Englishहिन्दीമലയാളംதமிழ்తెలుగు

ದೇಶಕ್ಕಾಗಿ ಆಡಿ, ಹಣಕ್ಕಾಗಿ ಬೇಡ: ಕಿರ್ಮಾನಿ

Posted by:
Published: Friday, June 7, 2013, 12:01 [IST]
 

ತುಮಕೂರು, ಜೂ.7: ಯುವ ಆಟಗಾರರು ಉತ್ತಮ ಹಾಗೂ ಉನ್ನತ ಭವಿಷ್ಯಕ್ಕಾಗಿ ಶಿಸ್ತು, ಪರಿಶ್ರಮ, ಬದ್ಧತೆಯೊಂದಿಗೆ ಉತ್ತಮ ಹವ್ಯಾಸ, ಸನ್ನಡತೆ ಹಾಗೂ ಸತ್ಯನಿಷ್ಠೆಯುಳ್ಳವರಾಗಬೇಕು. ದೇಶಕ್ಕಾಗಿ ಆಡುವುದು ಮುಖ್ಯ, ಹಣಕ್ಕಾಗಿ ಬೇಡ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿಯ ನಿರ್ದೇಶಕ ಸಯ್ಯದ್ ಕಿರ್ಮಾನಿ ಕಿವಿಮಾತು ಹೇಳಿದ್ದಾರೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆರ್.ಸಿ.ಕೆ.ಎಸ್.ಸಿ.ಎ. ಅಕಾಡೆಮಿ ವತಿಯಿಂದ ತುಮಕೂರಿನ ಎಸ್.ಐ.ಟಿ. ಕ್ರೀಡಾಂಗಣದಲ್ಲಿ ತುಮಕೂರು ಜಿಲ್ಲೆಯ 16 ಹಾಗೂ 19 ವರ್ಷದೊಳಗಿನ ಆಯ್ದ ಯುವ ಆಟಗಾರರಿಗೆ ಏರ್ಪಡಿಸಿದ್ದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರಕ್ಕೆ ಭೇಟಿ ನೀಡಿ ಮಾತನಾಡುತ್ತಿದ್ದರು.

ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ಬಗ್ಗೆ ಹತ್ತು ಹಲವು ಸಲಹೆ-ಸೂಚನೆಯನ್ನು ನೀಡಿದ ಅವರು, ಏಕಾಗ್ರತೆ, ಸತತ ಪರಿಶ್ರಮ, ನಿರಂತರ ಅಭ್ಯಾಸದಿಂದ ಮಾತ್ರ ಒಬ್ಬ ಉತ್ತಮ ಆಟಗಾರನಾಗಲು ಸಾಧ್ಯ ಎಂದರು. ವಿಕೆಟ್ ಕೀಪಿಂಗ್ ಕುರಿತು ಸುದೀರ್ಘವಾಗಿ ವಿವರಿಸುತ್ತ, ತಾವೇ ಪ್ರಾಯೋಗಿಕವಾಗಿ ಮಾಡಿದರು. ಈ ಶಿಬಿರದಲ್ಲಿ ಉತ್ತಮ ಆಟಗಾರರನ್ನು ಗುರುತಿಸಿ, ಅವರಿಗೆ ಬೆಂಗಳೂರಿನಲ್ಲಿ ನಡೆಯುವ ಶಿಬಿರಕ್ಕೆ ಆಯ್ಕೆ ಮಾಡಿ ವರ್ಷಪೂರ್ತಿ ಸೂಕ್ತ ತರಬೇತಿ ನೀಡಲಾಗುವುದು ಎಂದರು.

ಮಾಜಿ ರಣಜಿ ಆಟಗಾರ ಆರ್. ಅನಂತ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಕುರಿತು ಆಟಗಾರರಿಗೆ ಸೂಕ್ತ ತರಬೇತಿ ನೀಡಿದರು. ಜಿಲ್ಲೆಯಿಂದ ಸುಮಾರು 50 ಆಟಗಾರರು ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಕೆ.ಎಸ್.ಸಿ.ಎ. ತುಮಕೂರು ವಲಯದ ಛೇರ್ಮನ್ ಡಾ. ಸಿ.ಜಯರಾಮರಾವ್, ವಲಯ ಸಂಯೋಜಕ ಟಿ.ಬಿ.ಪ್ರಶಾಂತ್, ತರಬೇತುದಾರರಾದ ಪಿ. ಆರೋಕ್ಯಸ್ವಾಮಿ, ಎಂ. ಲೋಕೇಶ್, ನರೇಂದ್ರ ತಿರು ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಕ್ಯಾಂಪಿನ ಕೆಲವು ಚಿತ್ರಗಳು ನಿಮಗಾಗಿ

ಕೆಎಸ್ ಸಿಎ ಬೇಸಿಗೆ ಶಿಬಿರ

ಬೇಸಿಗೆ ತರಬೇತಿ ಶಿಬಿರದಲ್ಲಿ ಯುವ ಆಟಗಾರರಿಗೆ ಸೂಕ್ತ ಸಲಹೆ ನೀಡುತ್ತಿರುವ ಸಯ್ಯದ್ ಕಿರ್ಮಾನಿ

ಸಯ್ಯದ್ ಕಿರ್ಮಾನಿ ಸಲಹೆ

ಯುವ ಪ್ರತಿಭೆಗಳಿಗೆ ಸಯ್ಯದ್ ಕಿರ್ಮಾನಿ ಸಲಹೆ ಜೊತೆಗೆ ಆರ್. ಅನಂತ್, ಡಾ. ಸಿ. ಜಯರಾಮರಾವ್, ಪಿ. ಆರೋಗ್ಯಸ್ವಾಮಿ, ಎಂ.ಲೋಕೇಶ್ ಮತ್ತಿತರರಿದ್ದಾರೆ.

ಕೆಎಸ್ ಸಿಎ ಬೇಸಿಗೆ ಶಿಬಿರ

ವಿಕೆಟ್ ಕೀಪಿಂಗ್ ತರಬೇತಿ ನೀಡುತ್ತಿರುವ ಸಯ್ಯದ್ ಕಿರ್ಮಾನಿ, ಆರ್. ಅನಂತ್ ಹಾಗೂ ಪಿ. ಆರೋಗ್ಯಸ್ವಾಮಿ

ಕಿರ್ಮಾನಿ ಸಲಹೆ

ತುಮಕೂರಿನ ಎಸ್.ಐ.ಟಿ. ಕ್ರೀಡಾಂಗಣದಲ್ಲಿ ತುಮಕೂರು ಜಿಲ್ಲೆಯ 16 ಹಾಗೂ 19 ವರ್ಷದೊಳಗಿನ ಆಯ್ದ ಯುವ ಆಟಗಾರರಿಗೆ ಏರ್ಪಡಿಸಿದ್ದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ

English summary
Former Team Indian Wicket Keeper Syed Kirmani was at Tumkur and inaugurated KSCA cricket coaching camp. Former Ranji Player R Ananth accompanied him in training the young talents. Kirmani said play for the country not for money
ಅಭಿಪ್ರಾಯ ಬರೆಯಿರಿ