Englishहिन्दीമലയാളംதமிழ்తెలుగు

ಚಿತ್ರಗಳಲ್ಲಿ: ಭಾರತಕ್ಕೆ ಜಯ 'ಮೀಸೆವಾಲ'ಗಳ ದರ್ಬಾರ್

Posted by:
Published: Friday, June 7, 2013, 13:14 [IST]
 

ಕಾರ್ಡಿಫ್, ಜೂ.7: ಚಾಂಪಿಯನ್ಸ್ ಟ್ರೋಫಿ ಆರಂಭ ಪಂದ್ಯದಲ್ಲೇ ಧೋನಿ ಪಡೆ ಅರ್ಹ ಜಯ ದಾಖಲಿಸಿದೆ. ಟೀಂ ಇಂಡಿಯಾ ಒಡ್ಡಿದ್ದ 332 ರನ್ ಗಳ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ದಕ್ಷಿಣ ಅಫ್ರಿಕಾ ತಂಡ ಗೆಲುವಿನ ಹೊಸ್ತಿಲಲ್ಲಿ ಮುಗ್ಗರಿಸಿದೆ. ಭಾರತ ಜಯಕ್ಕೆ ಕಾರಣದವರು ಇಬ್ಬರು 'ಮೀಸೆವಾಲ' ಗಳು ಎಂದರೆ ತಪ್ಪಾಗಲಾರದು.

ಆದರೆ, ದಕ್ಷಿಣ ಆಫ್ರಿಕಾ ಪರ ಮೆಕ್ ಲೆರನ್ ಅಲ್ ರೌಂಡರ್ ಆಟವನ್ನು ಮರೆಯುವಂತಿಲ್ಲ. ಧೋನಿ ಪಡೆ 26 ರನ್ ಗಳಿಂದ ಪಂದ್ಯ ಗೆದ್ದು ಗೆಲುವಿನ ನಗೆ ಬೀರಲು ಶಿಖರ್ ಧವನ್ ಭರ್ಜರಿ ಶತಕ(114) ರನ್ ಹಾಗೂ ರವೀಂದ್ರ ಜಡೇಜ ಆಲ್ ರೌಂಡ್ ಆಟ ಕಾರಣಾವಾಯಿತು. ಪಂದ್ಯದ ವರದಿ ಇಲ್ಲಿದೆ. ಧೋನಿ ಪಡೆ ಗೆಲುವಿನ ಸಂಭ್ರಮ ಚಿತ್ರಗಳಲ್ಲಿ ನೋಡಿ

ಶಿಖರ್ ಧವನ್

ಶಿಖರ್ ಧವನ್ 80 ಎಸೆತಗಳಲ್ಲಿ ಶತಕ ದಾಖಲಿಸಿದರು. ಧವನ್ 94 ಎಸೆತದಲ್ಲಿ 114 ರನ್ (12 ಬೌಂಡರಿ, 1 ಸಿಕ್ಸರ್) ಗಳಿಸಿ ಔಟಾದರು.

ಶಿಖರ್ ಧವನ್ ಶತಕ

ಶತಕ ಸಂಭ್ರಮದಲ್ಲಿ ಎಡಗೈ ಆರಂಭಿಕ ಆಟಗಾರ ಶಿಖರ್ ಧವನ್

ಶಿಖರ್ ಧವನ್ ಹಾಗೂ ರೋಹಿತ್ ಜೊತೆಯಾಟ

ಶಿಖರ್ ಧವನ್ ಹಾಗೂ ರೋಹಿತ್ ಜೊತೆಯಾಟ ಭಾರತಕ್ಕೆ ಉತ್ತಮ ಆರಂಭ ನೀಡಿತು.

ಭಾರತದ ಜೋಡಿ

ದಕ್ಷಿಣ ಆಫ್ರಿಕಾಗೆ ತಲೆನೋವಾದ ಭಾರತದ ಜೋಡಿ

ರೋಹಿತ್ ಶರ್ಮ

ರೋಹಿತ್ ಶರ್ಮ ಅರ್ಧಶತಕ ಬಾರಿಸಿದಾಗ ಕಂಡಿದ್ದು ಹೀಗೆ

ಶಿಖರ್ ಧವನ್

ಶಿಖರ್ ಧವನ್ ಶತಕ ಬಾರಿಸಿದಾಗ ಎರಡು ಕೈ ಎತ್ತಿ ಅಭಿಮಾನಿಗಳತ್ತ ನೋಡಿದರು

ನಾಯಕ ಧೋನಿ

ಅಕರ್ಷಕ ಆಟವಾಡಿದ ನಾಯಕ ಎಂಎಸ್ ಧೋನಿ

ಮೀಸೆವಾಲ ಜಡೇಜ

ಆಲ್ ರೌಂಡರ್ ಆಟ ಪ್ರದರ್ಶಿಸಿದ ಎಡಗೈ ಆಟಗಾರ ರವೀಂದ್ರ ಜಡೇಜ

ಉತ್ತಮ ಫೀಲ್ಡಿಂಗ್

ಉತ್ತಮ ಫೀಲ್ಡಿಂಗ್ ಪ್ರದರ್ಶಿಸಿದ ಧೋನಿ ಬಾಯ್ಸ್

ರನೌಟ್

ದಕ್ಷಿಣ ಆಫ್ರಿಕಾ ತಂಡ ಅನಗತ್ಯ ರನೌಟ್ ಗಳಿಂದ ತತ್ತರಿಸಿತು

ಮೆಕ್ ಲೆರನ್

ಮೆಕ್ ಲೆರನ್ ಉತ್ತಮ ಆಟ ಪ್ರದರ್ಶನ

ಅಪೀಲ್ ಆಪೀಲ್

ರಾಬಿನ್ ಪೀಟರ್ಸನ್ ಔಟ್ ಗಾಗಿ ಧೋನಿ ಮನವಿ

ಜಡೇಜ ಹಾಗೂ ವಿರಾಟ್ ಕೊಹ್ಲಿ

ವಿಕೆಟ್ ಬಿದ್ದಾಗ ಜಡೇಜ ಹಾಗೂ ವಿರಾಟ್ ಕೊಹ್ಲಿ ಸಂಭ್ರಮ

ಖುಷಿಯಲ್ಲಿ ಧೋನಿ ಬಾಯ್ಸ್

ಇಶಾಂತ್ ಶರ್ಮಗೆ ಹೈ ಫೈ ನೀಡಲು ದಿನೇಶ್ ಕಾರ್ತಿಕ್

ಧೋನಿ ಪಡೆ ಗೆಲುವಿನ ಸಂಭ್ರಮ

ಗೆಲುವಿನ ನಂತರ ಪೆವಿಲಿಯನ್ ಕಡೆ ಹೊರಟ ಟೀಂ ಇಂಡಿಯಾ

ಚೆನ್ನಾಗಿ ಆಡಿದೆ ಬಿಡಪ್ಪ

ಇಶಾಂತ್ ಶರ್ಮ ಹಾಗೂ ಮೆಕ್ ಲೆರನ್

English summary
In Pictures: Centurion Shikhar Dhawan has said he is happy that his 114 helped India win against South Africa in the Champions Trophy 2013 opener on Thursday (June 6).
ಅಭಿಪ್ರಾಯ ಬರೆಯಿರಿ