Englishहिन्दीമലയാളംதமிழ்తెలుగు

ಭಾರತ-ವೆಸ್ಟ್ ಇಂಡೀಸ್ ಪಂದ್ಯದ ವರದಿ

Posted by:
Updated: Wednesday, June 12, 2013, 16:57 [IST]
 

ಭಾರತ-ವೆಸ್ಟ್ ಇಂಡೀಸ್ ಪಂದ್ಯದ ವರದಿ
 

ಲಂಡನ್, ಜೂ,11: ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ಫಲ ನೀಡಿದೆ. ಚಾಂಪಿಯನ್ಸ್ ಟ್ರೋಫಿಯ ಬಿ ಗುಂಪಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ವಿರುದ್ಧ ಧೋನಿ ಪಡೆ ಗೆಲುವಿಗೆ 234 ರನ್ ಗಳನ್ನು ಗಳಿಸಬೇಕಾಗಿದ್ದ ಟೀಮ್ ಇಂಡಿಯಾ ಇನ್ನೂ 65 ಎಸೆತಗಳು ಬಾಕಿ ಉಳಿದಿರುವಂತೆ 2 ವಿಕೆಟ್ ನಷ್ಟದಲ್ಲಿ 236 ರನ್ ಮಾಡಿ ಗೆಲುವಿನ ಗುರಿ ಮುಟ್ಟಿತು.

ಸ್ಕೋರ್ ಕಾರ್ಡ್ ನೋಡಿ

ಸ್ಕೋರ್ ವಿವರ
ವೆಸ್ಟ್ ಇಂಡೀಸ್: 50 ಓವರ್ ಗಳಲ್ಲಿ 233/9

ಭಾರತ: 39.1 ಓವರ್ ಗಳಲ್ಲಿ 2 ವಿಕೆಟ್ ಗೆ 236 ರನ್

ಭಾರತದ ಪರ ವಿರಾಟ್ ಕೊಹ್ಲಿ 100ನೇ ಪಂದ್ಯವಾಡುತ್ತಿದ್ದರೆ, ಸ್ಪಿನ್ನರ್ ಆರ್ ಅಶ್ವಿನ್ ಅವರು 50ನೇ ಪಂದ್ಯವಾಡುತ್ತಿದ್ದಾರೆ. ಪಾಕಿಸ್ತಾನ ವಿರುದ್ಧ ಕೈಚೆಲ್ಲಿದ ಕ್ಯಾಚನ್ನು ಹಿಡಿದಿದ್ದಾಗಿ ಹೇಳಿದ್ದ ವಿಂಡೀಸ್ ವಿಕೆಟ್ ಕೀಪರ್ ದಿನೇಶ್ ರಾಮದೀನ್ ಅವರನ್ನು 2 ಪಂದ್ಯಗಳಿಗೆ ಅಮಾನತುಗೊಳಿಸಲಾಗಿದೆ. ಅವರ ಸ್ಥಾನದಲ್ಲಿ ಜಾನ್ಸನ್ ಚಾರ್ಲ್ಸ್ ಆಡುತ್ತಿದ್ದಾರೆ. ಬ್ರಾವೋ ನೇತೃತ್ವದ ವೆಸ್ಟ್ ಇಂಡೀಸ್ ತಂಡಕ್ಕೆ ಡರೇನ್ ಸ್ಯಾಮಿ ಸೇರ್ಪಡೆಗೊಂಡಿದ್ದಾರೆ.

ಭಾರತ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಜಯ ಗಳಿಸಿದ್ದರೆ, ವೆಸ್ಟ್ ಇಂಡೀಸ್ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿತ್ತು. 1983ರ ವಿಶ್ವಕಪ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೆಣಸಿದ್ದ ಭಾರತ ಎರಡು ದಶಕಗಳ ನಂತರ ಮತ್ತೊಮ್ಮೆ ಇಂಗ್ಲೆಂಡ್ ನೆಲದಲ್ಲಿ ಕಾದಾಡಿದ್ದು ವಿಶೇಷ.
ತಂಡಗಳು:
ಭಾರತ: ಎಂಎಸ್ ಧೋನಿ (ನಾಯಕ, ವಿಕೆಟ್ ಕೀಪರ್), ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ, ಸುರೇಶ್ ರೈನಾ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜ, ಉಮೇಶ್ ಯಾದವ್, ಇಶಾಂತ್ ಶರ್ಮ, ಭುವನೇಶ್ವರ್ ಕುಮಾರ್, ಆರ್ ಅಶ್ವಿನ್

ವೆಸ್ಟ್ ಇಂಡೀಸ್: ಡ್ವಾಯ್ನೆ ಬ್ರಾವೋ(ನಾಯಕ), ಕ್ರಿಸ್ ಗೇಲ್, ಜಾನ್ಸನ್ ಚಾರ್ಲ್ಸ್ (ವಿಕೆಟ್ ಕೀಪರ್) , ಡರೇನ್ ಬ್ರಾವೋ, ಮರ್ಲಾನ್ ಸ್ಯಾಮುಯಲ್ಸ್, ರಾಮ್ ನರೇಶ್ ಸರವಣ್, ಕಿರೋನ್ ಪೊಲ್ಲಾರ್ಡ್, ಡರೇನ್ ಸ್ಯಾಮಿ, ಸುನಿಲ್ ನರೇನ್, ರವಿ ರಾಮ್ ಪಾಲ್, ಕೇಮಾರ್ ರೋಚ್

Story first published:  Tuesday, June 11, 2013, 15:29 [IST]
English summary
India crushed West Indies by 8 wickets in a Group B match of Champions Trophy here on Tuesday (June 11) and booked a berth in the semi-finals.
ಅಭಿಪ್ರಾಯ ಬರೆಯಿರಿ