Englishहिन्दीമലയാളംதமிழ்తెలుగు

ಐಪಿಎಲ್ ಫೈನಲ್ : ಚೆನ್ನೈ- ಮುಂಬೈ ಕದನ 10 ಸ್ವಾರಸ್ಯ

Posted by:
Updated: Monday, May 27, 2013, 10:13 [IST]
 

ಕೋಲ್ಕತ್ತಾ, ಮೇ. 26: ಸ್ಪಾಟ್ ಫಿಕ್ಸಿಂಗ್ ಹಗರಣದ ಕಾರ್ಮೋಡದ ಬೆನ್ನಲ್ಲೇ ಆರನೆ ಆವೃತ್ತಿ ಐಪಿಎಲ್ ನ ಅಂತಿಮ ಹಣಾಹಣಿಗೆ ಐತಿಹಾಸಿಕ ಈಡನ್ ಗಾರ್ಡನ್ಸ್ ಸಜ್ಜಾಗಿದೆ. ಮೂರನೆ ಬಾರಿಗೆ ಚಾಂಪಿಯನ್ ಉತ್ಸಾಹದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಣಕ್ಕಿಳಿಯುತ್ತಿದ್ದರೆ, ಮುಂಬೈ ಇಂಡಿಯನ್ಸ್ ಚೊಚ್ಚಲ ಕಪ್ ನಿರೀಕ್ಷೆಯಲ್ಲಿದೆ.

ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅಳಿಯ, ಚೆನ್ನೈ ತಂಡಕ್ಕೆ ಎಲ್ಲವೂ ಆಗಿದ್ದ ಗುರುನಾಥ್ ಮೇಯಪ್ಪನ್ ಬೆಟ್ಟಿಂಗ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವುದು ಸಿಎಸ್ ಕೆ ತಂಡವನ್ನು ಮಂಕಾಗಿಸಿದೆ. ಆದರೆ, 50 ದಿನಗಳ ಐಪಿಎಲ್ ಟೂರ್ನಿಯಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಚೆನ್ನೈ ತಂಡ ಉತ್ತಮ ಪ್ರದರ್ಶನ ನೀಡಿದೆ.

ಮುಂಬೈ ತಂಡಕ್ಕೆ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಹಾಗೂ ರಿಕಿ ಪಾಂಟಿಂಗ್ ಜೊತೆಗೆ ಅನಿಲ್ ಕುಂಬ್ಳೆ ಮಾರ್ಗದರ್ಶನವಿದೆ. ತಂಡದ ಆಟಗಾರರಲ್ಲಿ ಹೊಸ ಉತ್ಸಾಹ ಮೂಡಿದೆ. ಈ ಬಾರಿ ಯಾರು ಕಪ್ ಎತ್ತಲಿದ್ದಾರೆ ಎಂಬುದು ಭಾನುವಾರ(ಮೇ.26) 8 ಗಂಟೆ ನಂತರ ತಿಳಿಯಲಿದೆ.

ಸದ್ಯಕ್ಕೆ ಐಪಿಎಲ್ 2013ರ ಫೈನಲ್ ಪಂದ್ಯ ವೀಕ್ಷಣೆಗೂ ಮುನ್ನ ಈ 10 ಕುತೂಹಲ ಅಂಶಗಳು, ಮುಖ್ಯ ಆಟಗಾರರನ್ನು ಚಿತ್ರ ಸರಣಿಯಲ್ಲಿ ತಪ್ಪದೇ ನೋಡಿ

ಐಪಿಎಲ್ 2013 ಕದನ ಕುತೂಹಲ

ಐಪಿಎಲ್ ಶುರುವಾಗಿ 6 ವರ್ಷಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 5 ಬಾರಿ ಫೈನಲ್ ಪ್ರವೇಶಿಸಿದೆ. ಬೇರೆ ಯಾವ ಐಪಿಎಲ್ ತಂಡವು ಈ ಸಾಧನೆ ಮಾಡಿಲ್ಲ.

