Englishहिन्दीമലയാളംதமிழ்తెలుగు

ಐಪಿಎಲ್ 2013: ದಟ್ಸ್ ಕ್ರಿಕೆಟ್ ಆಯ್ದ ಶ್ರೇಷ್ಠ ‍XI

Posted by:
Published: Tuesday, May 28, 2013, 15:57 [IST]
 

ಬೆಂಗಳೂರು, ಮೇ.28: ಈ ಬಾರಿಯ ಐಪಿಎಲ್ ಬರೀ ಕಳ್ಳಾಟದಿಂದ ನೆನಪಲ್ಲೇ ಉಳಿಯುತ್ತದೆ ಎನ್ನುವವರು ಹಲವರಿದ್ದಾರೆ. ಆದರೆ, ಅಪ್ಪಟ ಕ್ರಿಕೆಟ್ ಅಭಿಮಾನಿಗಳು ಐಪಿಎಲ್ ನ ಅಸಲಿ ಮಜಾವನ್ನು ಅನುಭವಿಸಿದ್ದಾರೆ. ಹಲವಾರು ಕ್ರಿಕೆಟರ್ ಗಳ ವೈಯಕ್ತಿಕ ದಾಖಲೆಗಳು ಮನಸಿನಲ್ಲಿ ಉಳಿಯುತ್ತದೆ.

ಭಾನುವಾರ ರಾತ್ರಿ ಕೋಲ್ಕತ್ತಾದ ಈಡೆನ್ ಗಾರ್ಡನ್ಸ್ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ ಮುಂಬೈ ಇಂಡಿಯನ್ಸ್ ಹೊಸ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಐಪಿಎಲ್ ಗೆ ವಿದಾಯ ಹೇಳಿದ್ದು, ನೆನಪಲ್ಲಿ ಉಳಿಯಬಲ್ಲುದು.

ಪ್ರತಿಭೆಗಳಿಗೆ ಸೂಕ್ತವೇದಿಕೆ ಒದಗಿಸಿರುವ ಐಪಿಎಲ್ ಟೂರ್ನಿಯಿಂದ ಹೊಸ ಪ್ರತಿಭೆಗಳು ಹೊರ ಹೊಮ್ಮಿದೆ. ಈಗ ಶ್ರೇಷ್ಠ ತಂಡವನ್ನು ಆಯ್ಕೆ ಮಾಡುವ ಸರದಿ. ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್, ರಾಹುಲ್ ದ್ರಾವಿಡ್ ಪೈಕಿ ರಾಹುಲ್ ದ್ರಾವಿಡ್ ಅವರು ಉತ್ತಮ ಸಾಧನೆ ತೋರಿದರು ಅಂತಿಮ XI ಸೇರುವಲ್ಲಿ ವಿಫಲರಾಗಿದ್ದಾರೆ. ಅದೇ ರೀತಿ ಸ್ಟುವರ್ಟ್ ಬಿನ್ನಿ, ಶೇನ್ ವಾಟ್ಸನ್, ಮಿಲ್ಲರ್ ಸೇರಿದಂತೆ ಹಲವು ಆಟಗಾರರು ಜಸ್ಟ್ ಮಿಸ್ ಆಗಿದ್ದಾರೆ.

ಆರ್ ಸಿಬಿ ತಂಡ ಕ್ರಿಸ್ ಗೇಲ್ ಅವರ 175 ನಾಟೌಟ್ ಆಟ, ರಾಜಸ್ಥಾನ್ ರಾಯಲ್ಸ್ ನ ಜೇಮ್ಸ್ ಫಾಲ್ಕ್ ನರ್ ಉತ್ತಮ ಬೌಲಿಂಗ್ 5 ವಿಕೆಟ್ ಗಳಿಸಿದ್ದು ಐಪಿಎಲ್ ನ ದಾಖಲೆ ಪುಟದಲ್ಲಿ ಬಹುಕಾಲ ಉಳಿಯುವ ಸಾಧ್ಯತೆಯಿದೆ, ಇನ್ನೇಕೆ ತಡ ದಟ್ಸ್ ಕ್ರಿಕೆಟ್ ಆಯ್ಕೆ ಮಾಡಿರುವ ಅಂತಿಮ XI ಇಂತಿದೆ:

ಕ್ರಿಸ್ ಗೇಲ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕ್ರಿಸ್ ಗೇಲ್ ಅವರು ಆರಂಭಿಕ ಆಟಗಾರ. 16 ಇನ್ನಿಂಗ್ಸ್ ನಲ್ಲಿ 708 ರನ್ ಗಳಿಕೆ

ಮೈಕಲ್ ಹಸ್ಸಿ

ಚೆನ್ನೈ ಸೂಪರ್ ಕಿಂಗ್ಸ್ ನ ಆರೇಂಜ್ ಕ್ಯಾಪ್ ವಿಜೇತ ಮೈಕಲ್ ಹಸ್ಸಿ. 17 ಇನ್ನಿಂಗ್ಸ್ ನಲ್ಲಿ 733 ರನ್ ಗಳಿಕೆ

