Englishहिन्दीമലയാളംதமிழ்తెలుగు

ಚಿತ್ರಗಳಲ್ಲಿ : ದ್ರಾವಿಡ್ ತಂಡದ ವಿಜಯೋತ್ಸವ

Posted by:
Published: Thursday, May 23, 2013, 12:44 [IST]
 

ನವದೆಹಲಿ, ಮೇ 23: ಫಿರೋಜ್ ಷಾ ಕೋಟ್ಲಾ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 4 ವಿಕೆಟ್ ಗಳ ಜಯ ದಾಖಲಿಸಿದೆ.

ಈ ಗೆಲುವಿನೊಂದಿಗೆ ಮೇ 24ರಂದು ಕೋಲ್ಕತಾದ ಈಡನ್ ಗಾರ್ಡನ್ಸ್ ನಲ್ಲಿ ನಡೆಯಲಿರುವ ಐಪಿಎಲ್ ನ ಕ್ವಾಲಿಫಯರ್-2ರಲ್ಲಿ ಮುಂಬೈ ತಂಡದ ವಿರುದ್ಧ ಸೆಮಿಫೈನಲ್ ಪಂದ್ಯವಾಡಲಿದೆ.

ಗೆಲುವಿಗೆ 133 ರನ್ ಗಳ ಸುಲಭದ ಸವಾಲನ್ನು ಪಡೆದ ರಾಜಸ್ಥಾನ ತಂಡ ಹಲವು ಆತಂಕದ ಕ್ಷಣಗಳನ್ನು ಎದುರಿಸಿದರೂ ಬ್ರಾಡ್ ಹಾಡ್ಜ್ ಮತ್ತು ಜೇಮ್ಸ್ ಫಾಕ್ನೇರ್ 8ನೆ ವಿಕೆಟ್ ಗೆ ಮುರಿಯದ ಜೊತೆಯಾಟದಲ್ಲಿ 3.3 ಓವರ್ ಗಳಲ್ಲಿ 9.42 ಸರಾಸರಿಯಂತೆ 33 ರನ್ ಸೇರಿಸಿ ತಂಡಕ್ಕೆ ಗೆಲುವಿನ ನಗೆ ಒದಗಿಸಿದರು. 2008ರ ಚಾಂಪಿಯನ್

ಹಾಡ್ಜ್ ಔಟಾಗದೆ 54 ರನ್(29 ಎಸೆತ, 2 ಬೌಂಡರಿ, 5 ಸಿಕ್ಸರ್) ಮತ್ತು ಫಾಕ್ನೇರ್ ಔಟಾಗದೆ 11 ರನ್(11 ಎಸೆತ, 2 ಬೌಂಡರಿ) ಗಳಿಸಿ ರಾಹುಲ್ ಪಡೆ ಗೆಲುವಿಗೆ ಕಾರಣರಾದರು. ಸ್ಕೋರ್ ಕಾರ್ಡ್ ನೋಡಿ..

ರಾಹುಲ್ ಪಡೆ ವಿಜಯದ ಸಂಭ್ರಮ

ಆರ್ ಆರ್ ರನ್ ಚೇಸ್: ನಾಯಕ ರಾಹುಲ್ ದ್ರಾವಿಡ್ 10 ಎಸೆತಗಳಲ್ಲಿ 3 ಬೌಂಡರಿಗಳ ನೆರವಿನಲ್ಲಿ 12 ರನ್ ಗಳಿಸಿ ಇಶಾಂತ್ ಶರ್ಮಗೆ ವಿಕೆಟ್ ಒಪ್ಪಿಸಿದರು.

ಬಳಿಕ ಎರಡನೆ ವಿಕೆಟ್ ಗೆ ಶೇನ್ ವ್ಯಾಟ್ಸನ್ ಮತ್ತು ಅಜಿಂಕ್ಯ ರಹಾನೆ 37 ರನ್ ಸೇರಿಸಿ ತಂಡವನ್ನು ಆರಂಭಿಕ ಕುಸಿತದಿಂದ ಪಾರು ಮಾಡಿದರು. ವ್ಯಾಟ್ಸನ್ 24 ರನ್ (15ಎ, 5ಬೌ) ಗಳಿಸಿ ಕರಣ್ ಶರ್ಮ ಎಸೆತದಲ್ಲಿ ಡರೆನ್ ಸಮ್ಮಿಗೆ ಕ್ಯಾಚ್ ನೀಡಿದರು. ಆಗ ತಂಡದ ಸ್ಕೋರ್ 6.4 ಓವರ್‌ಗಳಲ್ಲಿ 50 ಆಗಿತ್ತು.

ರಾಹುಲ್ ಪಡೆ ವಿಜಯದ ಸಂಭ್ರಮ

18 ರನ್ ಬಾರಿಸಿ ರಹಾನೆ ಔಟಾದ ಮೇಲೆ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ(2) ಅವರು ಸಮ್ಮಿ ಎಸೆತದಲ್ಲಿ ಬೌಲ್ಡ್ ಆಗಿ ಆತಂಕಕ್ಕೆ ದೂಡಿದರು.

ಬಳಿಕ ಸ್ಯಾಮ್ಸನ್ ಮತ್ತು ಹಾಡ್ಜ್ ತಂಡವನ್ನು ಆಧರಿಸಿ 6ನೆ ವಿಕೆಟ್ ಗೆ 45 ರನ್ ಸೇರಿಸಿದರು. 10 ರನ್ ಗಳಿಸಿದ್ದ ಸಂಜು ಸ್ಯಾಮ್ಸನರನ್ನು ಡೇಲ್ ಸ್ಟೇಯ್ನ್ ಎಲ್‌ಬಿಡಬ್ಲು ಬಲೆಗೆ ಕೆಡವಿದರು.