ಐಪಿಎಲ್ 2013 ಕದನ ಕುತೂಹಲ

ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮೊದಲ ಬಾರಿಗೆ ಐಪಿಎಲ್ ಫೈನಲ್ ಪಂದ್ಯ ನಡೆಯುತ್ತಿರುವುದು ವಿಶೇಷ.

ಮಳೆಯ ಭೀತಿಯ ನಡುವೆ ಪಿಚ್ ಒದ್ದೆಯಾಗಿದ್ದಲ್ಲಿ ಯಾರಿಗೆ ನೆರವಾಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಭಜ್ಜಿ ಅಥವಾ ಅಶ್ವಿನ್, ಜಡೇಜ ಪಂದ್ಯದ ರುವಾರಿಯಾಗಬಲ್ಲರೆ?

ಐಪಿಎಲ್ 2013 ಕದನ ಕುತೂಹಲ

ಚೆನ್ನೈ ತಂಡದ ಮೈಕಲ್ ಹಸ್ಸಿ ಅವರು ಆರೇಂಜ್ ಕ್ಯಾಪ್ ಶಾಪ ನಿವಾರಣೆ ಮಾಡುವ ಹೊಸ್ತಿಲಲ್ಲಿದ್ದಾರೆ. 732 ರನ್ ಗಳಿಸಿರುವ ಹಸ್ಸಿ ಈ ಬಾರಿಯ ಕಿತ್ತಳೆ ಟೋಪಿ ಧರಿಸುವ ಎಲ್ಲಾ ಸಾಧ್ಯತೆಯಿದೆ.

ಆರ್ ಸಿಬಿ ತಂಡದ ಕ್ರಿಸ್ ಗೇಲ್ ಅವರು 733 ರನ್ ಗಳಿಸಿದ್ದು ಸದ್ಯಕ್ಕೆ ಲೀಡ್ ನಲ್ಲಿದ್ದಾರೆ. ಹಸ್ಸಿ 2 ರನ್ ಗಳಿಸಿದರೆ ಕ್ಯಾಪ್ ಮುಡಿಗೇರಲಿದೆ.

 

ಐಪಿಎಲ್ 2013 ಕದನ ಕುತೂಹಲ

ಮುಂಬೈ ತಂಡಕ್ಕೆ ಸಚಿನ್, ರಿಕಿ, ಕುಂಬ್ಳೆ, ಭಜ್ಜಿ ಅನುಭವದ ಜೊತೆಗೆ ಜಾಂಟಿ ರೋಡ್ಸ್ ಟಿಪ್ಸ್ ಕೂಡಾ ಸಿಕ್ಕಿದೆ. ಯುವ ಆಟಗಾರರ ಜೊತೆಗೆ ವಿಂಡೀಸ್ ನ ಸ್ಮಿತ್ ಹಾಗೂ ಪೊಲ್ಲಾರ್ಡ್ ಪಂದ್ಯದಲ್ಲಿ ನಿರ್ಣಾಯಕ ಪಾತ್ರವಹಿಸಲಿದ್ದಾರೆ.

ಐಪಿಎಲ್ 2013 ಕದನ ಕುತೂಹಲ

2008ರಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ 2012ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಸೋಲು ಅನುಭವಿಸಿತ್ತು. 2010, 2011ರಲ್ಲಿ ಚೆನ್ನೈ ಕಪ್ ಎತ್ತಿದ್ದರು.

ಐಪಿಎಲ್ 2013 ಕದನ ಕುತೂಹಲ

ಮುಂಬೈ ತಂಡ ಎರಡನೇ ಬಾರಿಗೆ ಫೈನಲ್ ಪ್ರವೇಶಿಸುತ್ತಿದೆ. ಈ ಬಾರಿಯ ಫೈನಲ್ ಪಂದ್ಯ 2010ರ ಪುನಾರಾವರ್ತನೆಯಾಗಿದೆ. ಅಂದು ಮುಂಬೈ ತಂಡವನ್ನು ಚೆನ್ನೈ 22 ರನ್ ಗಳಿಂದ ಸೋಲಿಸಿ ಕಪ್ ಎತ್ತಿತ್ತು.