ವಿರಾಟ್ ಕೊಹ್ಲಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ಮೂರನೇ ಕ್ರಮಾಂಕಕ್ಕೆ ಹೇಳಿ ಮಾಡಿಸಿದ ಆಟಗಾರ. 16 ಇನ್ನಿಂಗ್ಸ್ ನಲ್ಲಿ 634 ರನ್ ಗಳಿಕೆ

ಸುರೇಶ್ ರೈನಾ

ಚೆನ್ನೈ ಸೂಪರ್ ಕಿಂಗ್ಸ್ ಪಾಲಿನ ಆಪದ್ಭಾಂದವ ಎಡಗೈ ಬ್ಯಾಟ್ಸ್ ಮನ್ ಸುರೇಶ್ ರೈನಾ ಅವರು 17 ಇನ್ನಿಂಗ್ಸ್ ನಲ್ಲಿ 548ರನ್ ಗಳಿಕೆ

ರೋಹಿತ್ ಶರ್ಮ

ಮುಂಬೈ ಇಂಡಿಯನ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಕಪ್ ಗೆಲ್ಲಿಸಿಕೊಟ್ಟ ರೋಹಿತ್ ಶರ್ಮ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಬಲ್ಲರು. 19 ಇನ್ನಿಂಗ್ಸ್ ನಲ್ಲಿ 538 ರನ್ ಗಳಿಕೆ

ಎಂಎಸ್ ಧೋನಿ

ರನ್ ಚೇಸ್, ಮ್ಯಾಚ್ ಗೆ ಫಿನಿಶಿಂಗ್ ಟಚ್ ನೀಡುವಲ್ಲಿ ಎಂಎಸ್ ಧೋನಿ ಉತ್ತಮ ಆಟಗಾರ. ನಾಯಕನಾಗಿ ಕೂಡಾ ಯಶಸ್ವಿ. 16 ಇನ್ನಿಂಗ್ಸ್ ನಲ್ಲಿ 461 ರನ್ ಗಳಿಕೆ

ಡ್ವಾಯ್ನೆ ಬ್ರಾವೋ

ಚೆನ್ನೈ ತಂಡದ ಬೌಲಿಂಗ್ ಶಕ್ತಿಯಾಗಿ ಸಮಯೋಚಿತವಾಗಿ ಬ್ಯಾಟಿಂಗ್ ಕೂಡ ಪ್ರದರ್ಶಿಸಿ ಪರ್ಪಲ್ ಕ್ಯಾಪ್ ಕೂಡಾ ಗೆದ್ದಿರುವ ಡ್ವಾಯ್ನೆ ಬ್ರಾವೋ 18 ಇನ್ನಿಂಗ್ಸ್ ನಲ್ಲಿ 32 ವಿಕೆಟ್ ಕಿತ್ತಿದ್ದಾರೆ.

ಹರ್ಭಜನ್ ಸಿಂಗ್

ಮುಂಬೈ ತಂಡದ ನಾಯಕತ್ವ ತೊರೆದು ಉತ್ತಮ ಬೌಲಿಂಗ್ ಪ್ರದರ್ಶಿಸಿದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ 19 ಇನ್ನಿಂಗ್ಸ್ ನಲ್ಲಿ 24 ವಿಕೆಟ್ ಪಡೆದರು.

ಜೇಮ್ಸ್ ಫಾಲ್ಕ್ ನರ್

ರಾಜಸ್ಥಾನ್ ರಾಯಲ್ಸ್ ತಂಡದ ಬೌಲಿಂಗ್ ದಾಳಿ ಮುನ್ನಡೆಸಿದ ಜೇಮ್ಸ್ 16 ಇನ್ನಿಂಗ್ಸ್ ನಲ್ಲಿ 28 ವಿಕೆಟ್ ಕಬಳಿಸಿದ್ದಾರೆ

ಅಮಿತ್ ಮಿಶ್ರಾ

ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಸನ್ ರೈಸರ್ಸ್ ಹೈದರಾಬಾದ್ ಪರ ಆಡಿ 17 ಇನ್ನಿಂಗ್ಸ್ ನಲ್ಲಿ 21 ವಿಕೆಟ್ ಗಳಿಸಿದ್ದಾರೆ.

ಮೋಹಿತ್ ಶರ್ಮ

ಈ ಬಾರಿಯ ಶೋಧವಾಗಿ ಹೊರ ಹೊಮ್ಮಿರುವ ಚೆನ್ನೈ ತಂಡದ ವೇಗಿ ಮೋಹಿತ್ ಶರ್ಮ, 15 ಇನ್ನಿಂಗ್ಸ್ ನಲ್ಲಿ 20 ವಿಕೆಟ್ ಪಡೆದಿದ್ದಾರೆ.

English summary
There were several outstanding individual performances in IPL 2013 that concluded on Sunday night (May 26) at the Eden Gardens. Mumbai Indians won their maiden title by defeating two-time champions Chennai Super Kings.
ಅಭಿಪ್ರಾಯ ಬರೆಯಿರಿ