಗಿ ಗಾಯಗೊಂಡಿರುವ ನಾಯಕ ಎಂಎಸ್ ಧೋನಿ ಅವರು ತ್ರಿಕೋನ ಸರಣಿಯಿಂದ ಹೊರಬಿದ್ದಿದ್ದಾರೆ. ಬಿಸಿಸಿಐ ಆಯ್ಕೆ ಸಮಿತಿ ಚರ್ಚೆ ನಡೆಸಿ ಕೊಹ್ಲಿ ಅವರನ್ನು ನಾಯಕನಾಗಿ ಆಯ್ಕೆ ಮಾಡಿದ್ದಾರೆ. ಇದುವರೆವಿಗೂ ಟೀಂ ಇಂಡಿಯಾದ ಉಪನಾಯಕನಾಗಿದ್ದ ಕೊಹ್ಲಿ ಇದೇ ಮೊದಲ ಬಾರಿಗೆ ಕ್ಯಾಪ್ಟನ್ ಹ್ಯಾಟ್ ಧರಿಸುತ್ತಿದ್ದಾರೆ.

ನಾಯಕ ಧೋನಿ ಸ್ಥಾನಕ್ಕೆ ಅಂಬಟಿ ರಾಯುಡು ಅವರು ತಂಡವನ್ನು ಸೇರಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯವನ್ನು ಸೋತಿರುವ ಭಾರತ ತಂಡ ಈ ಪಂದ್ಯವನ್ನು ಗೆದ್ದರೆ ಮಾತ್ರ ಫೈನಲ್ ತಲುಪಲು ಸಾಧ್ಯ.

ವಿರಾಟ್ ಕೊಹ್ಲಿ ಟೀಂ ಇಂಡಿಯಾದ 22ನೇ ನಾಯಕ

ನಾಯಕನಾದ ಕೊಹ್ಲಿ: 19 ವರ್ಷ ವಯೋಮಿತಿಯೊಳಗಿನ ಟೀಂ ಇಂಡಿಯಾವನ್ನು ಮುನ್ನಡೆಸಿದ್ದ ವಿರಾಟ್ ಕೊಹ್ಲಿ ಅವರು 2008ರಲ್ಲಿ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು. ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿ ಕೂಡಾ ಅನುಭವ ಹೊಂದಿದ್ದಾರೆ.

ಈಗ 24 ವರ್ಷ ವಯಸ್ಸಿನ ವಿರಾಟ್ ಕೊಹ್ಲಿ ಅವರು ಭಾರತದ 22ನೇ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಕೊಹ್ಲಿಗೂ ಮುನ್ನ ಟೀಂ ಇಂಡಿಯಾ ಮುನ್ನಡೆಸಿದ ನಾಯಕರು ಹಾಗೂ ಅವರು ನಾಯಕರಾಗಿದ್ದ ಪಂದ್ಯಗಳ ಪಟ್ಟಿ ಇಲ್ಲಿದೆ :

1. ಅಜಿತ್ ವಾಡೇಕರ್ (2 ಪಂದ್ಯಗಳು)
2. ಎಸ್ ವೆಂಕಟರಾಘವನ್ (7)
3. ಬಿಷನ್ ಸಿಂಗ್ ಬೇಡಿ (4)
4. ಸುನಿಲ್ ಗವಾಸ್ಕರ್ (37)
5. ಜಿ.ಆರ್ ವಿಶ್ವನಾಥ್ (1)
6. ಕಪಿಲ್ ದೇವ್ (74)
7. ಸೈಯದ್ ಕಿರ್ಮಾನಿ (1)
8. ಮೊಹಿಂದರ್ ಅಮರನಾಥ್ (1)
9. ರವಿ ಶಾಸ್ತ್ರಿ (11)
10. ದಿಲೀಪ್ ವೆಂಗ್ ಸರ್ಕಾರ್ (18)
11. ಕ್ರಿಸ್ ಶ್ರೀಕಾಂತ್ (13)
12. ಮೊಹಮ್ಮದ್ ಅಜರುದ್ದೀನ್ (174)
13. ಸಚಿನ್ ತೆಂಡೂಲ್ಕರ್ (73)
14. ಅಜಯ್ ಜಡೇಜ (13)
15. ಸೌರವ್ ಗಂಗೂಲಿ (146)
16. ರಾಹುಲ್ ದ್ರಾವಿಡ್ (79)
17. ಅನಿಲ್ ಕುಂಬ್ಳೆ (1)
18. ವೀರೆಂದರ್ ಸೆಹ್ವಾಗ್ (12)
19. ಎಂಎಸ್ ಧೋನಿ (141)
20. ಸುರೇಶ್ ರೈನಾ (9)
21. ಗೌತಮ್ ಗಂಭೀರ್ (6)
22. ವಿರಾಟ್ ಕೊಹ್ಲಿ

Story first published:  Tuesday, July 2, 2013, 14:49 [IST]
English summary
Kingston (Jamaica): Virat Kohli will become India's 22nd ODI captain when he leads the team against Sri Lanka in Celkon Mobile Cup tri-series here tonight(Jul.2).
ಅಭಿಪ್ರಾಯ ಬರೆಯಿರಿ