Englishहिन्दीമലയാളംதமிழ்తెలుగు

ಶಾರುಖ್ ನಂತರ ಶೆಟ್ಟಿಯನ್ನು ಹೊರದಬ್ಬಿದ ಎಂಸಿಎ

Posted by:
Published: Wednesday, June 5, 2013, 13:32 [IST]
 

ಶಾರುಖ್ ನಂತರ ಶೆಟ್ಟಿಯನ್ನು ಹೊರದಬ್ಬಿದ ಎಂಸಿಎ
 

ಮುಂಬೈ, ಜೂ.5: ಬಾಲಿವುಡ್ ನಟ, ಕೋಲ್ಕತ್ತಾ ನೈಟ್ ರೈಡರ್ಸ್ ಮಾಲೀಕ ಶಾರುಖ್ ಖಾನ್ ಅವರಿಗೆ ನಿಷೇಧ ಹೇರಿದ ನಂತರ ಬಿಸಿಸಿಐ ಅಧಿಕಾರಿ ರತ್ನಾಕರ್ ಶೆಟ್ಟಿ ಅವರನ್ನು ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ಸ್ ಹೊರ ದಬ್ಬಿದೆ.

ಬಿಸಿಸಿಐ ಮುಖ್ಯ ಆಡಳಿತಾಧಿಕಾರಿ ಪ್ರೊ. ರತ್ನಾಕರ್ ಶೆಟ್ಟಿಗೆ ಮುಂಬೈ ಕ್ರಿಕೆಟ್ ಅಸೋಸಿಯೇಶನ್(ಎಂಸಿಎ) ಮುಂದಿನ 5 ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸುವುದು ಸೇರಿದಂತೆ ಹಾಗೂ ಸೋಸಿಯೇಶನ್ ನ ಎಲ್ಲಾ ಚಟುವಟಿಕೆಗಳಿಂದ ನಿಷೇಧ ಹೇರಿದೆ.

ಎಂಸಿಎ ಕೆಲವು ಸದಸ್ಯರು ಡಿ.28, 2012ರಲ್ಲಿ ಅಹ್ಮದಾಬಾದ್ ನಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಿನ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದ ಟಿಕೆಟ್ ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ್ದರು ಎಂದು ರತ್ನಾಕರ್ ಶೆಟ್ಟಿ ಆರೋಪ ಮಾಡಿದ್ದರು.

ಶೆಟ್ಟಿ ಆರೋಪದಿಂದ ಕೆಂಡಾಮಂಡಲವಾಗಿರುವ ಎಂಸಿಎ ಇಂದು ಕಠಿಣ ಹೆಜ್ಜೆ ಇರಿಸಿದೆ. ಎಂಸಿಎಯಲ್ಲಿ ಈ ಹಿಂದೆ ಜತೆ ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಶೆಟ್ಟಿ 2013 ಮೇ 22 ರಂದು ನಡೆದಿದ್ದ ಎಂಸಿಎ ವಾರ್ಷಿಕ ಮಹಾಸಭೆಯಲ್ಲಿ ಎಂಸಿಎ ಅಧಿಕಾರಿಗಳು ಬ್ಲಾಕ್ ಮಾರ್ಕೆಟಿನಲ್ಲಿ ಟ್ವೆಂಟಿ-20 ಪಂದ್ಯಗಳ ಟಿಕೆಟ್ ಗಳನ್ನು ಮಾರಾಟ ಮಾಡಿದ್ದರು ಎಂದು ಗಂಭೀರ ಆರೋಪವನ್ನು ಮಾಡಿದ್ದರು.‘ನಾನು ಎಂಸಿಎ ನಿರ್ಧಾರದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸುವೆ''ಎಂದು ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

English summary
The Mumbai Cricket Association Tuesday slapped a five-year ban on its member Ratnakar Shetty for alleging that some of its office-bearers were involved in black-marketing of India-Pakistan T20 match tickets at Ahmedabad last year.
ಅಭಿಪ್ರಾಯ ಬರೆಯಿರಿ