Englishहिन्दीമലയാളംதமிழ்తెలుగు

ಲಂಕಾ ದಹನಕ್ಕೆ ಟೀಂ ಇಂಡಿಯಾ ಸಜ್ಜು

Posted by:
Published: Tuesday, June 18, 2013, 16:05 [IST]
 

ಲಂಡನ್, ಜೂ.18: ಚಾಂಪಿಯನ್ಸ್ ಟ್ರೋಫಿ 'ಎ' ಗುಂಪಿನ ಮಹತ್ವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ತಂಡವನ್ನು 20 ರನ್ ಗಳಿಂದ ಸೋಲಿಸಿದ ಶ್ರೀಲಂಕಾ ತಂಡವನ್ನು ಟೀಂ ಇಂಡಿಯಾ ಸೆಮಿಫೈನಲ್ ನಲ್ಲಿ ಎದುರಿಸಲಿದೆ.

ಹಾಲಿ ಚಾಂಪಿಯನ್ ಆಸ್ಟ್ರೇಲಿಯ ಸೋಲಿನೊಂದಿಗೆ ಕೂಟದಿಂದ ಅಂತಿಮವಾಗಿ ಹೊರನಡೆದಿದೆ. ಚಾಂಪಿಯನ್ಸ್ ಟ್ರೋಫಿ ನಿರ್ಣಾಯಕ ಪಂದ್ಯದಲ್ಲಿ ಶ್ರೀಲಂಕಾದ ವಿರುದ್ಧ ಗೆಲುವಿಗೆ 254 ರನ್ ಗಳ ಸವಾಲನ್ನು ಪಡೆದಿದ್ದ ಆಸ್ಟ್ರೇಲಿಯ ತಂಡ 42.3 ಓವರ್ ಗಳಲ್ಲಿ 233 ರನ್ ಗಳಿಗೆ ಆಲೌಟಾಯಿತು.

ಲಂಕಾ ದಹನಕ್ಕೆ ಟೀಂ ಇಂಡಿಯಾ ಸಜ್ಜು

ಎ ಗುಂಪಿನಲ್ಲಿ ಇಂಗ್ಲೆಂಡ್ ಹಾಗೂ ಶ್ರೀಲಂಕಾ ತಂಡಗಳು 4 ಅಂಕ ಗಳಿಸಿದರೂ ಉತ್ತಮ ರನ್ ಸರಾಸರಿ ಮೂಲಕ ಇಂಗ್ಲೆಂಡ್ ತಂಡ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದೆ. ನ್ಯೂಜಿಲೆಂಡ್ ತಂಡ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿದೆ.ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ನಾಲ್ಕನೇ ಸ್ಥಾನ ಗಳಿಸಿ ಟೂರ್ನಿಯಿಂದ ಹೊರ ನಡೆದಿದೆ.

ಮೊದಲ ಸೆಮಿಫೈನಲ್ ಜೂ.19 ರಂದು ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಜೂ.20ರಂದು ಭಾರತ ಮತ್ತು ಶ್ರೀಲಂಕಾ ಕಾದಾಡಲಿವೆ. ಫೈನಲ್ ಪಂದ್ಯ ಜೂ.23ರಂದು ನಡೆಯಲಿದೆ.

English summary
Sri Lanka set up a semi-final date with India after knocking holders Australia out with a 20-run victory in the final Group A match of the Champions Trophy 2013.
ಅಭಿಪ್ರಾಯ ಬರೆಯಿರಿ