Englishहिन्दीമലയാളംதமிழ்తెలుగు

ವಿಂಡೀಸ್ ತ್ರಿಕೋನ ಸರಣಿಗೆ ವಿನಯ್ ಆಯ್ಕೆ

Posted by:
Updated: Monday, June 17, 2013, 16:22 [IST]
 

ವಿಂಡೀಸ್ ತ್ರಿಕೋನ ಸರಣಿಗೆ ವಿನಯ್ ಆಯ್ಕೆ
 

ಮುಂಬೈ, ಜೂ.17: ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿರುವ ತ್ರಿಕೋನ ಕ್ರಿಕೆಟ್ ಸರಣಿಗಾಗಿ ಟೀಮ್ ಇಂಡಿಯಾ ತಂಡವನ್ನು ಸೋಮವಾರ(ಜೂ.17) ಪ್ರಕಟಿಸಲಾಗಿದೆ. ಇಂಗ್ಲೆಂಡಿನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿರುವ ತಂಡವನ್ನೇ ಬಹುತೇಕ ಉಳಿಸಿಕೊಳ್ಳಲಾಗಿದೆ. ಕರ್ನಾಟಕದ ವೇಗಿ ವಿನಯ್ ಕುಮಾರ್ ಕೂಡಾ ತಂಡದಲ್ಲಿದ್ದಾರೆ.

ಜೂನ್ 28ರಿಂದ ಜುಲೈ 11ರವರೆಗೆ ಕೆರಿಬಿಯನ್ ನಾಡಿನಲ್ಲಿ ನಡೆಯುವ ಸೆಲ್ಕಾನ್ ಮೊಬೈಲ್ ಕಪ್ ಟೂರ್ನಿ ನಡೆಯಲಿದೆ. ಆತಿಥೇಯ ವೆಸ್ಟ್ ಇಂಡೀಸ್, ಭಾರತ ಮತ್ತು ಶ್ರೀಲಂಕಾ ತಂಡಗಳು ಈ ಟೂರ್ನಿಯಲ್ಲಿ ಆಡಲಿವೆ.ಜಮೈಕಾ ಮತ್ತು ಟ್ರಿನಿಡಾಡ್.ನಲ್ಲಿ ಪಂದ್ಯಗಳು ನಡೆಯಲಿದ್ದು, ಮೂರೂ ತಂಡಗಳು ಪರಸ್ಪರ ಎರಡು ಪಂದ್ಯಗಳನ್ನು ಆಡಲಿವೆ.

ಟೂರ್ನಿ ಜೂನ್ 28ರಂದು ಆರಂಭಗೊಂಡರೂ ಭಾರತ ತಂಡ ತನ್ನ ಮೊದಲ ಪಂದ್ಯವನ್ನ ಜೂನ್ 30ರಂದು ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ.ಈ ಸರಣಿಗಾಗಿ ಧೋನಿ ನೇತೃತ್ವದಲ್ಲಿ 15 ಸದಸ್ಯರ ಭಾರತ ತಂಡವನ್ನ ಆಯ್ಕೆ ಮಾಡಲಾಗಿದೆ. ತಂಡ ಇಂತಿದೆ:


ಟೀಮ್ ಇಂಡಿಯಾ:

ಎಂ.ಎಸ್.ಧೋನಿ(ನಾಯಕ)

ಮುರಳಿ ವಿಜಯ್

ಶಿಖರ್ ಧವನ್

ರೋಹಿತ್ ಶರ್ಮಾ

ದಿನೇಶ್ ಕಾರ್ತಿಕ್

ವಿರಾಟ್ ಕೊಹ್ಲಿ

ಸುರೇಶ್ ರೈನಾ

ರವೀಂದ್ರ ಜಡೇಜಾ

ಅಮಿತ್ ಮಿಶ್ರಾ

ಇರ್ಫಾನ್ ಪಠಾಣ್

ಭುವನೇಶ್ವರ್ ಕುಮಾರ್

ಇಶಾಂತ್ ಶರ್ಮಾ

ಉಮೇಶ್ ಯಾದವ್

ಆರ್.ಅಶ್ವಿನ್

ವಿನಯ್ ಕುಮಾರ್

Story first published:  Monday, June 17, 2013, 16:18 [IST]
English summary
The selectors on Monday retained the same 15-member Indian squad currently in Champions Trophy, for the West Indies tri-series (50-over tournament) to be held from June 28 to July 11.
ಅಭಿಪ್ರಾಯ ಬರೆಯಿರಿ