Englishहिन्दीമലയാളംதமிழ்తెలుగు

ಭಾರತಕ್ಕೆ 12 ಕೋಟಿ ಪ್ರಶಸ್ತಿ, ಇತಿಹಾಸ ಸೃಷ್ಟಿಯತ್ತ ಧೋನಿ

Posted by:
Published: Sunday, June 23, 2013, 13:33 [IST]
 

ಲಂಡನ್, ಜೂ.23: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಅಜೇಯವಾಗಿ ಉಳಿದು ಫೈನಲ್ ತಲುಪಿರುವ ಟೀಂ ಇಂಡಿಯಾ ಹೊಸ ದಾಖಲೆಗೆ ಸಜ್ಜಾಗಿದೆ. ಅತಿಥೇಯ ಇಂಗ್ಲೆಂಡ್ ವಿರುದ್ಧದ ಅಂತಿಮ ಹಣಾಹಣಿಯಲ್ಲಿ ಧೋನಿ ಪಡೆ ಗೆದ್ದರೆ ಸುಮಾರು 2 ಮಿಲಿಯನ್ ಯುಎಸ್ ಡಾಲರ್ ಭಾರತದ ಪಾಲಾಗಲಿದೆ. ಜೊತೆಗೆ ನಾಯಕ ಧೋನಿ ಕೂಡಾ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ.

ಕ್ರಿಕೆಟ್ ಇತಿಹಾಸದಲ್ಲಿ ಯಾವೊಬ್ಬ ನಾಯಕ ಕೂಡಾ ಮೂರು ಐಸಿಸಿ ಪ್ರಶಸ್ತಿಗಳನ್ನು ಗೆದ್ದಿಲ್ಲ. ಎಂಎಸ್ ಧೋನಿ ಚಾಂಪಿಯನ್ಸ್ ಟ್ರೋಫಿ ಗೆದ್ದು ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ಮೊದಲಿಗೆ ಬಹುಮಾನದ ಮೊತ್ತದತ್ತ ಕಣ್ಣು ಹಾಯಿಸಿದರೆ, ಇದು ಕಟ್ಟ ಕಡೆಯ ಚಾಂಪಿಯನ್ಸ್ ಟ್ರೋಫಿಯಾಗಿರುವುದರಿಂದ ಭಾರಿ ಮೊತ್ತದ ನಗದು ಹಣ ಗೆಲ್ಲುವ ತಂಡ ಕೈ ಸೇರಲಿದೆ. ಜೊತೆಗೆ ರನ್ನರ್ ಅಪ್ ಹಾಗೂ ಉಳಿದ ತಂಡಗಳಿಗೂ ಭಾರಿ ಮೊತ್ತ ಸಿಗಲ್ದಿಎ.

ಭಾರತಕ್ಕೆ 12 ಕೋಟಿ ಪ್ರಶಸ್ತಿ, ಇತಿಹಾಸ ಸೃಷ್ಟಿಯತ್ತ ಧೋನಿ

ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ತಂಡಕ್ಕೆ 2 ಮಿಲಿಯನ್ ಯುಎಸ್ ಡಾಲರ್(ಅಂದಾಜು 12 ಕೋಟಿ) ಹಾಗೂ ಆಕರ್ಷಕ ಕಪ್ ಸಿಗಲಿದೆ. ರನ್ನರ್ ಅಪ್ ತಂಡಕ್ಕೆ 1 ಮಿಲಿಯನ್ ಯುಎಸ್ ಡಾಲರ್ (ಅಂದಾಜು 6 ಕೋಟಿ ರು ) ಸಿಗಲಿದೆ. ಒಟ್ಟು ಬಹುಮಾನ ಮೊತ್ತ 4 ಮಿಲಿಯನ್ ಡಾಲರ್ ಆಗಿದೆ. ಎರಡು ಗುಂಪಿನಲ್ಲಿ ಕೊನೆ ಎರಡು ಸ್ಥಾನ ಪಡೆದ ತಂಡಗಳಿಗೆ ಯಾವುದೇ ಬಹುಮಾನ ಮೊತ್ತ ನೀಡಲಾಗುತ್ತಿಲ್ಲ.

* ಗೆಲ್ಲುವ ತಂಡಕ್ಕೆ : $2,000,000
* ರನ್ನರ್ ಅಪ್ ತಂಡಕ್ಕೆ : $1,000,000
* ಮೂರು ಹಾಗೂ ನಾಲ್ಕನೇ ಸ್ಥಾನ : ತಲಾ $400,000

* ಗುಂಪಿನಲ್ಲಿ ಮೂರು ಹಾಗೂ ನಾಲ್ಕನೇ ಸ್ಥಾನ: ತಲಾ $100,000

ಧೋನಿ ದಾಖಲೆ: ಐಸಿಸಿ ವಿಶ್ವ ಟ್ವೆಂಟಿ 20 ಚಾಂಪಿಯನ್ಸ್(2007) ಹಾಗೂ ಐಸಿಸಿ ವಿಶ್ವಕಪ್ (2011) ಗೆದ್ದಿರುವ ಮಹೇಂದ್ರ ಸಿಂಗ್ ಧೋನಿ ಈಗ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಉತ್ಸಾಹದಲ್ಲಿದ್ದಾರೆ.

ಇದಲ್ಲದೆ ಸ್ಥಳೀಯ ಟೂರ್ನಿಗಳಲ್ಲಿ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಂಡಿಯನ್ ಪ್ರಿಮಿಯರ್ ಲೀಗ್ ನ ಪ್ರಶಸ್ತಿಯನ್ನು 2010 ಹಾಗೂ 2011 ರಲ್ಲಿ ಗೆದ್ದುಕೊಂಡಿದೆ ಹಾಗೂ ಚಾಂಪಿಯನ್ಸ್ ಲೀಗ್ ಟ್ವೆಂಟಿ 20 ಟೂರ್ನಿ(2010) ಕಪ್ ಎತ್ತಿದೆ.

ಭಾರತದ ಹೆಮ್ಮೆಯ ಕ್ರಿಕೆಟರ್ 31 ವರ್ಷದ ಧೋನಿ ಸಾಧನೆ ಸರಿಗಟ್ಟುವ ಸಾಧನೆ ಸದ್ಯಕ್ಕಂತೂ ಸಾಧ್ಯವಿಲ್ಲ. ಆಸ್ಟ್ರೇಲಿಯಾದ ರಿಕಿ ಪಾಮ್ಟಿಂಗ್ ಅವರು ಎರಡು ಯಶಸ್ವಿ ಟೂರ್ನಿ ಗೆದ್ದಿದ್ದರು. ಐಸಿಸಿ ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿಯನ್ನು ರಿಕಿ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಗೆದ್ದಿತ್ತು ಆದರೆ, ವಿಶ್ವ ಟಿ20 ಗೆಲ್ಲುವಲ್ಲಿ ವಿಫಲವಾಗಿತ್ತು. ಧೋನಿ ದಾಖಲೆ ನಿರ್ಮಿಸುವರೇ? ಕಾದು ನೋಡಿ.. ದಟ್ಸ್ ಕ್ರಿಕೆಟ್ ನಲ್ಲಿ ಅಪ್ದೇಟ್ ತಪ್ಪದೇ ಓದಿ

English summary
Team India have a chance to pocket $2 million by winning the Champions Trophy 2013 today. MS Dhoni-led India will face hosts England in the final of Champions Trophy here at Edgbaston from 3PM IST. Dhoni is on the verge of becoming the first skipper in the history of the game to win all three ICC global titl
ಅಭಿಪ್ರಾಯ ಬರೆಯಿರಿ