ಐಪಿಎಲ್ 2013 ಕದನ ಕುತೂಹಲ

ಕಳೆದ ಎರಡು ಪಂದ್ಯಗಳಿಂದ ದೂರವುಳಿದಿದ್ದ ಗಾಯಾಳು ಸಚಿನ್ ತೆಂಡೂಲ್ಕರ್ ಅವರು ಅಂತಿಮ ಹಣಾಹಣಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಬಹುಶಃ ಇದು ಅವರ ಕೊನೆಯ ಐಪಿಎಲ್ ಎಂದೇ ಹೇಳಲಾಗುತ್ತಿದೆ. ಅಭಿಮಾನಿಗಳು ಕಾತುರದಿಂದ ಮಾಸ್ಟರ್ ಬ್ಲಾಸ್ಟರ್ ಗಾಗಿ ಕಾದಿದ್ದಾರೆ.

ಐಪಿಎಲ್ 2013 ಕದನ ಕುತೂಹಲ

ಪರ್ಪಲ್ ಕ್ಯಾಪ್ ಗೆಲ್ಲಲು ಚೆನ್ನೈನ ಡ್ವಾಯ್ನೆ ಬ್ರಾವೋ ಗೆ ಕೇವಲ 1 ವಿಕೆಟ್ ಅವಶ್ಯವಿದೆ. 28 ವಿಕೆಟ್ ಕಿತ್ತಿರುವ ಬ್ರಾವೋ ಅವರು ಜೇಮ್ಸ್ ಫಾಲ್ಕನರ್ ಜೊತೆ ಟೈ ಆಗಿದ್ದಾರೆ. ಫಾಲ್ಕನರ್ ಉತ್ತಮ ಎಕಾನಮಿ ಹೊಂದಿದ್ದಾರೆ.

ಐಪಿಎಲ್ 2013 ಕದನ ಕುತೂಹಲ

ಪರಸ್ಪರ ಮುಖಾಮುಖಿಯಲ್ಲಿ ಮುಂಬೈ 2 ಹಾಗೂ ಚೆನ್ನೈ 1 ಪಂದ್ಯ ಗೆದ್ದಿದೆ.
ಮುಂಬೈ ಪರ, ಸಚಿನ್ ತೆಂಡೂಲ್ಕರ್, ದಿನೇಶ್ ಕಾರ್ತಿಕ್, ಕೀರನ್ ಪೊಲ್ಲಾರ್ಡ್, ಸ್ಮಿತ್, ಮಿಚೆಲ್ ಜಾನ್ಸನ್, ಹರ್ಭಜನ್ ಸಿಂಗ್ ಆಟ ಮುಖ್ಯವಾಗಲಿದೆ.

ಐಪಿಎಲ್ 2013 ಕದನ ಕುತೂಹಲ

ಚೆನ್ನೈ ಪರ ಸುರೇಶ್ ರೈನಾ, ಮೈಕಲ್ ಹಸ್ಸಿ, ಎಂಎಸ್ ಧೋನಿ, ರವೀಂದ್ರ ಜಡೇಜ, ಆರ್ ಅಶ್ವಿನ್, ಬ್ರಾವೋ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

Story first published:  Sunday, May 26, 2013, 14:44 [IST]
English summary
After 75 matches spread across various venues and contested for more than 50 days, here we are for the final of IPL 2013. Two-time champions Chennai Super Kings will lock horns with Mumbai Indians at the Eden Gardens tonight at 8PM IST.
ಅಭಿಪ್ರಾಯ ಬರೆಯಿರಿ