Englishहिन्दीമലയാളംதமிழ்తెలుగు

ಕಾರ್ಡಿಫ್ :ಲಂಕಾ ಮೇಲೆ ಭಾರತಕ್ಕೆ ಭರ್ಜರಿ ಜಯ, ಫೈನಲಿಗೆ ಲಗ್ಗೆ

Posted by:
Updated: Thursday, June 20, 2013, 23:19 [IST]
 

ಕಾರ್ಡಿಫ್, ಜೂ.20: ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ಧೋನಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ಫಲ ನೀಡಿದೆ. ಲಂಕಾ ತಂಡವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿದ ಭಾರತ, ಗೆಲುವಿನ ಮೊತ್ತವನ್ನು ಸುಲಭವಾಗಿ ಚೇಸ್ ಮಾಡಿ 8 ವಿಕೆಟ್ ಗಳ ಅರ್ಹ ಜಯ ದಾಖಲಿಸಿದೆ. ಲಂಕಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಟೀಂ ಇಂಡಿಯಾ ಜೂ.23 ರಂದು ನಡೆಯುವ ಫೈನಲ್ ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

ಲಂಕಾ ತಂಡ ಒಡ್ಡಿದ್ದ 182 ರನ್ ಗಳ ಮೊತ್ತವನ್ನು ಭಾರತ ತಂಡ ಕೇವಲ 2 ವಿಕೆಟ್ ಕಳೆದುಕೊಂಡು 35 ಓವರ್ ಗಳಲ್ಲಿ ಸಾಧಿಸಿತು. ವಿರಾಟ್ ಕೊಹ್ಲಿ 58 ರನ್ (64 ಎಸೆತ, 4 ಬೌಂಡರಿ, 1 ಸಿಕ್ಸರ್) ಗಳಿಸಿ ಔಟಾಗದೆ ಉಳಿದರೆ, ಸುರೇಶ್ ರೈನಾ ಬೌಂಡರಿ ಹೊಡೆದು ಜಯದ ರನ್ ಬಾರಿಸಿದರು.

ಇದಕ್ಕೂ ಮುನ್ನ ಶಿಖರ್ ಧವನ್ ಹಾಗೂ ರೋಹಿತ್ ಶರ್ಮ ಉತ್ತಮ ಆರಂಭ ಒದಗಿಸಿದರು. ಶಿಖರ್ ಧವನ್ 68 ರನ್ (92 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ರೋಹಿತ್ ಶರ್ಮ 50 ಎಸೆತದಲ್ಲಿ 33 ರನ್ ಗಳಿಸಿ ಔಟಾದರು. ಲಂಕಾ ಪರ ಮಾಥ್ಯೂಸ್ ಹಾಗೂ ಮೆಂಡಿಸ್ ತಲಾ 1 ವಿಕೆಟ್ ಗಳಿಸಿದರು.

ಕಾರ್ಡಿಫ್ :ಲಂಕಾ ಮೇಲೆ ಭಾರತಕ್ಕೆ ಭರ್ಜರಿ ಜಯ, ಫೈನಲಿಗೆ ಲಗ್ಗೆ

ಸ್ಕೋರ್ ಕಾರ್ಡ್ ನೋಡಿ

ಶ್ರೀಲಂಕಾ ಇನ್ನಿಂಗ್ಸ್ : ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಲಂಕಾ ತಂಡದ ಆರಂಭ ಉತ್ತಮವಾಗಿರಲಿಲ್ಲ. ಕುಶಾಲ್ ಪೆರೆರಾ 4 ರನ್ ಗಳಿಸಿ ಭುವನೇಶ್ವರ್ ಕುಮಾರ್ ಗೆ ವಿಕೆಟ್ ಒಪ್ಪಿಸಿದರು. ತಿಲಕರತ್ನೆ ದಿಲ್ಶನ್ ಗಾಯಗೊಂಡು ನಿವೃತ್ತಿ ಹೊಂದಿದರು.

