Englishहिन्दीമലയാളംதமிழ்తెలుగు

ಐಪಿಎಲ್ : ಆರೇಂಜ್ ಕ್ಯಾಪ್ ಇದ್ದವನ ಟೀಂಗೆ ಕಪ್ ಇಲ್ಲ

Posted by:
Published: Monday, May 27, 2013, 15:00 [IST]
 

ಬೆಂಗಳೂರು, ಮೇ.27 : ಕಿತ್ತಳೆ ಟೋಪಿಯಲ್ಲಿ ಯಾವ ಭೂತ ಅಡಗಿದಿಯೋ ಗೊತ್ತಿಲ್ಲ. ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಆರೇಂಜ್ ಕ್ಯಾಪ್ ಧರಿಸಿದವರು ಐಪಿಎಲ್ ಕಪ್ ಎತ್ತಲು ಸಾಧ್ಯವಾಗುವುದಿಲ್ಲ ಎಂಬ ಅಘೋಷಿತ ಶಾಪ ವಾಕ್ಯ ಮತ್ತೊಮ್ಮೆ ನಿಜವಾಗುತ್ತಿದೆ. ಐಪಿಎಲ್ ಚಾಂಪಿಯನ್ ತಂಡದಲ್ಲಿ ಕಿತ್ತಳೆ ಟೋಪಿ ಧರಿಸಿದ ಆಟಗಾರ ಈ ವರೆವಿಗೂ ಕಂಡು ಬಂದಿಲ್ಲ.

ಐಪಿಎಲ್ ಮೊದಲ ಆವೃತ್ತಿಯಿಂದ ಐಪಿಎಲ್ 6ರ ತನಕದ ಅಂಕಿ ಅಂಶ ಅವಲೋಕಿಸಿದರೆ, ಕಿತ್ತಳೆ ಟೋಪಿ ಇರುವ ಆಟಗಾರರನ್ನು ಹೊಂದಿರುವ ತಂಡ ಅದೃಷ್ಟಹೀನವಾಗಿರುವುದು ಸಾಬೀತಾಗಿದೆ. ಅದರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ವಿಂಡೀಸ್ ಆಟಗಾರ ಕ್ರಿಸ್ ಗೇಲ್ ಅವರಂತೂ ಆರೇಂಜ್ ಕ್ಯಾಪ್ ಶಾಪಕ್ಕೆ ಹೆಚ್ಚು ಬಾರಿ ಬಲಿಯಾಗಿದ್ದಾರೆ.

ಐಪಿಎಲ್ 6ರ ಆವೃತ್ತಿಯಲ್ಲಾದರೂ ಕಿತ್ತಳೆ ಟೋಪಿ ಶಾಪ ವಿಮೋಚನೆಯಾಗುವ ನಿರೀಕ್ಷೆ ಇತ್ತು. ಆದರೆ, ಆರೇಂಜ್ ಕ್ಯಾಪ್ ಧರಿಸಿದ ಹಸ್ಸಿ ಅವರಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತೊಮ್ಮೆ ಫೈನಲ್ ತನಕ ಬಂದು ಸೋತಿದೆ. ಮುಂಬೈ ಇಂಡಿಯನ್ಸ್ ತಂಡ ಪ್ರಥಮ ಬಾರಿಗೆ ಐಪಿಎಲ್ ಕಪ್ ಎತ್ತಿ ವಿಜೃಂಭಿಸಿದೆ. ಈ ಬಾರಿ ಆರೇಂಜ್ ಹಾಗೂ ಪರ್ಪಲ್ ಕ್ಯಾಪ್ ಎರಡೂ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸಿಕ್ಕಿದ್ದು ವಿಶೇಷ

ಆರೇಂಜ್ ಕ್ಯಾಪ್ ಧರಿಸಿ ಕಪ್ ಎತ್ತದ ನತದೃಷ್ಟರು ಯಾರು.. ಮುಂದಿನ ಚಿತ್ರ ಸರಣಿಯಲ್ಲಿ ನೋಡಿ...