 

ರಾಹುಲ್ ಪಡೆ ವಿಜಯದ ಸಂಭ್ರಮ

ಸಂತಸದ ನಗೆ ಬೀರಿದ ರಾಜಸ್ಥಾನ ರಾಯಲ್ಸ್ ಒಡೆಯರಾದ ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ

ರಾಹುಲ್ ಪಡೆ ವಿಜಯದ ಸಂಭ್ರಮ

19ನೆ ಓವರ್ ನ ಮುಕ್ತಾಯಕ್ಕೆ ರಾಜಸ್ಥಾನ ರಾಯಲ್ಸ್ ತಂಡ 6 ವಿಕೆಟ್ ನಷ್ಟದಲ್ಲಿ 123 ರನ್ ಮಾಡಿತ್ತು. 6 ಎಸೆತಗಳಲ್ಲಿ 11 ರನ್ ಗಳಿಸಬೇಕಾದ ಸವಾಲು ರಾಜಸ್ಥಾನಕ್ಕೆ ಎದುರಾಗಿತ್ತು. ಅಂತಿಮ ಓವರ್‌ನಲ್ಲಿ ಡರೆನ್ ಸಮ್ಮಿ ಎಸೆತಗಳನ್ನು ಸತತ ಸಿಕ್ಸರ್ ಗೆ ಅಟ್ಟಿದ ಹಾಡ್ಜ್ ತಂಡಕ್ಕೆ ರೋಚಕ ಗೆಲುವು ತಂದು ಕೊಟ್ಟರು.

ರಾಹುಲ್ ಪಡೆ ವಿಜಯದ ಸಂಭ್ರಮ

ಗೆಲುವಿನ ರುವಾರಿಗಳಾದ ಬ್ರಾಡ್ ಹಾಡ್ಜ್ ಹಾಗೂ ಫಾಕ್ನೇರ್ ಗೆಲುವಿನ ಸಂತಸದ ಕ್ಷಣ

ರಾಹುಲ್ ಪಡೆ ವಿಜಯದ ಸಂಭ್ರಮ

ಗೆಲುವಿನ ರುವಾರಿಗಳಾದ ಬ್ರಾಡ್ ಹಾಡ್ಜ್ ಹಾಗೂ ಫಾಕ್ನೇರ್

ರಾಹುಲ್ ಪಡೆ ವಿಜಯದ ಸಂಭ್ರಮ

ಗೆಲುವಿನ ರುವಾರಿಗಳಾದ ಬ್ರಾಡ್ ಹಾಡ್ಜ್ ಹಾಗೂ ಫಾಕ್ನೇರ್

ರಾಹುಲ್ ಪಡೆ ವಿಜಯದ ಸಂಭ್ರಮ

ಸ್ಯಾಮ್ಸನ್ ವಿಕೆಟ್ ಕಿತ್ತ ಸನ್ ರೈಸರ್ಸ್ ಬೌಲರ್ ಖುಷಿಯಲ್ಲಿ

ರಾಹುಲ್ ಪಡೆ ವಿಜಯದ ಸಂಭ್ರಮ

ಆಸ್ಟ್ರೇಲಿಯಾ ಆಟಗಾರ ರಾಜಸ್ಥಾನ್ ರಾಯಲ್ಸ್ ನ ಬ್ರಾಡ್ ಹಾಡ್ಜ್ ಸಿಕ್ಸ್ ಎತ್ತುವ ಭಂಗಿ

ರಾಹುಲ್ ಪಡೆ ವಿಜಯದ ಸಂಭ್ರಮ

ಗೆಲುವಿನ ರುವಾರಿ ಬ್ರಾಡ್ ಹಾಡ್ಜ್

ರಾಹುಲ್ ಪಡೆ ವಿಜಯದ ಸಂಭ್ರಮ

ಸನ್ ರೈಸರ್ಸ್ ಹೈದರಾಬಾದ್
20 ಓವರ್ ಗಳಲ್ಲಿ 132/7
(ಶಿಖರ್ ಧವನ್ 33, ವೈಟ್ 31, ಸಮ್ಮಿ 29, ಮಲಿಕ್ 2-14, ತ್ರಿವೇದಿ 1-18, ವ್ಯಾಟ್ಸನ್ 1-32, ಫಾಕ್ನೆರ್ 1-28)

ರಾಹುಲ್ ಪಡೆ ವಿಜಯದ ಸಂಭ್ರಮ

ಸನ್ ರೈಸರ್ಸ್ ತಂಡದ ಪರ ಆಲ್ ರೌಂಡರ್ ಡರೆನ್ ಸಮ್ಮಿ ಹೊರತುಪಡಿಸಿದರೆ ಇತರ ಯಾರಿಂದಲೂ ಸ್ಫೋಟಕ ಬ್ಯಾಟಿಂಗ್ ಕಂಡು ಬರಲಿಲ್ಲ. ಸಮ್ಮಿ ಮೂರು ಸಿಕ್ಸರ್ ಸಿಡಿಸಿ ತಂಡಕ್ಕೆ ಆಸರೆಯಾದರು

English summary
Rajasthan Royals beat Sunrisers Hyderabad by four wickets in the Indian Premier League (IPL) Eliminator here at the Ferozeshah Kotla Wednesday to enter Qualifier 2.
ಅಭಿಪ್ರಾಯ ಬರೆಯಿರಿ