ಸಂಗಕ್ಕಾರ ಹಾಗೂ ತಿರುಮನ್ನೆ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ಇದ್ದರೂ ರನ್ ವೇಗ ಹೆಚ್ಚಿಸಲಿಲ್ಲ. ಜಯವರ್ದನೆ, ನಾಯಕ ಏಂಜೆಲೊ ಮ್ಯಾಥ್ಯೂಸ್ ಅರ್ಧಶತಕ ಹಾಗೂ ಜೀವನ್ ಮೆಂಡಿಸ್ ಆಟದ ನೆರವಿನಿಂದ ಲಂಕಾ ತಂಡ 181 ರನ್ ಮುಟ್ಟಲ್ಲಷ್ಟೇ ಸಾಧ್ಯವಾಯಿತು.

ಭಾರತ ಪರ ಭುವನೇಶ್ವರ್ ಕುಮಾರ್ 9 ಓವರ್ ಗಳಲ್ಲಿ 18 ರನ್ನಿತ್ತು 1 ವಿಕೆಟ್ ಪಡೆದರೆ, ಇಶಾಂತ್ ಶರ್ಮ 33ಕ್ಕೆ 3, ಅಶ್ವಿನ್ 48ಕ್ಕೆ 3 ವಿಕೆಟ್ ಗಳಿಸಿ ಲಂಕಾ ತಂಡ ಆಸೆಗೆ ಭಂಗ ತಂದರು.

ಭಾರತ ತಂಡ ಕಳೆದ ಪಂದ್ಯದಲ್ಲಿ ಆಡಿದ ತಂಡವನ್ನೇ ಉಳಿಸಿಕೊಂಡಿದ್ದರೆ, ಶ್ರೀಲಂಕಾ ಎರಡು ಬದಲಾವಣೆ ಮಾಡಿದ್ದು ಥಿಸ್ಸಾರಾ ಪೆರೆರಾ ಹಾಗೂ ಜೀವನ್ ಮೆಂಡಿಸ್ ಅವರನ್ನು ತಂಡದಲ್ಲಿ ಸೇರಿಸಿಕೊಂಡಿದೆ. ಶಮಿಂದಾ ಎರಂಗಾ ಹಾಗೂ ದಿನೇಶ್ ಚಂಡಿಮಾಲ್ ಅವರನ್ನು ಕೂರಿಸಲಾಗಿದೆ. ಎರದನೇ ಸೆಮಿಫೈನಲ್ ಪಂದ್ಯ ಮಳೆ ಕಾರಣ 30 ನಿಮಿಷ ತಡವಾಗಿ ಆರಂಭಗೊಂಡಿತ್ತು.

ಭಾರತ: ಎಂಎಸ್ ಧೋನಿ(ನಾಯಕ), ಆರ್ ಅಶ್ವಿನ್, ಶಿಖರ್ ಧವನ್, ರವೀಂದ್ರ ಜಡೇಜ, ದಿನೇಶ್ ಕಾರ್ತಿಕ್, ವಿರಾಟ್ ಕೊಹ್ಲಿ, ಭುವನೇಶ್ವರ್ ಕುಮಾರ್, ಸುರೇಶ್ ರೈನಾ, ಇಶಾಂತ್ ಶರ್ಮ, ರೋಹಿತ್ ಶರ್ಮ, ಉಮೇಶ್ ಯಾದವ್

ಶ್ರೀಲಂಕಾ: ಏಂಜೆಲೋ ಮ್ಯಾಥ್ಯೂಸ್ (ನಾಯಕ), ತಿಲಕರತ್ನೆ ದಿಲ್ಶನ್, ರಂಗನಾ ಹೇರತ್, ಮಹೇಲ ಜಯವರ್ದನೆ, ನುವಾನ್ ಕುಲಶೇಖರ, ಲಸಿತ್ ಮಾಲಿಂಗ, ಜೀವನ್ ಮೆಂಡಿಸ್, ಕುಶಾಲ್ ಪೆರೆರಾ, ಥಿಸಾರಾ ಪೆರೆರಾ, ಕುಮಾರ್ ಸಂಗಕ್ಕಾರ, ಲಹಿರು ತಿರುಮನ್ನೆ

Story first published:  Thursday, June 20, 2013, 15:54 [IST]
English summary
India captain MS Dhoni's decision to field first worked well as Team India beat Sri Lanka by 8 wicket in the second semi-final of the Champions Trophy 2013 here on Thursday. India will face England on Sunday (June 23) at Edgbaston.
ಅಭಿಪ್ರಾಯ ಬರೆಯಿರಿ