ಆರೇಂಜ್ ಕ್ಯಾಪ್ ನಿಗೂಢತೆ ಮುಂದುವರಿಕೆ

2008: ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಎಡಗೈ ಬ್ಯಾಟ್ಸ್ ಮನ್ ಶಾನ್ ಮಾರ್ಷ್ ಕಿತ್ತಳೆ ಟ್ರೋಪಿ ಧರಿಸಿದ್ದರು. ಕಿಂಗ್ಸ್ XI ಪಂಜಾಬ್ ತಂಡದ ಪರ ಆಡಿದ ಶಾನ್ 616 ರನ್ ಗಳಿಸಿದ್ದರು.

ಆದರೆ, ಪಂಜಾಬ್ ಫೈನಲ್ ಕೂಡಾ ಪ್ರವೇಶಿಸಿರಲಿಲ್ಲ. ಬದಲಿಗೆ ರಾಜಸ್ಥಾನ ರಾಯಲ್ಸ್ ತಂಡ ಕಪ್ ಗೆದ್ದುಗೊಂಡಿತು. ಖಾಲಿ ಕೈಯಿಂದ ಆರೇಂಜ್ ಟೋಪಿಯೊಂದಿಗೆ ಶಾನ್ ಸ್ವದೇಶಕ್ಕೆ ಮರಳಿದ್ದರು.

 

ಆರೇಂಜ್ ಕ್ಯಾಪ್ ನಿಗೂಢತೆ ಮುಂದುವರಿಕೆ

2009: ಮತ್ತೊಮ್ಮೆ ಆಸ್ಟ್ರೇಲಿಯಾದ ಆಟಗಾರನ ತಲೆ ಮೇಲೆ ಕಿತ್ತಳೆ ಟೋಪಿ ಹತ್ತಿ ಕುಳಿತು ಕೊಂಡಿತ್ತು.

ಐಪಿಎಲ್ ನ ಲಕ್ಕಿ ಟೀಮ್ ಚೆನ್ನೈ ಸೂಪರ್ ಕಿಂಗ್ಸ್ ಕೂಡಾ ಅದೃಷ್ಟಹೀನವಾಗಿ ಬಿಟ್ಟಿತು. ಚೆನ್ನೈ ಪರ ಆರಂಭಿಕ ಎಡಗೈ ಬ್ಯಾಟ್ಸ್ ಮನ್ ಮ್ಯಾಥ್ಯೂ ಹೇಡನ್ ಅವರು 572 ರನ್ ಗಳಿಸಿದ್ದರು.

ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಈ ಟೂರ್ನಿಯಲ್ಲಿ ಸೆಮಿಸ್ ನಲ್ಲಿ ಚೆನ್ನೈ ಹೊರಬಿದ್ದಿತ್ತು, ಡೆಕ್ಕನ್ ಚಾರ್ಜರ್ಸ್ ತಂಡ ಕಪ್ ಗೆದ್ದುಕೊಂಡಿತ್ತು.

 

ಆರೇಂಜ್ ಕ್ಯಾಪ್ ನಿಗೂಢತೆ ಮುಂದುವರಿಕೆ

2010: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅದ್ಭುತ ಆಟ ಪ್ರದರ್ಶಿಸಿ ಮುಂಬೈ ಇಂಡಿಯನ್ಸ್ ಪರ 618 ರನ್ ಗಳಿಸಿದ್ದರು.

ಮೊಟ್ಟ ಮೊದಲ ಬಾರಿಗೆ ಬಲಗೈ ಬ್ಯಾಟ್ಸ್ ಮನ್ 600 ಗಡಿ ದಾಟಿ ಕಿತ್ತಳೆ ಟೋಪಿ ಧರಿಸಿದರು. ಆದರೆ, ಮುಂಬೈ ತಂಡ ಫೈನಲ್ ತಲುಪುವಲ್ಲಿ ವಿಫಲವಾಯಿತು.

