Englishहिन्दीമലയാളംதமிழ்తెలుగు

ಅಸಾದ್ ರೌಫ್ ಸುತ್ತ ಮತ್ತೆ ಅನುಮಾನದ ಹುತ್ತ

Posted by:
Published: Friday, May 24, 2013, 12:16 [IST]
 

ಅಸಾದ್ ರೌಫ್ ಸುತ್ತ ಮತ್ತೆ ಅನುಮಾನದ ಹುತ್ತ
 

ನವದೆಹಲಿ, ಮೇ 24: ಪಾಕಿಸ್ತಾನದ ವಿವಾದಾತ್ಮಕ ಅಂಪೈರ್ ಅಸದ್ ರೌಫ್ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರಿಂದ ವಿಚಾರಣೆಗೆ ಒಳಪಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಮುಂಬರುವ ಚಾಂಪಿಯನ್ಸ್ ಟ್ರೋಫಿಯ ಮ್ಯಾಚ್ ಅಧಿಕಾರಿಗಳ ಪ್ಯಾನಲ್ ನಿಂದ ಹಿಂದಕ್ಕೆ ಕರೆಸಿಕೊಂಡಿದೆ.

ಜೂ.6 ರಿಂದ 12ರ ತನಕ ಇಂಗ್ಲೆಂಡಿನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಅಂಪೈರ್ ಗಳ ಪ್ಯಾನೆಲ್ ನಿಂದ ಅಸದ್ ರೌಫ್ ಅವರನ್ನು ಹೊರಗಿಡಲಾಗಿದೆ ಎಂದು ಐಸಿಸಿ ಪತ್ರಿಕಾ ಪ್ರಕಟಣೆ ನೀಡಿದೆ.

'ಸ್ಪಾಟ್ ಫಿಕ್ಸಿಂಗ್‌ಗೆ ಸಂಬಂಧಿಸಿ ಮುಂಬೈ ಪೊಲೀಸರು ಪಾಕ್ ಅಂಪೈರ್ ರೌಫ್ ವಿಚಾರಣೆ ನಡೆಸಲಿದ್ದಾರೆ ಎಂಬ ಮಾಧ್ಯಮಗಳ ವರದಿಯಾಧರಿಸಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.' ಎಂದು ಐಸಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೇವಿಡ್ ರಿಚರ್ಡ್ ಸನ್ ಹೇಳಿದ್ದಾರೆ.

ರೌಫ್ ಕಳೆದ ವರ್ಷ ಭಾರತದ ರೂಪದರ್ಶಿ ಲೀನಾ ಕಪೂರ್ ರಿಂದ ಲೈಂಗಿಕ ಕಿರುಕುಳ ಆರೋಪವನ್ನು ಎದುರಿಸಿದ್ದರು.[ಮುಂಬೈ ಮಾಡೆಲ್ ಜೊತೆ ಪಾಕ್ ಅಂಪೈರ್ ಕಾಮದಾಟ]

ರೌಫ್ ಕಾರ್ಡಿಫ್ ನಲ್ಲಿ ಜೂ.1 ರಂದು ನಡೆಯಲಿರುವ ಆಸ್ಟ್ರೇಲಿಯ ಹಾಗೂ ವೆಸ್ಟ್ ಇಂಡೀಸ್ ನಡುವಿನ ಅಭ್ಯಾಸ ಪಂದ್ಯ ಹಾಗೂ ಲೀಗ್ ಹಂತದಲ್ಲಿ ಜೂ.9 ರಂದು ಶ್ರೀಲಂಕಾ-ನ್ಯೂಝಿಲೆಂಡ್, ವೆಸ್ಟ್ ಇಂಡೀಸ್-ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದ ಅಂಪೈರ್ ಆಗಿ ಕಾರ್ಯನಿರ್ವಹಿಸಬೇಕಾಗಿತ್ತು.

ರೌಫ್ ಭಾರತದಲ್ಲಿ ನಡೆಯುತ್ತಿರುವ ಐಪಿಎಲ್ ನಲ್ಲಿಅಂಪೈರ್ ಕಾರ್ಯನಿರ್ವಹಿಸುತ್ತಿದ್ದು, ಐಸಿಸಿಯ ಈ ನಿರ್ಧಾರ ನಮ್ಮ ಗಮನಕ್ಕೆ ಬಂದಿಲ್ಲ ಎಂದು ಪಿಸಿಬಿ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

ದೆಹಲಿ ಪೊಲೀಸರೂ ಕೂಡ ಅಂಪೈರುಗಳ ಕೈವಾಡದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಶ್ರೀಶಾಂತ್ ದೂರವಾಣಿ ಸಂಭಾಷಣೆಯೊಂದು ಈ ಅನುಮಾನಕ್ಕೆ ಕಾರಣವಾಗಿದೆ. ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಇಲವೆನ್ ನಡುವಿನ ಮೇ 9ರ ಪಂದ್ಯ ಮುಗಿದ ನಂತರ ಶ್ರೀಶಾಂತ್ ಬುಕ್ಕಿಯೊಬ್ಬನೊಂದಿಗೆ ನಡೆಸಿದ ಟೆಲಿಫೋನ್ ಸಂಭಾಷಣೆ ರೌಫ್ ಅವರ ಮೇಲೆ ಅನುಮಾನಪಡುವಂತೆ ಮಾಡಿದೆ.

ಆದರೆ, ಸ್ಪಾಟ್ ಫಿಕ್ಸಿಂಗ್ ನಲ್ಲಿ ಅಂಪೈರ್ ಗಳು ಶಾಮೀಲಾಗಿದ್ದಾರಾ ಎಂಬ ಬಗ್ಗೆ ಪೊಲೀಸರು ಖಾತ್ರಿಯಾಗಿ ಹೇಳಿಲ್ಲ, ಕೇವಲ ಶಂಕೆ ವ್ಯಕ್ತಪಡಿಸಿದ್ದರು.

English summary
The International Cricket Council (ICC) on Thursday announced that it has withdrawn elite panel umpire Asad Rauf from the ICC Champions Trophy 2013 that will be staged in England and Wales from 6-23 June.
ಅಭಿಪ್ರಾಯ ಬರೆಯಿರಿ