Englishहिन्दीമലയാളംதமிழ்తెలుగు

ಎಂಎಸ್ ಧೋನಿ ಹಿಂದೆ ಹಾಕಿದ ವಿರಾಟ್ ಕೊಹ್ಲಿ

Posted by:
Updated: Friday, June 14, 2013, 18:36 [IST]
 

ಬೆಂಗಳೂರು, ಜೂ.14: ಟೀಂ ಇಂಡಿಯಾ ನಾಯಕ ಎಂಎಸ್ ಧೋನಿಯನ್ನು ಓವರ್ ಟೇಕ್ ಮಾಡಿದ್ದಾರೆ. ಕೊಹ್ಲಿ ನಾಯಕ ಪಟ್ಟಕ್ಕೇರಲು ಇನ್ನೂ ಕಾಲ ದೂರವಿದ್ದರೂ ದೆಹಲಿಯ ಯುವ ಆಟಗಾರ ಧೋನಿ ಅವರನ್ನು ಗಳಿಕೆಯಲ್ಲಿ ಹಿಂದಿಕ್ಕಿದ್ದಾರೆ ಎಂಬ ವರದಿ ಬಂದಿದೆ.

ಶುಕ್ರವಾರದ ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಕೊಹ್ಲಿ ಅವರು ಟಿವಿ ಜಾಹೀರಾತು ದರಪಟ್ಟಿಯಲ್ಲಿ 2013ರ ಮೊದಲ ಮೂರು ತಿಂಗಳಿನಲ್ಲಿ ಧೋನಿಗಿಂತ ಹೆಚ್ಚಿನ ಬೇಡಿಕೆ ಹಾಗೂ ಗಳಿಕೆಯನ್ನು ಹೊಂದಿದ್ದಾರೆ.

ಮಾಧ್ಯಮ ಜಾಹೀರಾತು ಮೇಲೆ ನಿಗಾವಹಿಸುವ ಸಂಸ್ಥೆ TAM ವರದಿ ಪ್ರಕಾರ ಟಿವಿ ಪರದೆಯಲ್ಲಿ ವಿರಾಟ್ ಕೊಹ್ಲಿ ಹೆಚ್ಚು ಬಾರಿ ಕಾಣಿಸಿಕೊಂಡಿದ್ದಾರೆ,ವೀಕ್ಷಕರಿಗೂ ಇದು ಮೆಚ್ಚುಗೆಯಾಗಿದೆ. ವರ್ಷದ ಮೊದಲ ಮೂರು ತಿಂಗಳಲ್ಲಿ ಇದು ರಿಪೀಟ್ ಅಗಿದೆ. [ಓದಿ: ವಿಶ್ವದ ಅತಿ ಶ್ರೀಮಂತ ಕ್ರೀಡಾಪಟುಗಳ ಪಟ್ಟಿ]

ಎಂಎಸ್ ಧೋನಿ ಹಿಂದೆ ಹಾಕಿದ ವಿರಾಟ್ ಕೊಹ್ಲಿ

ಧೋನಿ ಅವರು ವಾರ್ಷಿಕವಾಗಿ ಕನಿಷ್ಠವೆಂದರೂ 8-10 ಕೋಟಿ ರು ಗಳಿಸುತ್ತಿದ್ದಾರೆ. ಕ್ರೀಡಾ ರಾಯಭಾರಿಯಾಗಿ ಧೋನಿ ಎಲ್ಲರಿಗಿಂತ ಮುಂದಿದ್ದಾರೆ. ಜಗತ್ತಿನ ಶ್ರೀಮಂತರ ಪಟ್ಟಿಯಲ್ಲೂ ಧೋನಿಗೆ ಸ್ಥಾನ ಸಿಕ್ಕಿದೆ. ಆದರೆ, ಕೊಹ್ಲಿ ಮೌಲ್ಯ ಪ್ರತಿ ಬ್ರ್ಯಾಂಡ್ ಗೆ 3 ಕೋಟಿ ರು ನಷ್ಟಿತ್ತು ಈಗ 6 ಕೋಟಿ ರುಗೆ ಏರಿಕೆಯಾಗಿದೆ.

ವಿರಾಟ್ ಕೊಹ್ಲಿ ಕೈಲಿ ಈಗ 13ಕ್ಕೂ ಅಧಿಕ ಬ್ರ್ಯಾಂಡ್ ಗಳಿದೆ. ಬ್ರ್ಯಾಂಡ್ ಗಳ ಸಂಖ್ಯೆ ಪೈಕಿ ಧೋನಿ ಇದಕ್ಕಿಂತ ಹೆಚ್ಚು ಸಂಸ್ಥೆಗಳನ್ನು ಹೊಂದಿದ್ದರೂ ಬ್ರ್ಯಾಂಡ್ ಮೌಲ್ಯ ಇಳಿಮುಖವಾಗುತ್ತಿದೆ ಎಂದು TAM ಹೇಳಿದೆ.

ಸಿಂಥಾಲ್ ಡಿಯೋ, ನೆಸ್ಲೆ ಮಂಚ್ ತನ್ನ ತೆಕ್ಕೆಗೆ ಹಾಕಿಕೊಂಡಿದ್ದಾರೆ. ಪೆಪ್ಸಿ, ಟೊಯೊಟಾ ಲಿವಾ, ಟೈಟನ್ ಫಾಸ್ಟ್ ಟ್ರ್ಯಾಕ್ ವಾಚ್, ಸೆಲ್ಕಾನ್ ಮೊಬೈಲ್ ಫೋನ್, ಟಿವಿಎಸ್ ಮೋಟರ್ ಬೈಕ್, ಫೇರ್ ಅಂಡ್ ಲವ್ಲಿ ಇನ್ನಿತರ ಬ್ರ್ಯಾಂಡ್ ಗಳಿಗೆ ಕೊಹ್ಲಿಯೇ ರಾಯಭಾರಿ. ಧೋನಿ ಸ್ಥಾನದ ಮೇಲೆ ಕೊಹ್ಲಿ ಕಣ್ಣಿಟ್ಟಿದ್ದಾರೆ. ಜನಪ್ರಿಯತೆ, ಗಳಿಕೆಯಲ್ಲೂ ಮುನ್ನುಗ್ಗುತ್ತಿದ್ದಾರೆ ಮುಂದೇನಾಗುತ್ತೋ ಕಾದು ನೋಡೋಣ

ದಟ್ಸ್ ಕ್ರಿಕೆಟ್

Story first published:  Friday, June 14, 2013, 18:22 [IST]
English summary
Virat Kohli might be far off from replacing MS Dhoni as India's captain, but the Delhi youngster has outshone his skipper on Television in terms of advertisements.
ಅಭಿಪ್ರಾಯ ಬರೆಯಿರಿ