ಆರೇಂಜ್ ಕ್ಯಾಪ್ ನಿಗೂಢತೆ ಮುಂದುವರಿಕೆ

2011: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಪದ್ಭಾಂದವ ವಿಂಡೀಸ್ ನ ಎಡಗೈ ಆಟಗಾರ ಕ್ರಿಸ್ ಗೇಲ್ 608 ರನ್ ಚೆಚ್ಚಿದರೂ ಫೈನಲ್ ನಲ್ಲಿ ಆರ್ ಸಿಬಿ ಸೋಲು ಕಂಡಿತ್ತು. ಚೆನ್ನೈ ಕಪ್ ಎತ್ತಿದರೆ ಗೇಲ್ ಆರೇಂಜ್ ಕಪ್ ಧರಿಸಿದ್ದರು.

ಆರೇಂಜ್ ಕ್ಯಾಪ್ ನಿಗೂಢತೆ ಮುಂದುವರಿಕೆ

2012: ಐಪಿಎಲ್ 5 ರಲ್ಲಿ ಕ್ರಿಸ್ ಗೇಲ್ ಮತ್ತೊಮ್ಮೆ ಭರ್ಜರಿ ಆಟ ಪ್ರದರ್ಶಿಸಿ ಮೊಟ್ಟ ಮೊದಲ ಬಾರಿಗೆ 700 ರನ್ ಗಡಿ ದಾಡಿದರು. 733 ರನ್ ಬಾರಿಸಿದ ಗೇಲ್ ಈಗ ವೆಸ್ಟ್ ಇಂಡೀಸ್ ಗೆ ತೆರಳಿದ್ದಾರೆ. ಪ್ಲೇ ಆಫ್ ಗೆ ಆಡುವ ಅರ್ಹತೆಯನ್ನು ಆರ್ ಸಿಬಿ ಕಳೆದುಕೊಂಡಿತು.

ಚೆನ್ನೈ ಮತ್ತೊಮ್ಮೆ ಕಪ್ ಗಾಗಿ ಕೆಕೆಅರ್ ಜೊತೆ ಸೆಣೆಸಿತ್ತು. ಫೈನಲ್ ತಲುಪಿರುವ ಕೋಲ್ಕತ್ತಾ ತಂಡದ ನಾಯಕ ಗೌತಮ್ ಗಂಭೀರ್ ಟೂರ್ನಿಯಲ್ಲಿ 588 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದರು. ಆದರೆ, ಐಪಿಎಲ್ ಕಪ್ ಎತ್ತುವಲ್ಲಿ ಗಂಭೀರ್ ಯಶಸ್ವಿಯಾದರು.

 

ಆರೇಂಜ್ ಕ್ಯಾಪ್ ನಿಗೂಢತೆ ಮುಂದುವರಿಕೆ

2013: ಐಪಿಎಲ್ 6ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನ ಆರಂಭಿಕ ಆಟಗಾರ ಮೈಕಲ್ ಹಸ್ಸಿ ಅವರು 733 ರನ್ ಚೆಚ್ಚಿ ಭರ್ಜರಿ ಸಾಧನೆ ಮಾಡಿದ್ದಾರೆ.ಇದು ಐಪಿಎಲ್ ಟೂರ್ನಿಯೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ರನ್ ಗೆ ಸಮನಾಗಿದೆ.

ಈ ಬಾರಿ 17 ಪಂದ್ಯಗಳಲ್ಲಿ 3 ಬಾರಿ ನಾಟೌಟ್ ಆಗಿ ಉಳಿದು 129.50 ಸ್ಟೈಕ್ ರೇಟ್ ನೊಂದಿಗೆ 733 ರನ್ ಗಳಿಸಿದರು., ವೈಯಕ್ತಿಕ 95 ಅತಿ ಹೆಚ್ಚು ರನ್ ಆಗಿದೆ. ಆರ್ ಸಿಬಿಯ ಗೇಲ್ 708 ರನ್ ಗಳಿಸಿ ಸಮೀಪದ ಸ್ಪರ್ಧಿಯಾಗಿದ್ದರು.

English summary
The curse of the Orange Cap Continues: What is it with Orange Caps in the Indian Premier League and the holder of that cap not being able to hold the IPL trophy? History shows leading run scorer always fails to be part of the champion side. In Ipl 6 Micheal Hussey wears the cap loses the cup
ಅಭಿಪ್ರಾಯ ಬರೆಯಿರಿ