Englishहिन्दीമലയാളംதமிழ்తెలుగు

ಮತ್ತೆ ಕಣಕ್ಕಿಳಿದ ಅಚ್ಚರಿ ಕ್ರಿಕೆಟರ್ ದ್ರಾವಿಡ್

Posted by:
Updated: Thursday, June 13, 2013, 18:25 [IST]
 

ಬೆಂಗಳೂರು, ಜೂ.13: ಕ್ರಿಕೆಟ್ ಲೋಕದ ದಿಗ್ಗಜ ರಾಹುಲ್ ದ್ರಾವಿಡ್ ಎಲ್ಲಾ ಪ್ರಕಾರ ನಿವೃತ್ತಿ ಹೊಂದಿದರೂ ಬ್ಯಾಟ್ ಮೂಲೆಗೆಸೆದಿಲ್ಲ. ಕಿರಿಯ ಆಟಗಾರರನ್ನು ಹುರಿದುಂಬಿಸಲು ಕ್ಲಬ್ ಮಟ್ಟದಲ್ಲಿ ಮತ್ತೊಮ್ಮೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿ ಒಂದು ವರ್ಷವಾದರೂ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಕಾಣಿಸಿಕೊಂಡರು. ರಾಜಸ್ಥಾನ ರಾಯಲ್ಸ್ ಪರ ಆಡಿದ್ದಲ್ಲದೆ ತಂಡವನ್ನು ಸಮರ್ಥವಾಗಿ ಮುನ್ನಡೆಸಿದರು.

ಆದರೆ, ಸ್ಪಾಟ್ ಫಿಕ್ಸಿಂಗ್ ಪ್ರಕರಣ ಬೆಳಕಿಗೆ ಬಂದ ಮೇಲೆ ದ್ರಾವಿಡ್ ಕೂಡಾ ಕೊಂಚ ಮಂಕಾದರು. ಆದರೆ, ಮತ್ತೆ ಕ್ರಿಕೆಟ್ ಬ್ಯಾಟ್ ಹಿಡಿದು ಮೈದಾನಕ್ಕೆ ದ್ರಾವಿಡ್ ಇಳಿದಿದ್ದಾರೆ. ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್ ಪರ ಆಡಿ ಅರ್ಧ ಶತಕ ಬಾರಿಸಿ ಯುವ ಪ್ರತಿಭೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ.

ಟೀಂ ಇಂಡಿಯಾ ಮಾಜಿ ನಾಯಕನ ಜೊತೆ ಕ್ರಿಕೆಟ್ ಆಡಿದ ಸಹ ಆಟಗಾರರು ಪುಳಕಗೊಂಡಿದ್ದರು. ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯ ಮೊದಲ ಡಿವಿಷನ್ ಬೆಂಗಳೂರು ಕ್ಲಬ್BUCC(1) ಪರ ದ್ರಾವಿಡ್ ಬ್ಯಾಟ್ ಬೀಸಿದ್ದಾರೆ. ಗ್ರೂಪ್ 1 ರ 2 ನೇ ಡಿವಿಷನ್ ಪರ ಅಡಿದ ದ್ರಾವಿಡ್ 69 ರನ್ ಗಳಿಸಿದ್ದಾರೆ.

ದ್ರಾವಿಡ್ ಅವರಿದ್ದ ಕ್ಲಬ್ ಸ್ಟ್ಯಾಡರ್ಡ್ ಕ್ರಿಕೆಟ್ ಕ್ಲಬ್ ಮೇಲೆ 91 ರನ್ ಗಳ ಅಂತರದ ಜಯ ದಾಖಲಿಸಿದೆ. MAT ಎನ್ ಆರ್ ಎ ಕ್ರೀಡಾಂಗಣದಲ್ಲಿ ನಡೆದ ಎರಡು ದಿನಗಳ ಆಚಾರ್ಯ ಶೀಲ್ಡ್ ಪಂದ್ಯ ಇದಾಗಿತ್ತು.

ದ್ರಾವಿಡ್ ಅವರ ಹುಮ್ಮಸ್ಸು ಹಾಗೂ ಯುವ ಆಟಗಾರರ ಬೇಡಿಕೆ ನೋಡಿದರೆ ದ್ರಾವಿಡ್ ಅವರು ಈ ತಿಂಗಳು ಇನ್ನಷ್ಟು ಪಂದ್ಯಗಳನ್ನು ಆಡುವ ಸಾಧ್ಯತೆಯಿದೆ.

ಸಂಕ್ಷಿಪ್ತ ಸ್ಕೋರ್:
ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್: 365/9 ಡಿಕ್ಲೇರ್ (ಸನತ್ ಶ್ರೀನಿವಾಸ್ 40, ನಿಹಾಲ್ ಉಲ್ಲಾಳ್ 86, ರಾಹುಲ್ ದ್ರಾವಿಡ್ 69, ಕಿರಣ್ 2/30)

ಸ್ಟ್ಯಾಂಡರ್ಡ್ ಕ್ರಿಕೆಟ್ ಕ್ಲಬ್ : 160 ಆಲೌಟ್
(ಯುವರಾಜ್ 31, ಶಶಿಕುಮಾರ್ 56, ಪರಪ್ಪ ಮರ್ಡಿ 7/34)

Story first published:  Thursday, June 13, 2013, 18:16 [IST]
English summary
Rahul Dravid's love for batting has not diminished even after retiring from international cricket last year. A few days after the Twenty20 grind in Indian Premier League with Rajasthan Royals, Dravid padded up again - this time for his club Bangalore United Cricket Club (1) here and scored a half century
ಅಭಿಪ್ರಾಯ ಬರೆಯಿರಿ